ಮಲಗಿದ್ದ ಮಗುವಿನ ಬಾಯಿಗೆ ಬಿದ್ದ ಹಲ್ಲಿ – ಉಸಿರುಗಟ್ಟಿ ಸಾವನ್ನಪ್ಪಿದ 3 ವರ್ಷದ ಬಾಲಕ

ಮಲಗಿದ್ದ ಮಗುವಿನ ಬಾಯಿಗೆ ಬಿದ್ದ ಹಲ್ಲಿ – ಉಸಿರುಗಟ್ಟಿ ಸಾವನ್ನಪ್ಪಿದ 3 ವರ್ಷದ ಬಾಲಕ

ಅಡುಗೆಗೆ ಹಲ್ಲಿ ಬಿದ್ದು ಅದನ್ನ ಊಟ ಮಾಡಿ ಅಸ್ವಸ್ಥರಾಗಿ ಜನ ಆಸ್ಪತ್ರೆ ಪಾಲಾಗಿರೋದನ್ನ ಕೇಳಿದ್ದೇವೆ. ಆದರೆ ಇಲ್ಲಿ ಮಲಗಿದ್ದ ಮಗುವಿನ ಬಾಯಿಗೆ ಹಲ್ಲಿ ಬಿದ್ದು ಮಗುವೇ ಸಾವನ್ನಪ್ಪಿದೆ. ಛತ್ತೀಸ್‌ಗಢದ ಕೋಬ್ರಾದಲ್ಲಿ ಘಟನೆ ನಡೆದಿದ್ದು, ಮಗುವಿನ ಬಾಯಿಗೆ ಹಲ್ಲಿ ನುಗ್ಗಿ 3 ವರ್ಷದ ಮುಗ್ಧ ಮಗು ಮೃತಪಟ್ಟಿದೆ. ಮಲಗಿದ್ದ ಮೂರು ವರ್ಷದ ಬಾಲಕನ ಬಾಯಿಗೆ ಹಲ್ಲಿ ಬಿದ್ದಿದೆ. ಉಸಿರುಗಟ್ಟಿ ಮಗು ಸಾವನ್ನಪ್ಪಿದೆ.

ಇದನ್ನೂ ಓದಿ : ಬಲೆಗೆ ಬಿದ್ದ ಭರ್ಜರಿ ಡಾಲ್ಫಿನ್ ಫಿಶ್ – ಮನೆಗೆ ಹೋಗಿ ಡಾಲ್ಫಿನ್ ತಿಂದವರು ಅರೆಸ್ಟ್..!

ಛತ್ತೀಸ್ ಗಢದ ಕೋಬ್ರಾದಲ್ಲಿ ರಾಜ್‌ಕುಮಾರ್ ಚಂಡೆ ಎಂಬುವವರ ಕುಟುಂಬವು ನಾಗಿನಬಂಡಾ ಪ್ರದೇಶದಲ್ಲಿ ವಾಸಿಸುತ್ತಿದೆ. ಇವರ ಮೂರನೇ ಮಗ ಜಗದೀಶ್​​ ಮೃತ ಪಟ್ಟ ಮಗು. ಘಟನೆಯ ವೇಳೆ ಜಗದೀಶ್ ಮಲಗಿದ್ದ ಎನ್ನಲಾಗಿದ್ದು, ಈ ವೇಳೆ ಆತನ ತಾಯಿ (Mother) ಮನೆಗೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ನಂತರ ಮಲಗಿದ್ದ ಜಗದೀಶ ಮಗನನ್ನು ನೋಡಿದಾಗ ಆತ ನಿಶ್ಚಲನಾಗಿ ಬಿದ್ದಿದ್ದ. ಕೂಡಲೇ ಅನುಮಾನಗೊಂಡ ತಾಯಿಯು ಬಾಲಕನ (Boy) ಹತ್ತಿರ ಬಂದಾಗ ಆತನ ಬಾಯಲ್ಲಿ ಹಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಗಾಬರಿಗೊಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದು, ಸ್ಥಳೀಯರು ಬಂದು ನೋಡಿದಾಗ ಮಗು ಅದಾಗಲೇ ಮೃತಪಟ್ಟಿರುವುದು (Death) ಕಂಡು ಬಂದಿದೆ.

ಸಾವಿನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಾಲಕ ಹಲ್ಲಿ ನುಗ್ಗಿ ಸತ್ತಿದ್ದಾನೆಯೇ ಅಥವಾ ಉಸಿರುಕಟ್ಟುವಿಕೆಯಿಂದ ಮೃತಪಟ್ಟಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ (Enquiry) ನಡೆಸುತ್ತಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಆದರೆ, ಹಲ್ಲಿಯ ವಿಷದಿಂದ (Poison) ಬಾಲಕ ಸಾವನ್ನಪ್ಪಿರುವ ಸಾಧ್ಯತೆ ಇಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಹಲ್ಲಿ ಉಸಿರಾಟಕ್ಕೆ ಅಡ್ಡಿಯಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಸತ್ಯ ಏನೆಂಬುದು ತಿಳಿದು ಬರಬೇಕಿದೆ.

 

suddiyaana