ಪದೇ ಪದೇ ಈ ಸಮಸ್ಯೆ ನಿಮಗೆ ಕಾಡುತ್ತಿದ್ಯಾ? – ಎಚ್ಚರ.. ಇದು ಲಿವರ್‌ ಡ್ಯಾಮೇಜ್‌ನ ಲಕ್ಷಣ!

ಪದೇ ಪದೇ ಈ ಸಮಸ್ಯೆ ನಿಮಗೆ ಕಾಡುತ್ತಿದ್ಯಾ? – ಎಚ್ಚರ.. ಇದು ಲಿವರ್‌ ಡ್ಯಾಮೇಜ್‌ನ ಲಕ್ಷಣ!

ಕಾಲ ಬದಲಾಗುತ್ತಿದ್ದಂತೆ ಜನರ ಜೀವನ ಶೈಲಿಯೂ ಬದಲಾಗುತ್ತಿದೆ. ಅನಾರೋಗ್ಯಕರ ಜೀವನಶೈಲಿ, ಒತ್ತಡದ ಜೀವನ ಮತ್ತು ಕೆಟ್ಟ ಆಹಾರ ಪದ್ಧತಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಹೃದಯಾಘಾತದಂತಹ ರೋಗಗಳ ಅಪಾಯವು ಹೆಚ್ಚಾಗುತ್ತಿದೆ. ಇದರೊಂದಿಗೆ ಯಕೃತ್ತು ಹಾನಿಯ ಅಪಾಯವು ಹೆಚ್ಚಾಗುತ್ತದೆ. ಹಾಗಾದ್ರೆ ಲಿವರ್‌ ಸಮಸ್ಯೆಯ ಲಕ್ಷಣಗಳೇನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: T-20Iನಿಂದ ರಜತ್ ಬಿಟ್ಟಿದ್ದೇ ಸರಿ – CSK ಮಾಜಿ ಪ್ಲೇಯರ್​ ಗ್ಯಾಕೆ ಉರಿ?

ಯಕೃತ್ತು ಮಾನವ ದೇಹದಲ್ಲಿ ತುಂಬಾ ಮುಖ್ಯವಾದ ಅಂಗವಾಗಿದೆ. ಆದ್ರೆ ಅನೇಕರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸುವುದೇ ಇಲ್ಲ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ್ರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಲಿವರ್‌ ಡ್ಯಾಮೇಜ್‌ನ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಲು ಕಷ್ಟವಾಗುತ್ತದೆ.ಆದ್ರೆ, ಲಿವರ್ ನ ಆರೋಗ್ಯ ಕೆಡುತ್ತಿದೆ ಎನ್ನುವಾಗ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಲು ಆರಂಭಿಸುತ್ತದೆ.‌ ಇದನ್ನು ಸರಿಯಾಗಿ ಗಮನಿಸಿದರೆ ಲಿವರ್ ಡ್ಯಾಮೇಜ್ ಆಗುತ್ತಿದೆ ಎನ್ನುವುದನ್ನು ಆರಂಭಿಕ ಹಂತದಲ್ಲಿಯೇ ಕಂಡು ಹಿಡಿಯಬಹುದು.

ಸಾಮಾನ್ಯ ವಿಶ್ರಾಂತಿಯ ನಂತರವೂ ಹೋಗದಿರುವ ಅತಿಯಾದ ಆಯಾಸವು ಯಕೃತ್ತಿನ ಹಾನಿಯ ಕೇತವಾಗಿರಬಹುದು.ಹಾನಿಗೊಳಗಾದ ಯಕೃತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ  ಹೀಗಾಗುತ್ತದೆ. ಹಸಿವಿನ ಕೊರತೆ ಅಥವಾ ತೂಕ ನಷ್ಟ ಆಗುವುದು ಯಕೃತ್ತಿನ ಸಮಸ್ಯೆಗಳ ಸಂಕೇತವಾಗಿರಬಹುದು. ಹಾನಿಗೊಳಗಾದ ಯಕೃತ್ತು ಆಹಾರದಿಂದ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದ ಕಾರಣ ಹೀಗಾಗುತ್ತದೆ.

ಹೊಟ್ಟೆಯ ಮೇಲಿನ ಬಲ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದು  ಯಕೃತ್ತಿನ ಹಾನಿಯ ಸಂಕೇತವಾಗಿದೆ.ಈ ನೋವು ಜೋರಾಗಿರಬಹುದು ಅಥವಾ ಮಂದವಾಗಬಹುದು. ಚರ್ಮ ಮತ್ತು ನಿಮ್ಮ ಕಣ್ಣುಗಳ ಬಿಳಿಭಾಗವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ,ಇದು ಯಕೃತ್ತಿನ ಹಾನಿಯ ಪ್ರಮುಖ ಲಕ್ಷಣವಾಗಿದೆ. ಬಿಲಿರುಬಿನ್ ಎಂಬ ವಸ್ತುವಿನ ಮಟ್ಟವು ರಕ್ತದಲ್ಲಿ ಹೆಚ್ಚಾದಾಗ ಹೀಗಾಗುತ್ತದೆ.

ನಿಮ್ಮ ಮೂತ್ರವು ಗಾಢ ಬಣ್ಣಕ್ಕೆ ತಿರುಗಿದರೆ ಅದು ಯಕೃತ್ತಿನ ಹಾನಿಯ ಸಂಕೇತವಾಗಿರಬಹುದು.ಸಾಕಷ್ಟು ಪ್ರಮಾಣದ ನೀರು ಕುಡಿದರೂ ಮೂತ್ರವು ನೀರಿನಂತೆ ಸ್ಪಷ್ಟವಾಗದಿದ್ದರೆ ಅದು ಯಕೃತ್ತಿನ ಸಮಸ್ಯೆಯ ಸಂಕೇತವಾಗಿರುತ್ತದೆ.

Shwetha M

Leave a Reply

Your email address will not be published. Required fields are marked *