ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ಗಳಿಗೆ ಫುಲ್‌ ಡಿಮ್ಯಾಂಡ್‌ – ಅಬ್ಬಬ್ಬಾ  ಬಾಡಿಗೆ ಇಷ್ಟೊಂದಾ?

ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ಗಳಿಗೆ ಫುಲ್‌ ಡಿಮ್ಯಾಂಡ್‌ – ಅಬ್ಬಬ್ಬಾ  ಬಾಡಿಗೆ ಇಷ್ಟೊಂದಾ?

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಸಕಲ ಸಿದ್ದತೆ ಮಾಡಿಕೊಳ್ಳುತ್ತಿವೆ. ಅಭ್ಯರ್ಥಿಗಳ ಪ್ರಚಾರಕ್ಕಾಗಿ ಸ್ಟಾರ್‌ಗಳನನ್ನು ರಾಜಕೀಯ ಪಕ್ಷಗಳು ಕರೆಸಿಕೊಳ್ಳುತ್ತಿವೆ. ಸ್ಟಾರ್ ಪ್ರಚಾರಕರಿಗೆ ಪ್ರಚಾರದ ಓಡಾಟಕ್ಕೆ  ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಇದೀಗ ಹೆಲಿಕಾಪ್ಟರ್ ಗಳಿಗೆ ಫುಲ್‌ ಡಿಮ್ಯಾಂಡ್‌ ಶುರುವಾಗಿದೆ.

ಹೌದು, ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪ್ರಚಾರದ ಕಾವು ಜೋರಾಗೇ ಇದೆ. ಎಲ್ಲಾ ರಾಜ್ಯದ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿವೆ.  ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಸಹ ಪ್ರಧಾನಿ ಮೋದಿ ಅವರು ಕೂಡ ಪ್ರಚಾರ ನಡೆಸಲಿದ್ದಾರೆ. ಇದೀಗ ತೆಲಂಗಾಣದಲ್ಲಿ ಮುಂಬೈ ಮೂಲದ ವಿಮಾನಯಾನ ಸಂಸ್ಥೆ ಫ್ಲೈಯಿಂಗ್ ಬರ್ಡ್ಸ್​​ಗೆ ಪುಲ್‌ ಡಿಮ್ಯಾಂಡ್‌ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬಾಡಿಗೆ ದರವನ್ನು ಹೆಚ್ಚಳ ಮಾಡಿದೆ.

ಇದನ್ನೂ ಓದಿ:ಶ್ವಾನ ಪ್ರಿಯರೇ ಹುಷಾರ್‌.. – ಇನ್ಮುಂದೆ ಪಿಟ್​ಬುಲ್​, ಬುಲ್​ ಡಾಗ್​ ಸೇರಿ 23 ತಳಿಗಳನ್ನು ಸಾಕಂಗಿಲ್ಲ!

ಈ ಸಂಸ್ಥೆಯು 2019 ರಲ್ಲಿ ಅವಳಿ ಎಂಜಿನ್ ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 55,000 ರೂ.ನಿಂದ 1.3 ಲಕ್ಷ ರೂ. ವರೆಗೆ ಬಾಡಿಗೆ ನಿಗದಿಪಡಿಸಿತ್ತು. ಸಿಂಗಲ್ ಇಂಜಿನ್ ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 1.50 ಲಕ್ಷ ರೂ.ನಿಂದ 1.75 ಲಕ್ಷ ರೂ. ಬೆಲೆ ನಿಗದಿಪಡಿಸಿತ್ತು. ಈ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಾಡಿಗೆ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಬೇಡಿಕೆ ಶೇ 40ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಲಿಕಾಪ್ಟರ್‌ಗಳು ಗ್ರಾಮೀಣ ಪ್ರದೇಶಗಳಿಗೆ ತ್ವರಿತವಾಗಿ ತಲುಪುವ ಸಾಮರ್ಥ್ಯದಿಂದಾಗಿ ಹೆಚ್ಚು ಜನಪ್ರಿಯವಾಗುವ ನಿರೀಕ್ಷೆಯಿದೆ. ಚಾರ್ಟರ್ಡ್ ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಗಳಿಗೆ ಗಂಟೆಯ ಬಾಡಿಯಲ್ಲಿ ವ್ಯತ್ಯಾಸವಿದೆ. ಚಾರ್ಟರ್ಡ್ ಏರ್‌ಕ್ರಾಫ್ಟ್‌ಗಳಿಗೆ ಗಂಟೆಗೆ 4.5 ಲಕ್ಷದಿಂದ 5.25 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 1.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

1.20 ಲಕ್ಷ ಕೋಟಿ ರೂ. ವಹಿವಾಟು ನಿರೀಕ್ಷೆ!

ಈ ಬೇಡಿಕೆಯಿಂದಾಗಿ, ಅನೇಕರು ಈಗಾಗಲೇ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಸದ್ಯ ನಾನ್ ಶೆಡ್ಯೂಲ್ಡ್ ಆಪರೇಟರ್ಸ್​ ಪರ್ಮಿಟ್ ಹೊಂದಿರುವ ಸಂಸ್ಥೆಗಳು 3 ರಿಂದ 37 ಆಸನ ಸಾಮರ್ಥ್ಯದೊಂದಿಗೆ 450 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತವೆ. ಮುಂಬರುವ ಚುನಾವಣೆಯಲ್ಲಿ ಹೆಲಿಕಾಪ್ಟರ್​ / ಚಾರ್ಟರ್ಡ್ ವಿಮಾನ ವಹಿವಾಟು 1.20 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆಯಿದೆ.

2019-20ರ ಹಣಕಾಸು ವರ್ಷಕ್ಕೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಆಡಳಿತಾರೂಢ ಬಿಜೆಪಿ ಹೆಲಿಕಾಪ್ಟರ್ ಅಥವಾ ವಿಮಾನ ಸೇವೆಗಳಿಗೆ 250 ಕೋಟಿ ರೂ.ವರೆಗೆ ಖರ್ಚು ಮಾಡಿದೆ ಎಂದು ಹೇಳಿಕೊಂಡಿತ್ತು. ಕಾಂಗ್ರೆಸ್ ಪಕ್ಷವು ಆ ವರ್ಷ ಚುನಾವಣಾ ಪ್ರಚಾರಕ್ಕಾಗಿ 126 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಹೇಳಿತ್ತು.

Shwetha M