ವಿಪಕ್ಷಕ್ಕೆ ಮತ್ತೊಂದು ಶಾಕ್‌! – 33 ಸಂಸದರು ಲೋಕಸಭೆಯಿಂದ ಅಮಾನತು!

ವಿಪಕ್ಷಕ್ಕೆ ಮತ್ತೊಂದು ಶಾಕ್‌! – 33 ಸಂಸದರು ಲೋಕಸಭೆಯಿಂದ ಅಮಾನತು!

ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ವೈಫಲ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಂಸತ್‌ ಒಳಗೆ ಟಿಯರ್‌ ಗ್ಯಾಸ್‌ ದಾಳಿ ನಡೆಸಿದ್ದರು. ಈ ವಿಚಾರ ದೇಶದಾದ್ಯಂತ ಭಾರಿ ಚರ್ಚೆಯಾಗುತ್ತಿದ್ದು, ಲೋಕಸಭೆಯಲ್ಲೂ ಕೂಡ ಚರ್ಚೆಯಾಗುತ್ತಿದ್ದು, ವಿರೋಧ ಪಕ್ಷದ ಸಂಸದರು ಕಲಾಪದ ವೇಳೆ ಗದ್ದಲ ಎಬ್ಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ 33 ವಿಪಕ್ಷ ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಕಟ್ಟೆಚ್ಚರ! – 60 ವರ್ಷ ಮೇಲ್ಪಟ್ಟವರಿಗೆ ಇನ್ಮುಂದೆ ಮಾಸ್ಕ್ ಕಡ್ಡಾಯ

ಹೌದು, ಡಿಸೆಂಬರ್ 13 ರಂದು ಲೋಕಸಭಾ ಕಲಾಪದ ವೇಳೆ ಭದ್ರತಾ ಉಲ್ಲಂಘನೆ ನಡೆದ ನಂತರ ವಿಪಕ್ಷ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ  ಕಲಾಪಕ್ಕೆ ಅಡ್ಡಿಪಡಿಸಿವೆ.  ಪ್ರತಿಪಕ್ಷಗಳು ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದರೆ, ಹಲವರು ರಾಜೀನಾಮೆಗೆ ಒತ್ತಾಯಿಸಿದರು. ಸೋಮವಾರ ಕೂಡ ಕಲಾಪದಲ್ಲಿ ವಿರೋಧ ಪಕ್ಷದ ಸಂಸದರು ಗದ್ದಲವನ್ನು ಸೃಷ್ಟಿಸಿದ್ದಾರೆ.  ಲೋಕಸಭೆ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆಯ ವೇಳೆ ಸಂಸದರು ಸದನದೊಳಗೆ ಫಲಕಗಳನ್ನು ಪ್ರದರ್ಶಿಸಿದ್ದಕ್ಕೆ 33 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದುವರೆಗೆ 47 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಳಿಸಲಾಗಿದೆ.

ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ವಿರೋಧ ಪಕ್ಷದ ಸಂಸದರು ಗದ್ದಲವನ್ನು ಸೃಷ್ಟಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಗೌರವ್ ಗೊಗೊಯ್, ಎ ರಾಜಾ, ಕಲ್ಯಾಣ್ ಬ್ಯಾನರ್ಜಿ, ದಯಾನಿಧಿ ಮುರಸೋಲಿ ಮಾರನ್, ಕೆ ಜಯಕುಮಾರ್, ವಿಜಯ್ ವಸಂತ್, ಪ್ರತಿಮಾ ಮೊಂಡಲ್, ಸೌಗತ ರಾಯ್ ಮತ್ತು ಸತಾಬ್ದಿ ರಾಯ್ ಸೇರಿದಂತೆ ಇತರ  ನಾಯಕರು ಸೋಮವಾರ  ಅಮಾನತುಗೊಂಡಿದ್ದಾರೆ.

Shwetha M