ಲೋಕಸಭೆಗೆ 4ನೇ ಹಂತದ ಮತದಾನ – ಸಾಮಾನ್ಯರಂತೆ ಬಂದು ಮತ ಚಲಾಯಿಸಿದ ಸಿನಿಮಾ ತಾರೆಯರು
ದೇಶದಲ್ಲಿ ಸೋಮವಾರ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವೆಡೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ತೆಲುಗು ಸ್ಟಾರ್ಸ್, ಗಣ್ಯರು ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ. ವೋಟ್ ಮಾಡಿದ ಬಳಿಕ ಫೋಟೋಗೆ ಪೋಸ್ ಕೊಟ್ಟು ಮತದಾನದಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಪೆನ್ಡ್ರೈವ್ ಕೇಸ್ ನಲ್ಲಿ ಪ್ರೀತಂಗೌಡ ಆಪ್ತರು ಆರೆಸ್ಟ್! – ದಳಪತಿಗಳಿಗೆ ಮತ್ತಷ್ಟು ಸಂಕಷ್ಟ
ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಿನಿಮಾ ಸ್ಟಾರ್ಸ್ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ವೋಟ್ ಮಾಡುತ್ತಿದ್ದಾರೆ. ‘ಆರ್ಆರ್ಆರ್’ ಸ್ಟಾರ್ ನಿರ್ದೇಶಕ ರಾಜಮೌಳಿ ಅವರು ಪತ್ನಿ ರಮಾ ಮತ್ತು ಮಗನ ಜೊತೆ ಬಂದು ವೋಟ್ ಮಾಡಿದ್ದಾರೆ. ದೇಶಕ್ಕೆ ನಾನು ಜವಾಬ್ದಾರಿಯುಳ್ಳವರು. ನಾವು ಕೇರ್ ಮಾಡುತ್ತೇವೆ ಎನ್ನುವುದನ್ನು ತೋರಿಸಿ. ಮತದಾರರಿಗೆ ಬಂದು ವೋಟ್ ಮಾಡಿ ಎಂದು ರಾಜಮೌಳಿ ಮನವಿ ಮಾಡಿದ್ದರು.
ಇನ್ನು ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ನಟ ಅಲ್ಲು ಅರ್ಜುನ್ ಮತ್ತು ನಟ ಜ್ಯೂ.ಎನ್ಟಿಆರ್ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಪತ್ನಿ ಸುರೇಖಾ ಮತ್ತು ಪುತ್ರಿ ಸುಶ್ಮಿತಾ ಅವರೊಂದಿಗೆ ಬಂದು ವೋಟ್ ಮಾಡಿದ್ದಾರೆ.
ನಟ, ರಾಜಕಾರಣಿ ಪವನ್ ಕಲ್ಯಾಣ್ , ಶ್ರೀಕಾಂತ್, ಸಂಗೀತ ನಿರ್ದೇಶಕ ಕೀರವಾಣಿ, ಮಂಚು ಮನೋಜ್ ಸೇರಿದಂತೆ ಅನೇಕು ಮತದಾನ ಮಾಡಿದ್ದಾರೆ. ಮತ ಚಲಾಯಿಸುವಂತೆ ಜನತೆಗೆ ಕರೆ ನೀಡಿದ್ದಾರೆ.