ಕ್ರಿಕೆಟ್ ಅಭಿಮಾನಿಗಳಿಗೆ ಈ ವರ್ಷ ಸಿಕ್ಕಾಪಟ್ಟೆ ಮನರಂಜನೆ – T20 ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಉಚಿತ

ಕ್ರಿಕೆಟ್ ಅಭಿಮಾನಿಗಳಿಗೆ ಈ ವರ್ಷ ಸಿಕ್ಕಾಪಟ್ಟೆ ಮನರಂಜನೆ – T20 ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಉಚಿತ

ಈ ಬಾರಿಯ ವಿಶ್ವಕಪ್​ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ  ಪಂದ್ಯಗಳಿಗೆ ಯುಎಸ್​ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್​ನಲ್ಲಿ ಜರುಗಲಿದೆ. ಈ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಘೋಷಿಸಿದೆ.

ಇದನ್ನೂ ಓದಿ: ದೇಶದಲ್ಲೇ ಅತ್ಯಂತ ಎತ್ತರದ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಟೆಸ್ಟ್ ಮ್ಯಾಚ್ – ಧರ್ಮಶಾಲಾದಲ್ಲಿ ಇಂಡಿಯಾ vs ಇಂಗ್ಲೆಂಡ್ ಸೆಣಸಾಟ

ಕ್ರಿಕೆಟ್ ಅಭಿಮಾನಿಗಳಿಗೆ ಈ ವರ್ಷ ಸಿಕ್ಕಾಪಟ್ಟೆ ಮನರಂಜನೆ ಸಿಗಲಿದೆ. ಕ್ರಿಕೆಟ್ ಲೀಗ್ IPL 2024 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಮೇ ಅಂತ್ಯದವರೆಗೆ ಐಪಿಎಲ್​ ನಡೆಯಲಿದ್ದು, ಬಳಿಕ ಜೂನ್ ತಿಂಗಳಿಂದ ಐಸಿಸಿ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಜೂನ್​ 2, 2024ರಿಂದ ಐಸಿಸಿ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಅಮೇರಿಕಾ ಮತ್ತು ವೆಸ್ಟ್​ ಇಂಡೀಸ್​ ಜಂಟಿಯಾಗಿ ಟೂರ್ನಿ ಆಯೋಜಿಸಿದೆ. ಇದರ ನಡುವೆ ಅಭಿಮಾನಿಗಳಿಗೆ ಗುಡ್​ನ್ಯೂಸ್ ವೊಂದಿದೆ. OTT ಪ್ಲಾಟ್‌ಫಾರ್ಮ್ ಡಿಸ್ನಿ+ ಹಾಟ್‌ಸ್ಟಾರ್ ತಮ್ಮ ಮೊಬೈಲ್ ಅಪ್ಲಿಕೇಶನ್‌ನಲ್ಲಿ ICC 2024 ಪುರುಷರ T20 ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಮಾಡಲಿದೆ. ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುವುದು ಎಂದು ಘೋಷಿಸಿದೆ.

2024ರ ಟಿ20 ವಿಶ್ವಕಪ್ ಅ​ನ್ನು (T20 World Cup 2024) ಉಚಿತವಾಗಿ ನೇರ ಪ್ರಸಾರ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಘೋಷಿಸಿದೆ. ಆದರೆ ಈ ಸೌಲಭ್ಯವು ಮೊಬೈಲ್ ಬಳಕೆದಾರರಿಗೆ ಮಾತ್ರ ಸಿಗಲಿದೆ. ಅಂದರೆ ನೀವು ಲಾಪ್​ಟಾಪ್ ಅಥವಾ ಟಿವಿಯಲ್ಲಿ ಹಾಟ್​ಸ್ಟಾರ್ ಬಳಸುತ್ತಿದ್ದರೆ ಫ್ರೀ ಲೈವ್ ಸ್ಟ್ರೀಮಿಂಗ್ ಇರುವುದಿಲ್ಲ. ಬದಲಾಗಿ ರಿಜಾರ್ಜ್​ ಮಾಡಬೇಕಾಗುತ್ತದೆ ಎಂದು ಡಿಸ್ನಿ ಹಾಟ್​ಸ್ಟಾರ್ ತಿಳಿಸಿದೆ.

 

Sulekha