7 ಪ್ಲೇಯರ್ಸ್ ಗೆ RCB ಗೇಟ್ ಪಾಸ್ – ಲಿಯಾಮ್, ರಸಿಕ್, ಮಯಾಂಕ್ ಔಟ್?
ಮಿನಿ ಹರಾಜಿನಲ್ಲಿ ಉಳಿಯೋರು ಯಾರು?

18ನೇ ಸೀಸನ್ ಐಪಿಎಲ್ನಲ್ಲಿ ಆರ್‌ಸಿಬಿ ತಂಡ ಕಂಪ್ಲೀಟ್ ಪ್ಯಾಕೇಜ್ನಂತಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಡೆಪ್ತ್ ಇತ್ತು. ಹೀಗಾಗೇ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ರು. ಇದೀಗ ನೆಕ್ಸ್ಟ್ ಸೀಸನ್ಗೂ ಕೂಡ ಟ್ರೋಫಿ ಟಾರ್ಗೆಟ್ನೊಂದಿಗೆ ಕಣಕ್ಕಿಳಿಯಲಿದ್ದಾರೆ. ಬಟ್ ಟೀಂನಲ್ಲಿ ಒಂದಷ್ಟು ಬದಲಾವಣೆಗಳಂತೂ ಗ್ಯಾರಂಟಿ ಇರಲಿದೆ. ಅದ್ರಲ್ಲೂ ಈ 7 ಆಟಗಾರರು ತಂಡದಿಂದ ಹೊರಬೀಳೋದು ಪಕ್ಕಾ.
ಇದನ್ನೂ ಓದಿ : 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುತ್ತಾ ಸೌತ್ ಆಫ್ರಿಕಾ – ಚೋಕರ್ಸ್ ಹಣೆಪಟ್ಟಿ ಕಳಚುತ್ತಾ?
2025ರ ಐಪಿಎಲ್ಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಮೂವರನ್ನ ರಿಟೇನ್ ಮಾಡಿಕೊಂಡಿತ್ತು. ಹಾಗೇ 19 ಆಟಗಾರರನ್ನ ಹರಾಜಿನಲ್ಲಿ ಖರೀದಿ ಮಾಡಿತ್ತು. ಈ ಮೂಲಕ ತಂಡದಲ್ಲಿ ಒಟ್ಟು 22 ಪ್ಲೇಯರ್ಸ್ ಇದ್ದಾರೆ. ಆರ್‌ಸಿಬಿ ಪರ ಈ ಸೀಸನ್ನಲ್ಲಿ ಕಣಕ್ಕಿಳಿದಿರೋ ಪ್ರತಿಯೊಬ್ಬ ಪ್ಲೇಯರ್ ಕೂಡ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ತಂಡದ ಸಕ್ಸಸ್ ಜರ್ನಿಯ ಭಾಗವಾಗಿದ್ದಾರೆ. ಸೋ ಆಲ್ಮೋಸ್ಟ್ ಇದೇ ಪ್ಲೇಯರ್ಸ್ 2026ರ ಸೀಸನ್ನಲ್ಲೂ ಕಂಟಿನ್ಯೂ ಆಗ್ತಾರೆ. ಹೀಗಿದ್ರೂ ತಂಡದಲ್ಲಿರೋ ಆರು ಜನರನ್ನ ಫ್ರಾಂಚೈಸಿ ಕೈಬಿಡೋ ಸಾಧ್ಯತೆ ಇದೆ. ಅಂದ್ರೆ ಐಪಿಎಲ್ 2026 ರ ಮಿನಿ ಹರಾಜಿಗೂ ಮುನ್ನ ಕೆಲವ್ರನ್ನ ರಿಲೀಸ್ ಮಾಡಬಹುದು.
ಆರ್ ಸಿಬಿಗೆ ಹೊರೆಯಾದ್ರಾ ಲಿಯಾಮ್ ಲಿವಿಂಗ್ ಸ್ಟನ್?
ಹೌದು. ಆರ್ ಸಿಬಿ ಆಟಗಾರರ ಖರೀದಿಯೇ ಹಲವರ ಹುಬ್ಬೇರಿಸಿತ್ತು. ಸ್ಟಾರ್ಡಮ್ಗೆ ಇಂಪಾರ್ಟೆನ್ಸ್ ಕೊಡದೆ ಬಿಡ್ ಮಾಡಿದ್ರು. ಆ ಬಳಿಕ ಫ್ರಾಂಚೈಸಿಯ ಸ್ಟ್ರಾಟರ್ಜಿ ಹೇಗಿತ್ತು ಅನ್ನೋದು ಇಡೀ ಜಗತ್ತಿಗೇ ಗೊತ್ತಾಗಿತ್ತು. ಬಟ್ ಹೀಗಿದ್ರೂ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಆಟಗಾರ ಲಿಯಾಮ್ ಲಿವಿಂಗ್ ಸ್ಟೋನ್ ಕಡೆಯಿಂದ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಪರ್ಫಾಮೆನ್ಸ್ ಬಂದಿಲ್ಲ. ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಲೀಕರು ಬರೋಬ್ಬರಿ 8.75 ಕೋಟಿ ರೂಪಾಯಿಗೆ ಖರೀದಿ ಮಾಡಿದ್ರು. ಬಿಗ್ ಹಿಟ್ಟರ್ ಅನ್ನೋ ಕಾರಣಕ್ಕೆ ದೊಡ್ಡ ಮೊತ್ತವನ್ನೂ ನೀಡಿದ್ರು. ಆದ್ರೆ 10 ಪಂದ್ಯಗಳಲ್ಲಿ ಕಣಕ್ಕಿಳಿದ ಲಿವಿಂಗ್‌ಸ್ಟೋನ್ ಕೇವರ 16ರ ಸರಾಸರಿಯಲ್ಲಿ 112 ರನ್ ಮಾತ್ರ ಕಲೆ ಹಾಕಿದ್ದಾರೆ. ಅದೂ ಅಲ್ದೇ ಎರಡೇ ವಿಕೆಟ್ ಬೇಟೆಯಾಡಿದ್ದಾರೆ. ಇವ್ರ ಈ ಕಳಪೆ ಪ್ರದರ್ಶನದಿಂದಾಗಿಯೇ ಟೂರ್ನಮೆಂಟ್ ಮಧ್ಯದಲ್ಲಿ ಲಿವಿಂಗ್‌ಸ್ಟೋನ್ ಅವರನ್ನು RCB ಯ ಪ್ಲೇಯಿಂಗ್ XI ನಿಂದ ಕೈಬಿಡಲಾಗಿತ್ತು. ಆದ್ರೆ ನಾಕೌಟ್ ಮ್ಯಾಚ್ಗಳ ಟೈಮಲ್ಲಿ ಟಿಮ್ ಡೇವಿಡ್ ಗಾಯಗೊಂಡು ತಂಡದಿಂದ ಹೊರ ಬಿದ್ದ ಕಾರಣಕ್ಕೆ ಅವ್ರ ಬದಲಿಗೆ ಮತ್ತೆ ತಂಡಕ್ಕೆ ರೀ ಜಾಯ್ನ್ ಮಾಡಿಸಿದ್ರು. ಹೀಗಿದ್ರೂ ಯಾವುದೇ ಹೆಲ್ಪ್ ಆಗ್ಲಿಲ್ಲ. ಹೀಗಾಗಿ ಮುಂದಿನ ಸೀಸನ್ಗೆ ಇವ್ರನ್ನ ಕೈಬಿಟ್ಟು ಮತ್ತೊಬ್ಬ ಆಲ್ರೌಂಡರ್ರನ್ನ ತಂಡಕ್ಕೆ ಕರೆಸಿಕೊಳ್ಳಬಹುದು. ಇನ್ನು ಐಪಿಎಲ್ನಲ್ಲಿ ಇದುವರೆಗೆ 49 ಐಪಿಎಲ್ ಪಂದ್ಯಗಳಲ್ಲಿ 26.27 ಸರಾಸರಿ ಮತ್ತು 158.76 ಸ್ಟ್ರೈಕ್ ರೇಟ್‌ನೊಂದಿಗೆ 1051 ರನ್ ಗಳಿಸಿದ್ದಾರೆ. ಹಾಗೇ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮಯಾಂಕ್ ರನ್ನು ರಿಲೀಸ್ ಮಾಡುತ್ತಾ ಬೆಂಗಳೂರು?
ಆರ್‌ಸಿಬಿ ಫ್ರಾಂಚೈಸಿ ಕನ್ನಡಿಗ ದೇವದತ್ ಪಡಿಕ್ಕಲ್ ಅವ್ರನ್ನ 2 ಕೋಟಿ ರೂಪಾಯಿಗೆ ತಂಡಕ್ಕೆ ಸೇರಿಸಿಕೊಂಡಿತ್ತು. ತಂಡದ ಪರ 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಪಡಿಕ್ಕಲ್ ಎರಡು ಅರ್ಧಶತಕಗಳ ಸಹಾಯದಿಂದ 247 ರನ್ ಗಳಿಸಿದರು. ಆದ್ರೆ ಇಂಜುರಿ ಕಾರಣದಿಂದ ನಂತ್ರದ ಪಂದ್ಯಗಳಿಂದ ರೂಲ್ಡ್ ಔಟ್ ಆಗಿದ್ರು. ಈ ವೇಳೆ ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ರನ್ನ ಬದಲಿ ಆಟಗಾರನಾಗಿ ಸೇರಿಸಿಕೊಂಡಿತ್ತು. ಆರ್‌ಸಿಬಿ ಪರ ಕೇವಲ 4 ನಾಲ್ಕು ಪಂದ್ಯಗಳನ್ನು ಆಡಿದ ಮಯಾಂಕ್ 94 ರನ್ ಗಳಿಸಿದ್ದಾರೆ. ಆದ್ರೆ ಮುಂದಿನ ಸೀಸನ್ನಲ್ಲಿ ದೇವದತ್ ಪಡಿಕ್ಕಲ್ ತಂಡಕ್ಕೆ ಮರಳುವ ನಿರೀಕ್ಷೆಯಿರುವುದರಿಂದ, ಮಯಾಂಕ್ ಅವರನ್ನು ರಿಲೀಸ್ ಮಾಡಬಹುದು. ಐಪಿಎಲ್ನಲ್ಲಿ ಹಲವು ಫ್ರಾಂಚೈಸಿಗಳಿಗಾಗಿ ಆಡಿರುವ ಮಯಾಂಕ್ ಅಗರ್ವಾಲ್, ಇದುವರೆಗೆ 131 ಐಪಿಎಲ್ ಪಂದ್ಯಗಳಲ್ಲಿ 22.96 ಸರಾಸರಿ ಮತ್ತು 133.52 ಸ್ಟ್ರೈಕ್ ರೇಟ್‌ನೊಂದಿಗೆ 2756 ರನ್ ಗಳಿಸಿದ್ದಾರೆ.
6 ಕೋಟಿ ಮೊತ್ತದ ರಸಿಕ್ ಸಲಾಂ ದಾರ್ ಗೂ ಗೇಟ್ ಪಾಸ್?
ಇನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ರಸಿಕ್ ಸಲಾಂ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 6 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಬಟ್ ರಸಿಕ್ ಆರ್‌ಸಿಬಿ ಪರ ಆಡಿದ್ದೇ 2 ಮ್ಯಾಚ್. ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಇತರ ವೇಗಿಗಳಿಂದಾಗಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವುದು ಸಾಧ್ಯವಾಗ್ಲಿಲ್ಲ. 2 ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅಲ್ಲದೆ ಕೇವಲ 1 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಅತ್ತ ಮಿನಿ ಹರಾಜಿಗೆ ಪರ್ಸ್ ಮೊತ್ತ ಹೆಚ್ಚಿಸಲು ರಾಸಿಖ್ ಅವರನ್ನು ಸಹ ಆರ್‌ಸಿಬಿ ಕೈ ಬಿಡಲಿದೆ. ಅಷ್ಟೊಂದು ಹಣ ಕೊಟ್ಟು ಬೆಂಚ್ ಕಾಯಿಸೋ ಬದಲು ತಂಡದಿಂದಲೇ ರಿಲೀಸ್ ಮಾಡಿ ಕಡಿಮೆ ಮೊತ್ತಕ್ಕೆ ಬೇರೆ ವೇಗಿಯನ್ನ ಆಯ್ಕೆ ಮಾಡೋಕೆ ಫ್ರಾಂಚೈಸಿ ಪ್ಲ್ಯಾನ್ ಮಾಡ್ತಿದೆ. ಐಪಿಎಲ್ ವೃತ್ತಿಜೀವನದಲ್ಲಿ ಯುವ ವೇಗಿ ರಸಿಕ್ ಸಲಾಂ ದಾರ್ ನಾಲ್ಕು ಫ್ರಾಂಚೈಸಿಗಳಿಗೆ ಆಡಿದ್ದಾರೆ. ಇದುವರೆಗೆ 13 ಐಪಿಎಲ್ ಪಂದ್ಯಗಳಲ್ಲಿ 40.90 ಸರಾಸರಿ ಮತ್ತು 10.62 ರ ಎಕಾನಮಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಗದವರೂ ಹೊರ ಬೀಳ್ತಾರಾ?
ಅಷ್ಟೇ ಅಲ್ದೇ ಆರ್‌ಸಿಬಿ ಟೀಮ್ನಲ್ಲಿದ್ದು ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆಯದವ್ರಿಗೂ ತಂಡದಿಂದ ಹೊರ ಬೀಳೋ ಆತಂಕ ಇದೆ. ಈ ಬಾರಿಯ ಐಪಿಎಲ್ನಲ್ಲಿ ಅಭಿನಂದನ್ ಸಿಂಗ್ ಆರ್‌ಸಿಬಿ ಪರ ಒಂದೇ ಒಂದು ಪಂದ್ಯವಾಡಿಲ್ಲ. ಅದರಲ್ಲೂ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಮುಂಬರುವ ಸೀಸನ್ಗಾಗಿ ಅಭಿನಂದನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಹಾಗೇ ಆರ್‌ಸಿಬಿ ತಂಡದಲ್ಲಿರುವ ಯುವ ಆಲ್‌ರೌಂಡರ್ ಮೋಹಿತ್ ರಾಥಿ ಕೂಡ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅತ್ತ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಮೋಹಿತ್ಗೆ ಸ್ಥಾನ ಲಭಿಸಿಲ್ಲ. ಹೀಗಾಗಿ ಅವರನ್ನು ಸಹ ತಂಡದಿಂದ ಕೈ ಬಿಡಬಹುದು.
ಬದಲಿ ಆಟಗಾರರಿಗೂ ಟಾಟಾ ಬೈ ಬೈ!
ಆರ್‌ಸಿಬಿ ಟೀಂ ಪ್ಲೇಆಫ್ಗೆ ಎಂಟ್ರಿ ಪಡೆದ ವೇಳೆ ತಂಡದ ಕೆಲ ಪ್ಲೇಯರ್ಸ್ ನ್ಯಾಷನಲ್ ಡ್ಯೂಟಿಗಾಗಿ ತಮ್ಮ ದೇಶಗಳಿಗೆ ವಾಪಸ್ ಆಗಿದ್ರು. ಸೋ ಇಂಥಾ ಟೈಮಲ್ಲಿ ಅವ್ರ ಬದಲಿಗೆ ಬೇರೆ ಆಟಗಾರರನ್ನ ಖರೀದಿ ಮಾಡಲಾಗಿತ್ತು. ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಅವರ ತಾತ್ಕಾಲಿಕ ಬದಲಿಯಾಗಿ ಆರ್‌ಸಿಬಿಗೆ ಸೇರಿಸಿಕೊಳ್ಳಲಾಗಿತ್ತು. ಲಾಸ್ಟ್ 2 ಮ್ಯಾಚ್ಗಳ ಟೈಮಲ್ಲಿ ತಂಡದಲ್ಲಿದ್ರು. ಬಟ್ ಯಾವುದೇ ಮ್ಯಾಚಸ್ ಆಡಿಸಿಲ್ಲ. ಅದೂ ಅಲ್ದೇ ಮುಝರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಮಾತ್ರ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ. ಹಾಗೇ ಇಂಗ್ಲೆಂಡ್ ತಂಡದ ಆಟಗಾರ ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಕಾರಣ ಆರ್‌ಸಿಬಿ ನ್ಯೂಝಿಲೆಂಡ್ನ ವಿಕೆಟ್ ಕೀಪರ್ ಟಿಮ್ ಸೈಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಇವ್ರೂ ಕೂಡ ಯಾವುದೇ ಪಂದ್ಯವನ್ನ ಆಡ್ಲಿಲ್ಲ. ಆದ್ರೆ ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ಕಾರಣಕ್ಕೆ ಸೈಫರ್ಟ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.

ನೋಡಿರಿ

