ದಿಲ್ಲಿಯಲ್ಲಿ ಏನ್ ಆಗ್ಬೇಕೋ, ಎಲ್ಲ ತೀರ್ಮಾನ ಆಗಿದೆ – ಸಿಎಂ ಬದಲಾವಣೆ ಬಗ್ಗೆ ಸುಳಿವು ನೀಡಿದ್ರಾ ಡಿಕೆ ಶಿವಕುಮಾರ್?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸದೃಢವಾಗಿದ್ರೂ ಸಿಎಂ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ದಿಲ್ಲಿಯಲ್ಲಿ ಏನ್ ಆಗ್ಬೇಕೋ, ಎಲ್ಲ ತೀರ್ಮಾನ ಆಗಿದೆ, ಸ್ವಲ್ಪ ದಿನ ಕಾಯಿರಿ ಅಂತಾ ಡಿಕೆಶಿ ಒಕ್ಕಲಿಗ ನಾಯಕರಿಗೆ ಹೇಳಿದ್ದಾರೆ. ಈ ಮೂಲಕ ಸಿಎಂ ಬದಲಾವಣೆಯ ಸುಳಿವನ್ನು ಡಿಕೆ ಶಿವಕುಮಾರ್ ನೀಡಿದ್ರಾ ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: 5 ಗ್ಯಾರಂಟಿಯಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದ ಹೆಚ್‌ಡಿಕೆ – ಹೇಳಿಕೆ ವಿರುದ್ಧ ಕ್ರಮ ಕೈಗೊಂಡ ಮಹಿಳಾ ಆಯೋಗ
ಮೈಸೂರಿನಲ್ಲಿ ಆಯೋಜಿಸಿದ್ದ ಒಕ್ಕಲಿಗರ ಸಭೆಯಲ್ಲಿ ಭಾನುವಾರ ಮಾತನಾಡಿದ ಡಿಕೆಶಿ, ಮಂಡ್ಯ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾದರು. ಹೆಚ್.ಡಿ. ದೇವೇಗೌಡ ಅವರು ದೇಶದ ಪ್ರಧಾನಿಯಾದರು. ನಾನು ನಿಮ್ಮೂರಿನ ಅಳಿಯ, ನನಗೂ ದೊಡ್ಡ ಜವಾಬ್ದಾರಿ ಇದೆ. ಇಲ್ಲಿ ರಕ್ಷಣೆ ಇಲ್ಲ, ನಾಯಕತ್ವದ ಸಮಸ್ಯೆ ಇದೆ. ಸ್ವಲ್ಪ ದಿನ ಅಷ್ಟೆ. ನೀವು ತಲೆಕೆಡಿಸಿಕೊಳ್ಳಲು ಹೋಗಬೇಡಿ, ನೀವು ಎಲ್ಲರೂ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗರ ಮತಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು. ಜೊತೆಗೆ ಮುಂದಿನ ದಿನಗಳಲ್ಲಿ ಒಕ್ಕಲಿಗ ಸಮಾಜದ ನಾಯಕ ಮತ್ತು ಮುಖ್ಯಮಂತ್ರಿಯಾಗುವ ಸುಳಿವನ್ನು ಡಿಕೆಶಿ ನೀಡಿದ್ದಾರೆ.
ನಾಯಕತ್ವ ವಿಚಾರದಲ್ಲಿ ನಮ್ಮ ಸಮಾಜದವರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಈಗ ಸಚಿವ ವೆಂಕಟೇಶ್, ಹರೀಶ್ಗೌಡ ಮುಂದಾಳತ್ವ ವಹಿಸಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಪುಟ್ಟರಾಜುಗೆ ಟಿಕೆಟ್ ಕೊಡುತ್ತೇನೆಂದು ಚಾಕಲೇಟ್ ಕೊಟ್ಟರು. ನಾವೇನು ಮಾಡಲ್ಲ, ಬಿಜೆಪಿಗರೇ ಅವರನ್ನು ಮುಗಿಸುತ್ತಾರೆ. ಒಕ್ಕಲಿಗರು ದರಿದ್ರ ಮಾತಾಡ್ತಾರೆಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಅಂತಾ ಹೇಳಿದ್ದಾರೆ.
ನಾನು ಅಪ್ಪ-ಅಮ್ಮನಿಗೆ ಹುಟ್ಟಿಲ್ಲ ಅಂಥ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ನನ್ನ ತಾಯಿಯನ್ನೇ ಕರೆದುಕೊಂಡು ಹೋಗಿ ಅವರ ಮುಂದೆ ಕೂರಿಸಿದೆ. ಆಗ ಕ್ಷಮೆ ಕೇಳಿದರು. ಬಾಯಿ ಇದೆ ಅಂಥ ಏನು ಬೇಕಾದ್ರೂ ಮಾತಾಡಬಹುದಾ? ನಾನು ಸಮಾಜಕ್ಕೆ ಹೆದರುತ್ತೇನೆ, ಇಂಥವರಿಗೆ ಹೆದರಲ್ಲ. ಇಂಥವರಿಗೆ ಹೆದರುವ ಮಗ ಅಲ್ಲ ಎಂದ ಎಂದು ವಾಗ್ದಾಳಿ ಮಾಡಿದರು.
ಹಾಸನದಲ್ಲಿ ಜನರು ರೊಚ್ಚಿಗೆದ್ದಿದ್ದಾರೆ. ಹೆಚ್ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ ರೇವಣ್ಣ ಗೆಲಲ್ಲು ಸಾಧ್ಯವೇ ಇಲ್ಲ. ಚಾಮರಾಜನಗರದಲ್ಲು ನಾವೇ ಗೆಲ್ಲುತ್ತೇವೆ. ಮಂಡ್ಯದಲ್ಲಿ ಸಾಮಾನ್ಯ ಕುಟುಂಬದಿಂದ ಬಂದವನಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ನಾನು ವಿಷ ಹಾಕಿದೆ ಅಂತ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ, ನಮ್ಮ ಸಮಾಜದ ಜನ ಬೈತಾರೇ ಅಂಥ ನಾನು ಸುಮ್ಮನಿದ್ದೆ. ದೆಹಲಿಯಲ್ಲಿ ಏನು ಆಗಬೇಕೋ ಎಲ್ಲ ಆಗಿದೆ. ಚಲುವರಾಯಸ್ವಾಮಿ, ಕೃಷ್ಣಭೈರೇಗೌಡ ನನ್ನ ಬಳಿ ಚರ್ಚಿಸಿದರು. ನೀವು ಹೇಳುವುದು ಬೇಡ ನಿಮ್ಮ ನ್ಯಾಯ ನಡೆಯಲ್ಲ. ದೆಹಲಿಯಲ್ಲಿ ಎಲ್ಲವೂ ನಡೆಯಬೇಕು ಎಂದು ಹೇಳಿದ್ದೇನೆ. ಇದರ ಬಗ್ಗೆ ಈಗ ಚರ್ಚೆ ಬೇಡ ಎಂದಿದ್ದೇನೆ. ಇದು 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ ಅಂತಾ ಡಿಕೆಶಿ ಹೇಳಿದ್ದಾರೆ.