ಮೋದಿಗೆ ಖೆಡ್ಡಾ ತೋಡಿತಾ INDIA? – ಜೂನ್ 1ಕ್ಕೆ ಸಭೆ.. ಅಜೆಂಡಾ ಏನು?
3ನೇ ಸಲ ಗೆದ್ರೂ ನಮೋಗೆ ಸಂಕಷ್ಟ?
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಗದ್ದುಗೆ ಯಾರ ಪಾಲಾಗಲಿದೆ ಅನ್ನೋದನ್ನ ನೋಡೋಕೆ ಇಡೀ ಜಗತ್ತೇ ಕಾದು ಕುಳಿತಿದೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಮುಂದಿನ ವಾರದಲ್ಲಿ ಉತ್ತರ ಸಿಗಲಿದೆ. ಎನ್ಡಿಎ ನಾಯಕರು ಹ್ಯಾಟ್ರಿಕ್ ಬಾರಿಸೋ ಕನಸಿನಲ್ಲಿದ್ದಾರೆ. ಮೂರನೇ ಬಾರಿಗೆ ನರೇಂದ್ರ ಮೋದಿಯೇ ಪ್ರಧಾನಿ ಎಂಬ ಘೋಷಣೆ ಮೊಳಗಿಸಿದ್ದಾರೆ. ಮತ್ತೊಂದೆಡೆ ಇಂಡಿಯಾ ಒಕ್ಕೂಟ ಮಾತ್ರ ತಾವೇ ಗೆಲ್ಲೋ ವಿಶ್ವಾಸದಲ್ಲಿದ್ದಾರೆ. ಇದೇ ಕಾರಣಕ್ಕೆ ಜೂನ್ 1ರಂದು ಇಂಡಿಯಾ ಬ್ಲಾಕ್‌ನ ನಾಯಕರು ದೆಹಲಿಯಲ್ಲಿ ಸಭೆ ಸೇರಲು ನಿರ್ಧರಿಸಿದ್ದಾರೆ. ಲೋಕಸಭೆ ಚುನಾವಣೆಯ ಕಡೆಯ ಹಂತದ ಮತದಾನದ ದಿನವೇ ಈ ಸಭೆ ನಡೆಸುತ್ತಿರುವುದು ಮಹತ್ವ ಪಡೆದುಕೊಂಡಿದೆ.. ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ಈ ಬಾರಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದೆ.. ಇದೇ ವಿಶ್ವಾಸದಲ್ಲಿ ಜೂನ್ 1ರಂದು ಸಭೆ ನಡಸಲಿದ್ದಾರೆ..
ಸಭೆಯ ಉದ್ದೇಶ ಏನೇನು?
ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ನಡೆಸುವುದು ಜೂನ್ 1ರ ಸಭೆಯ ಮುಖ್ಯ ಅಜೆಂಡಾ.. ಜೊತೆಗೆ ಲೋಕಸಭೆ ಫಲಿತಾಂಶದ ನಂತರ ಒಗ್ಗಟ್ಟು ಮುಂದುವರಿಸುವ ವಿಶ್ವಾಸವನ್ನು ಪರಸ್ಪರ ಮೂಡಿಸುವ ಉದ್ದೇಶದಿಂದಲೇ ಈ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ.. ಅಲ್ಲದೆ ಜೂನ್ 2ರಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜೈಲಿಗೆ ಶರಣಾಗತರಾಗಬೇಕಿರುವುದರಿಂದ ಅವರ ಉಪಸ್ಥಿತಿಯಲ್ಲೇ ಮೊದಲು ಸಭೆ ನಡೆಸಲು ಈ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.. ಯಾಕಂದ್ರೆ ಈ ಬಾರಿ 300ಕ್ಕಿಂತ ಹೆಚ್ಚು ಸೀಟು ಗೆಲ್ಲುವ ವಿಶ್ವಾಸದಲ್ಲಿ ಇಂಡಿಯಾ ಬ್ಲಾಕ್ ಇದೆ.. ಇದೇ ಕಾರಣದಿಂದ ಒಂದು ವೇಳೆ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಯಾರು ನೇತೃತ್ವ ವಹಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಯಿದೆ.. ಇನ್ನು ಲೋಕಸಭೆ ಚುನಾವಣೆಯ ಅನುಭವಗಳ ಬಗ್ಗೆ ನಾಯಕರ ವಿಚಾರ ವಿಮರ್ಶೆ ನಡೆಯಲಿದೆ.. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಒಗ್ಗಟ್ಟಿನ ಹೋರಾಟ ಮುಂದುವರಿಕೆಗೆ ತೀರ್ಮಾನಿಸಬಹುದು.. ಅಲ್ಲದೆ ಒಂದು ವೇಳೆ NDAಗೆ ಬಹುಮತಕ್ಕೆ ಅಗತ್ಯವಿರುವ ಸೀಟುಗಳು ಬರದೇ ಇದ್ದಾಗ ಇಂಡಿಯಾ ಬ್ಲಾಕ್ ನ ಸದಸ್ಯ ಪಕ್ಷಗಳು ಮೋದಿ ಕಡೆಗೆ ವಾಲದಂತೆ ಎಚ್ಚರಿಕೆವಹಿಸುವುದೂ ಈ ಸಭೆಯ ಉದ್ದೇಶವಾಗಿದೆ..
ಹೀಗೆ ಇಂಡಿಯಾ ಬ್ಲಾಕ್‌ನ ಸದಸ್ಯ ಪಕ್ಷಗಳು ಜೂನ್ 1ರಂದು ಸಭೆ ನಡೆಸಲಿವೆ. ಆದರೆ ಈ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿರುವ ಟಿಎಂಸಿಯ ಮಮತಾ ಬ್ಯಾನರ್ಜಿ ಭಾಗಿಯಾಗುತ್ತಾರಾ ಎನ್ನುವ ಕುತೂಹಲವಿದೆ..