ರಾಹುಲ್ಗೆ ಭಾರತ ವಿರೋಧಿಗಳ ನಂಟು!? – ದೇಶದ್ರೋಹಿ ಆದ್ರಾ ವಿಪಕ್ಷ ನಾಯಕ?
ಶತ್ರುಗಳ ತಾಳಕ್ಕೆ ಕುಣಿಯುತ್ತಿದ್ದಾರಾ ‘ರಾಗಾ’?
ಸಂಸತ್ನಲ್ಲಿ ಚಳಿಗಾಲ ಅದಿವೇಷನ ಭರದಿಂದ ನಡೆಯುತ್ತಿದೆ. 25 ರಿಂದ ಶುರುವಾಗಿರೋ ಲೋಕಸಭೆ ಅಧಿವೇಷನ ಗದ್ದಲ ಗಲಾಟೆಯಲ್ಲೇ ಮುಗಿಯುತ್ತಿದೆ. ಪ್ರತಿಭಟನೆ, ಗಲಾಟೆಗೆ ಸಂಸತ್ ಚಳಿಗಾಲದ ಅಧಿವೇಷನ ಬಳಿಯುತ್ತಿದ್ದು, ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆ. ಈ ನಡುವೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೊಡ್ಡ ಆರೋಪ ಕೇಳಿ ಬಂದಿದ್ದು, ಕಾಂಗ್ರೆಸ್ ಬಿಜೆಪಿ ಜಟಪಟಿಗೆ ಕಾರಣವಾಗಿದೆ. ಹಾಗಿದ್ರೆ ರಾಹುಲ್ ಗಾಂಧಿ ವಿರುದ್ಧ ಕೇಳಿ ಬಂದಿರೋ ಆರೋಪವೇನು? ಯಾವ ವಿಚಾರಕ್ಕೆ ಸಂಸತ್ ನಲ್ಲಿ ಕೋಲಾಹಲ ಸೃಷ್ಟಿ ಆಯ್ತು ಅನ್ನೋ ಮಾಹಿತಿ ಇಲ್ಲಿದೆ.
ಗುರುವಾರ ನಡೆದ ಕಲಾಪದಲ್ಲಿ ರಾಹುಲ್ ಗಾಂಧಿ ಅವರಿಗೆ ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ಜತೆ ನಂಟು ಇದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ದುಬೆ ಆರೋಪ ಮಾಡುತ್ತಿದ್ದಂತೆ ಕಾಂಗ್ರೆಸ್-ಬಿಜೆಪಿ ನಡುವೆ ದೊಡ್ಡ ಜಟಾಪಟಿಗೆ ಕಾರಣವಾಯಿತು. ದುಬೆ ಹೇಳಿಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಉದ್ಯಮಿ ಗೌತಮ್ ಅದಾನಿ ಅವರ ‘ಮೆಗಾ ಭ್ರಷ್ಟಾಚಾರ’ವನ್ನು ಬಯಲಿಗೆಳೆಯುವವರ ತೇಜೋವಧೆ ಮಾಡುವ ಕೆಲಸವನ್ನು ‘ಅದಾನಿ ಏಜೆಂಟ’ರಿಗೆ ವಹಿಸಲಾಗಿದೆ ಎಂದು ತಿರುಗೇಟು ನೀಡಿದೆ.
ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಸಂಸತ್ ಕಲಾಪದ ಹಳಿತಪ್ಪಿಸಲು ಪ್ರಯತ್ನಿಸಿವೆ. ರಾಹುಲ್ ಗಾಂಧಿ ಅವರಿಗೆ ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ಜತೆ ನಂಟು ಇದೆ. ಒಸಿಸಿಆರ್ಪಿ ಹಾಗೂ ಕಾಂಗ್ರೆಸ್ ಪಕ್ಷ ಪರಸ್ಪರ ಸಂಪರ್ಕ ಸಾಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸಿವೆ. ಸರ್ಕಾರವನ್ನು ಹಳಿತಪ್ಪಿಸಲು ಪ್ರತಿಪಕ್ಷಗಳು ನಿರಂತರ ಪ್ರಯತ್ನಗಳನ್ನು ಮಾಡುತ್ತವೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆ, ಹಿಂಡನ್ಬರ್ಗ್ ವರದಿ, ಪೆಗಾಸಸ್ ವಿವಾದ ಸೇರಿದಂತೆ ಒಸಿಸಿಆರ್ಪಿ ಪ್ರಕಟಿಸಿದ ವಿವಿಧ ವಿಷಯಗಳನ್ನು ಎತ್ತಿಕೊಂಡು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ಪ್ರಯತ್ನಿಸಿದೆ ಆರೋಪಿಸಿದ್ರು. ವಿರೋಧ ಪಕ್ಷಗಳ ಹಲವು ಮುಖಂಡರು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ. ಆ ವರದಿಗಳು ಭಾರತದಲ್ಲಿ ಸಂಸತ್ ಅಧಿವೇಶನ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮುನ್ನ ಪ್ರಕಟಗೊಂಡಿವೆ ಎಂದು ಹೇಳಿದರು. ಹಾಗೇ ರಾಹುಲ್ ಗಾಂಧಿ ಯುಎಸ್ನಲ್ಲಿ ನಡೆಸಿದ ಮೀಟಿಂಗ್ ಬಗ್ಗೆ ಕೂಡ ದುಬೆ ಪ್ರಶ್ನೆಗಳನ್ನು ಎತ್ತಿದ್ರು. ಭಾರತ್ ಜೋಡೋ ಚಳವಳಿಯಲ್ಲಿ ಭಾಗವಹಿಸಿದ್ದ ಓಪನ್ ಸೊಸೈಟಿ ಫೌಂಡೇಶನ್ನ ಸಲೀಲ್ ಶೆಟ್ಟಿ ಅವರೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ರಾಹುಲ್ಗೆ ಪ್ರಶ್ನೆಗಳನ್ನ ಕೇಳುತ್ತೇನೆ. ಸಲೀಲ್ ಶೆಟ್ಟಿ ಸೊರೊಸ್ ಫೌಂಡೇಶನ್ ಉದ್ಯೋಗಿ ಅಲ್ಲವೇ?, ಅವರು ಭಾರತ್ ಜೋಡೋ ಚಳವಳಿಗೆ ಹಣ ನೀಡಿದ್ರಾ?, ವಿದೇಶದಲ್ಲಿರುವ ಭಾರತದ ವಿರೋಧಿಗಳನ್ನ ರಾಹುಲ್ ಗಾಂಧಿಯವರು ಬೇಟಿ ಮಾಡಿ ದೇಶ ವಿರೋಧಿ ಚುಟುವಟಿಕೆಗಳನ್ನ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಬಾಂಗ್ಲಾದೇಶದ ನರಮೇಧದ ಹೊಣೆ ಹೊತ್ತಿರುವರನ್ನ, ಅಮೆರಿಕಾದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನು ವಿರೋಧಿಸಿದವರನ್ನ, ಖಲಿಸ್ತಾನ್ ರಚಿಸಲು ಬಯಸುವವರನ್ನು ರಾಹುಲ್ ಭೇಟಿ ಮಾಡಿದ್ದೀರಿ, ಅವರು ಕಾಶ್ಮೀರವನ್ನು ಪ್ರತ್ಯೇಕಿಸಲು ಬಯಸುತ್ತಾರೆ ಎಂದು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ನಿಶಿಕಾಂತ್ ದುಬೆ ವಾಗ್ದಾಳಿ ನಡೆಸಿದ್ರು. ಭಾರತವನ್ನ ವಿರೋಧ ಮಾಡುವ ವಿದೇಶ ಪ್ರಭಾವಿಗಳೊಂದಿದೆ ರಾಹುಲ್ ಗಾಂಧಿ ಹೊಂದಾಣಿಕೆ ಮಾಡಿದ್ದಾರೆ ಅನ್ನೋ ಆರೋಪವನ್ನ ನಿಶಿಕಾಂತ್ ದುಬೆ ಮಾಡಿದ್ದಾರೆ. OCCRP ಜಾರ್ಜ್ ಸೊರೊಸ್ ಅವರ ಪ್ರತಿಷ್ಠಾನ.. ಇದ್ರ ಜೊತೆ ರಾಹುಲ್ ಗಾಂಧಿ ಚೆನ್ನಾಗಿದ್ದು, OCCRP ನಿರ್ದೇಶನ ಮಾಡಿದ್ರೆ, ರಾಹುಲ್ ಅನುಸರಿಸ್ತಾರೆ ಅನ್ನೋ ಆರೋಪ ಕೇಳಿ ಬಂದಿದೆ. ಸೊರೊಸ್ ಭಾರತಕ್ಕೆ ಕೆಟ್ಟದ್ದನ್ನ ಬಯಸುತ್ತೇನೆ, ಅದರಂತೆ ರಾಹುಲ್ ಗಾಂಧಿ ಕೂಡ ಭಾರತಕ್ಕೆ ಕೆಟ್ಟದ್ದನ್ನ ಬಯಸುತ್ತಾನೆ ಅನ್ನೋ ಆರೋಪ ಬಿಜೆಪಿ ಪಾಳಯದಲ್ಲಿ ಕೇಳಿ ಬರ್ತಿದ್ದು. ಅದಾನಿಯನ್ನ ಸೇಫ್ ಮಾಡೋಕೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದೆ ಅಂತಾ ವಿರೋಧ ಪಕ್ಷ ಆಕ್ರೋಶ ಹೊರ ಹಾಕುತ್ತಿವೆ. ಎರಡು ಪಕ್ಷದ ಜಾಟಾಪಟಿಯಿಂದ ಸಂಸತ್ ಅಧಿವೇಶನ ದಿನನಿತ್ಯ ಮುಂದೂಡಿಕೆಯಾಗುತ್ತಿದೆ.