ಸು ಫ್ರಮ್ ಸೋ ಬೆನ್ನಲ್ಲೇ ರಾಜ್ ಬಿ ಶೆಟ್ಟಿ ಲಕ್ ಚೇಂಜ್! – ಕರ್ನಾಟಕದಲ್ಲಿ ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಇಷ್ಟೊಂದಾ?

ರಾಜ್ ಬಿ. ಶೆಟ್ಟಿ ಅವರು ಸು ಫ್ರಮ್ ಸೋ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಗೆಲುವಿನ ನಗೆ ಕಂಡಿದೆ ಸು ಫ್ರಮ್ ಸೋ ಸಿನಿಮಾ. ಇದೀಗ ರಾಜ್ ಬಿ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ. ಯಾಕಂದ್ರೆ ದುಲ್ಖರ್ ನಿರ್ಮಾಣದ ಲೋಕಃ ಚಿತ್ರದ ಮೂಲಕ ಹಂಚಿಕೆಯಲ್ಲೂ ಶೆಟ್ರು ಯಶಸ್ಸು ಕಂಡಿದ್ದಾರೆ.
ಇದನ್ನೂ ಓದಿ: Ola , Uber ರೀತಿಯಲ್ಲೇ ಆ್ಯಂಬುಲೆನ್ಸ್ ಸೇವೆ – ಆರೋಗ್ಯ ಇಲಾಖೆಯಿಂದ ಮಾಸ್ಟರ್ ಪ್ಲ್ಯಾನ್
ಹೌದು ಸು ಫ್ರಮ್ ಸೋ ಸಿನಿಮಾ ಮಲಯಾಳಂನಲ್ಲಿ ರಿಲೀಸ್ ಮಾಡಲು ದುಲ್ಖರ್ ಸಲ್ಮಾನ್ ಸಹಾಯ ಮಾಡಿದ್ದರು. ಈಗ ದುಲ್ಖರ್ ನಿರ್ಮಾಣದ ‘ಲೋಕಃ’ ಸಿನಿಮಾನ ಕರ್ನಾಟಕದಲ್ಲಿ ರಾಜ್ ಅವರು ಹಂಚಿಕೆ ಮಾಡುತ್ತಿದ್ದಾರೆ. ‘ಲೋಕಃ’ ಸಿನಿಮಾ ಕೊಚ್ಚಿಯಲ್ಲಿ ಮಾತ್ರವಲ್ಲದೆ ಬೆಂಗಳೂರಿನಲ್ಲೂ ಸಾಕಷ್ಟು ದೊಡ್ಡ ಯಶಸ್ಸು ಕಂಡಿದೆ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಆರೇ ದಿನಕ್ಕೆ ಚಿತ್ರವು ಬಜೆಟ್ಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದೆ. ಹೀಗಾಗಿ, ಸಿನಿಮಾಗೆ ಕರ್ನಾಟಕದಿಂದಲೂ ದೊಡ್ಡ ಮಟ್ಟದಲ್ಲಿ ಹಣ ಹರಿದು ಹೋಗುತ್ತಿದೆ. ರಾಜ್ ಅವರು ಈ ಚಿತ್ರದ ಮೂಲಕ ಹಂಚಿಕೆಯಲ್ಲೂ ಗೆಲುವು ಕಂಡಿದ್ದಾರೆ.
‘ಲೋಕಃ’ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಬಜೆಟ್ 30 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಸಿನಿಮಾದ ಕಲೆಕ್ಷನ್ ಆರು ದಿನಕ್ಕೆ 38.95 ಕೋಟಿ ರೂಪಾಯಿ ಆಗಿದೆ. ವಾರದ ದಿನಗಳಲ್ಲೂ ಸಿನಿಮಾನ ಜನರು ಮುಗಿ ಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ.
ಇಷ್ಟು ವರ್ಷಗಳಲ್ಲಿ ಸೂಪರ್ ಹೀರೋ ಪಾತ್ರಗಳು ಎಂದಾಗ ಕೇವಲ ನಟರು ಮಾತ್ರ ಇರುತ್ತಿದ್ದರು. ಆದರೆ, ಇದೇ ಮೊದಲ ಭಾರಿಗೆ ನಟಿಯೊಬ್ಬರು ಸೂಪರ್ ಹೀರೋ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಲ್ಯಾಣಿ ಅವರ ಚಂದ್ರ ಪಾತ್ರ ಅನೇಕರಿಗೆ ಇಷ್ಟ ಆಗಿದೆ. ಈ ಸಿನಿಮಾ ಇನ್ನೂ ಕೆಲವು ವಾರ ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ನೋಡಿರಿ

