ಆಹಾ.. ಜ್ಯೂಸ್ ಎಂದು ಕುಡಿಯೋ ಮುನ್ನ ಎಚ್ಚರ! – ಥಮ್ಸ್ ಅಪ್ ಸಾಫ್ಟ್ ಡ್ರಿಂಕ್ನಲ್ಲಿ ಸತ್ತ ಹಲ್ಲಿ ಪತ್ತೆ!

ಇತ್ತೀಚೆಗೆ ಕಳಪೆ ಗುಣಮಟ್ಟದ ಆಹಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲ ಕಂಪನಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಹಸಿವು ನೀಗಿಸುವ ಆಹಾರದಲ್ಲಿ ಹುಳಗಳು ಪತ್ತೆಯಾಗುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ. ಇದೀಗ ಇಲ್ಲೊಂದು ಕಡೆ ಸೀಲ್ ಮಾಡಿದ ಥಮ್ಸ್ ಅಪ್ ಸಾಫ್ಟ್ ಡ್ರಿಂಕ್ ನಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ.
ಇದನ್ನೂ ಓದಿ: ಕಲ್ಲಂಗಡಿ ಸೇವಿಸಿದ ಬಾಲಕ ದುರಂತ ಅಂತ್ಯ! – ಮೂವರು ಮಕ್ಕಳ ಸ್ಥಿತಿ ಗಂಭೀರ!
ಹೌದು, ಇತ್ತೀಚೆಗೆ ತಿನ್ನುವ ಆಹಾರದಲ್ಲಿ ಜಿರಳೆ, ಹುಳ ಪತ್ತೆಯಾಗುತ್ತಿರುವ ಘಟನೆ ಪದೇ ಪದೆ ವರದಿಯಾಗುತ್ತಿವೆ. ಇದೀಗ ಸೀಲ್ ಮಾಡಿದ ಥಮ್ಸ್ ಅಪ್ ಸಾಫ್ಟ್ ಡ್ರಿಂಕ್ ನಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ. ಬಾಟಲ್ನಲ್ಲಿ ಹಲ್ಲಿ ಇರುವ ಬಗ್ಗೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ಜ್ಯೂಸ್ ಬಾಟಲ್ನಲ್ಲಿ ಹಲ್ಲಿ ಪತ್ತೆಯಾಗಿದ್ದು ಎಲ್ಲಿ ಅನ್ನೋ ವಿಚಾರ ರಿವೀಲ್ ಆಗಿಲ್ಲ. ಇದೀಗ ವಿಡಿಯೋ ನೋಡಿದ ಜನರು ಕಂಪನಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಥಮ್ಸ್ ಅಪ್ ಬಾಟಲಿ ಖರೀದಿ ಮಾಡಿದ್ದಾಗ ಬಾಟಲಿಯೊಳಗೆ ಏನೋ ವಸ್ತು ಇರುವುದು ಪತ್ತೆ ಮಾಡಿದ್ದಾರೆ. ಕೂಡಲೇ ಅವರು ಬಾಟಲಿಯನ್ನು ತೆರೆದು ಪಾನೀಯವನ್ನು ಪಾತ್ರೆಗೆ ಸುರಿದಾಗ,ಅದರಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ. ಗ್ರಾಹಕರು ಕಂಪನಿ ಅಥವಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಯಾವುದೇ ಅಧಿಕೃತ ದೂರು ಸಲ್ಲಿಸಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ.

ನೋಡಿರಿ

