ಎಲೆಕ್ಷನ್‌ ರಿಸಲ್ಟ್‌ ಹೊರ ಬಿದ್ದ ಬೆನ್ನಲ್ಲೇ ಎನ್‌ಡಿಎ ಮಹತ್ವದ ಸಭೆ – ಮೋದಿ ಪ್ರಮಾಣ ವಚನ ಸ್ವೀಕಾರ ಯಾವಾಗ?

ಎಲೆಕ್ಷನ್‌ ರಿಸಲ್ಟ್‌ ಹೊರ ಬಿದ್ದ ಬೆನ್ನಲ್ಲೇ ಎನ್‌ಡಿಎ ಮಹತ್ವದ ಸಭೆ – ಮೋದಿ ಪ್ರಮಾಣ ವಚನ ಸ್ವೀಕಾರ ಯಾವಾಗ?

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರ ಯಾರೂ ಊಹಿಸದ ತೀರ್ಪು ನೀಡಿದ್ದು, 400 ಪಾರ್ ನಿರೀಕ್ಷೆಯಲ್ಲಿದ್ದ ಎನ್‌ಡಿಎಗೆ ಬಿಗ್ ಶಾಕ್ ಉಂಟಾಗಿದೆ. ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸರ್ಕಾರ ರಚನೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭಗೊಂಡಿದೆ. ಈ ಹಿನ್ನೆಲೆ ಬುಧವಾರ ದೆಹಲಿಯಲ್ಲಿ ಎನ್‌ಡಿಎ  ಮೈತ್ರಿಕೂಟದ ಮಹತ್ವದ ಸಭೆ ನಡೆಯಲಿದೆ.

ಇದನ್ನೂ ಓದಿ: ಲೋಕಸಭಾ ಫಲಿತಾಂಶದ ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ ಮನೆ ಮೇಲೆ ಅಟ್ಯಾಕ್‌ !

ಎನ್‌ಡಿಎ ಮೈತ್ರಿಕೂಟ ಬುಧವಾರ ಮಹತ್ವದ ಸಭೆ ನಡೆಸಲಿದೆ. ಸಂಜೆ 4 ಗಂಟೆಯ ವೇಳೆಗೆ ಸಭೆ ನಡೆಯಲಿದ್ದು, ಎಲ್ಲಾ ಮೈತ್ರಿ ನಾಯಕರನ್ನು ಆಹ್ವಾನಿಸಲಾಗಿದೆ. ಅಲ್ಲದೇ ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಸರ್ಕಾರ ರಚನೆ, ಮುಂದಿನ ರಣತಂತ್ರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಇನ್ನೊಂದೆಡೆ ರಾಷ್ಟ್ರಪತಿ ಭವನದ ಸರ್ಕ್ಯೂಟ್-1ಕ್ಕೆ ಇಂದಿನಿಂದ ಜೂ.9ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿರುವುದಾಗಿ ರಾಷ್ಟ್ರತಿ ಭವನ ತಿಳಿಸಿದೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಿದ್ಧತೆಯ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೂ.9ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Shwetha M