ಪ್ರಧಾನಿಯ ಮನ್ ಕಿ ಬಾತ್ಗೆ ಲೋಗೋ, ಜಿಂಗಲ್ ರೆಡಿ ಮಾಡಿ – 1 ಲಕ್ಷ ಬಹುಮಾನ ಗೆಲ್ಲಿ..!
ಡಿಫ್ರೆಂಟ್ ಲೋಗೋ ಹಾಗೂ ಮಸ್ತ್ ಆಗಿರೋ ಜಿಂಗಲ್ ರೆಡಿ ಮಾಡಿ 1 ಲಕ್ಷ ಬಹುಮಾನ ಗೆಲ್ಲೋ ಸುವರ್ಣಾವಕಾಶ ಸಾರ್ವಜನಿಕರಿಗಿದೆ. ಅದ್ರಲ್ಲೂ ನಿಮ್ಮ ಈ ಟ್ಯಾಲೆಂಟ್ ಇಡೀ ದೇಶದಲ್ಲಿ ರಾರಾಜಿಸಲಿದೆ ಅನ್ನೋದು ಮತ್ತೊಂದು ವಿಶೇಷ. ಹೌದು. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 100ನೇ ಆವೃತ್ತಿ ವಿಶೇಷಮಯವಾಗಿರಲಿದೆ. ಕಾರ್ಯಕ್ರಮಕ್ಕಾಗಿ ಆಕಾಶವಾಣಿ ವಿಶೇಷ ವಿನ್ಯಾಸದ ಲೋಗೋ ಮತ್ತು ಜಿಂಗಲ್ಗಳನ್ನ ಆಹ್ವಾನಿಸಿದೆ.
ಮನ್ ಕಿ ಬಾತ್ನ 97ನೇ ಆವೃತ್ತಿ ಜನವರಿ 29ರಂದು ನಡೆಯಲಿದೆ. 100ನೇ ಆವೃತ್ತಿಯು ಏಪ್ರಿಲ್ ತಿಂಗಳ ಕೊನೆಯ ಭಾನುವಾರ ಅಂದ್ರೆ ಏಪ್ರಿಲ್ 30ರಂದು ನಡೆಯಲಿದೆ. ಮನ್ ಕಿ ಬಾತ್ ಮೂಲಕ ಮೋದಿ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದು, ಕಾರ್ಯಕ್ರಮವೂ ಸಂಚಿಕೆಯಿಂದ ಸಂಚಿಕೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.
ಇದನ್ನೂ ಓದಿ : ಸ್ಕೂಟರ್ ಸಮೇತ ಸವಾರರನ್ನ ಎಳೆದೊಯ್ದ ಕಾರು – ವಿದ್ಯಾರ್ಥಿಗಳ ಎಣ್ಣೆ ‘ಮತ್ತು’.. ಎಂಥಾ ಎಡವಟ್ಟು..!?
ಭಾರತ ಸರ್ಕಾರದ mygov.in ಜಾಲತಾಣದಲ್ಲಿ ಲೋಗೋ ಮತ್ತು ಜಿಂಗಲ್ಗೆ ಸಂಬಂಧಿಸಿದ ತಾಂತ್ರಿಕ ವಿವರಗಳನ್ನು ನೀಡಲಾಗಿದೆ. ಲೋಗೋಗಳನ್ನ JPEG/ JPG/ PNG/ SVG ಫಾರ್ಮೆಟ್ಗಳಲ್ಲಿ ಅಪ್ಲೋಡ್ ಮಾಡಬಹುದು. ಬಣ್ಣಗಳಲ್ಲಿ ವಿನ್ಯಾಸ ಮಾಡಬೇಕು. 5X5 ಸೆಂ.ಮೀ ನಿಂದ, 60X60 ಸೆಂ.ಮೀ ಅಳತೆಯಲ್ಲಿ, ಪೋರ್ಟೇಟ್ (ಉದ್ದ) ಅಥವಾ ಲ್ಯಾಂಡ್ಸ್ಕೇಪ್ (ಅಡ್ಡ) ಆಕಾರದಲ್ಲಿ ಲೋಗೋಗಳನ್ನು ವಿನ್ಯಾಸ ಮಾಡಬಹುದಾಗಿದೆ. ಇವು ವೆಬ್ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವಂತಿರಬೇಕು. ಪತ್ರಿಕಾ ಹೇಳಿಕೆಗಳು, ಲೇಖನ ಸಾಮಗ್ರಿಗಳು, ಸ್ಮರಣಿಕೆಗಳು ಸೇರಿದಂತೆ ಇತರ ಪ್ರಚಾರ ಸಾಮಗ್ರಿಗಳಲ್ಲಿ ಸುಲಭವಾಗಿ ಬಳಸುವ ರೀತಿಯಲ್ಲಿರಬೇಕು. ಲೋಗೋಗಳು ಕನಿಷ್ಠ 300 ಡಿಪಿಐ ರೆಸಲ್ಯೂಶನ್ ಹೊಂದಿರಬೇಕು ಎಂದು ಭಾರತ ಸರ್ಕಾರವು ವಿವರಗಳನ್ನು ನೀಡಿದೆ.
ಸದಾ ನೆನಪಿನಲ್ಲಿ ಉಳಿಯುವ, ಮಾಧುರ್ಯಭರಿತ, ಕೇಳಿದವರ ಹೃದಯಗೆಲ್ಲುವ ಜಿಂಗಲ್ಗಳನ್ನು ನೀಡಬೇಕು ಎಂದು mygov.in ವೆಬ್ಸೈಟ್ ಮೂಲಕ ಮನವಿ ಮಾಡಲಾಗಿದೆ. ಜಿಂಗಲ್ಗಳಿಗೆ 25ರಿಂದ 30 ಪದಗಳ ಸ್ಕ್ರಿಪ್ಟ್ ಇರಲೇಬೇಕು. ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವ ಪದಗಳನ್ನು ಬಳಸಬೇಕು. ಸೌಂಡ್ಕ್ಲೌಡ್, ಯುಟ್ಯೂಬ್, ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್ನಂಥ ಯಾವುದೇ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಆಡಿಯೊ ಫೈಲ್ ಅಪ್ಲೋಡ್ ಮಾಡಿ ಅದರ ಲಿಂಕ್ ಶೇರ್ ಮಾಡಬೇಕು. ವಿನ್ಯಾಸ ಸಿದ್ಧವಾದ ಲೋಗೋಗಳನ್ನು ಸಲ್ಲಿಸಲು ಫೆ.1 ಕೊನೆಯ ದಿನವಾಗಿದ್ದು, ವಿಜೇತರಿಗೆ ₹ 1 ಲಕ್ಷ ಬಹುಮಾನ ಸಿಗಲಿದೆ. ಅತ್ಯುತ್ತಮ ಜಿಂಗಲ್ಗೆ ₹ 11,000 ಬಹುಮಾನ ಸಿಗಲಿದೆ.