ಕ್ಯೂನಲ್ಲಿ ನಿಲ್ಲದೇ ಮತದಾನಕ್ಕೆ ಮುಂದಾದ ಶಾಸಕ – ಕಪಾಳ ಮೋಕ್ಷ ಮಾಡಿದ ಮತದಾರ!

ಕ್ಯೂನಲ್ಲಿ ನಿಲ್ಲದೇ ಮತದಾನಕ್ಕೆ ಮುಂದಾದ ಶಾಸಕ – ಕಪಾಳ ಮೋಕ್ಷ ಮಾಡಿದ ಮತದಾರ!

ದೇಶದಾದ್ಯಂತ ಸೋಮವಾರ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಮತದಾನ ಮಾಡುವುದು ಎಲ್ಲರ ಕರ್ತವ್ಯ. ಗಣ್ಯರು ಕೂಡ ಸಾಮಾನ್ಯರಂತೆ ಬಂದು ಸರತಿ ಸಾಲಿನಲ್ಲಿ ನಿಂತು ವೋಟ್‌ ಹಾಕುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ವಿಧಾನಸಭೆ ಜೊತೆಗೆ ಲೋಕಸಭಾ ಚುನಾವಣೆಗೂ ಮತದಾನ ಬಿರುಸಿನಿಂದ ಸಾಗಿದೆ. ಈ ವೇಳೆ ವಿಲಕ್ಷಣಕಾರಿ ಘಟನೆಯೊಂದು ನಡೆದುಹೋಗಿದೆ. ಮತದಾನದ ಮಧ್ಯೆ ಸರತಿ ಸಾಲಿನಲ್ಲಿ ನಿಲ್ಲದೇ ಮತದಾನಕ್ಕೆ ಬಂದ ಶಾಸಕನನ್ನು ಪ್ರಶ್ನಿಸಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಮದುವೆ ಯಾವಾಗ? – ಕೊನೆಗೂ ಸಿಕ್ಕೇ ಬಿಡ್ತು ಉತ್ತರ!

ಈ ಘಟನೆ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಮತಗಟ್ಟೆಯಲ್ಲಿ ನಡೆದಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ಅವರ YSR ಕಾಂಗ್ರೆಸ್‌ ಪಕ್ಷದ MLA ಶಿವಕುಮಾರ್ ಮತಗಟ್ಟೆಗೆ ಬಂದಿದ್ದಾರೆ. ಮತಗಟ್ಟೆಯಲ್ಲಿ ಉದ್ದದ ಕ್ಯೂ ಇದ್ದ ಕಾರಣ ಮುಂದೆ ಹೋಗಲು ಕೇಳಿದ್ದಾರೆ. ಮತಗಟ್ಟೆಯಲ್ಲಿದ್ದ ಮತದಾರನಿಗೂ ಶಾಸಕನ ಮಧ್ಯೆ ವಾಗ್ವಾದವೇ ನಡೆದಿದೆ. ಮತಗಟ್ಟೆಯಲ್ಲಿ ಗಲಾಟೆ ಮಾಡಿದ YSRC ಪಕ್ಷದ MLA ಶಿವಕುಮಾರ್ ಮತದಾರನ ಮೇಲೆ ಹಲ್ಲೆ ಮಾಡಿದ್ದಾರೆ. ಮತದಾರನೂ ಸಹ ಕೋಪಗೊಂಡು ಶಾಸಕರ ಕಪಾಳಕ್ಕೆ ಬಾರಿಸಿದ್ದಾನೆ. ಕೂಡಲೇ ಇಬ್ಬರ ಮಧ್ಯೆ ಮಾರಾಮಾರಿ ನಡೆದಿದ್ದು, ಶಾಸಕರ ಬೆಂಬಲಿಗರು ಮತದಾರನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಆಂಧ್ರ ಪ್ರದೇಶದಲ್ಲಿ ಎಲೆಕ್ಷನ್ ನಡೆಯುತ್ತಿದ್ದು, YSRC ಪಕ್ಷದ ನಾಯಕ ಮಾಡಿರೋ ಹಲ್ಲೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಶಾಸಕರು ಹಾಗೂ ಬೆಂಬಲಿಗರು ಹಲ್ಲೆ ಮಾಡಿದ 10 ಸೆಕೆಂಡ್ ವಿಡಿಯೋ ನೋಡಿದ ಪ್ರತಿಪಕ್ಷ ಟಿಡಿಪಿ ನಾಯಕರು ಆಂಧ್ರ ಪ್ರದೇಶದಲ್ಲಿ ಜಗನ್ ಪಕ್ಷದ ಗೂಂಡಾಗಿರಿಗೆ ಇದೇ ಸಾಕ್ಷಿ ಎಂದು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

Shwetha M