ಬಾರದ ಆ್ಯಂಬುಲೆನ್ಸ್ – ತಳ್ಳೋ ಗಾಡಿಯಲ್ಲೇ ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ 6 ವರ್ಷದ ಬಾಲಕ

ಭೋಪಾಲ್: ಅನಾರೋಗ್ಯ ಪೀಡಿತ ತಂದೆಯನ್ನು ಆರು ವರ್ಷದ ಬಾಲಕ ತಳ್ಳೋಗಾಡಿ ಮೂಲಕ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆ ಬಹಿರಂಗವಾಗಿದೆ.
ಸಿಂಗ್ರೌಲಿ ಜಿಲ್ಲೆಯ ಬಲಿಯಾರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಬಾಲಕನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ತಂದೆಗೆ ಚಿಕಿತ್ಸೆ ಕೊಡಿಸಬೇಕೆಂದು ಶನಿವಾರ ಬಾಲಕ ಹಾಗೂ ಆತನ ತಾಯಿ ಆ್ಯಂಬುಲೆನ್ಸ್ ಗೆ ಕರೆಮಾಡಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಕಾದರೂ ಆ್ಯಂಬುಲೆನ್ಸ್ ಬಂದಿಲ್ಲ. ಇನ್ನು ಆ್ಯಂಬುಲೆನ್ಸ್ ಗೆ ಕಾದರೆ ಅಪಾಯ ಖಚಿತ ಎಂದು ಅರಿತು ಮರದ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಬಳಿಕ ಸುಮಾರು 3 ಕಿಲೋ.ಮೀಟರ್ ಗಳಿಗೂ ಹೆಚ್ಚು ದೂರ ತಳ್ಳುವ ಗಾಡಿ ಮೂಲಕ ಬಾಲಕ ಹಾಗೂ ಆತನ ತಾಯಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ: ಗುಂಡಿಮಯ ರೋಡ್‌ಲ್ಲಿ ಕೆಟ್ಟು ನಿಂತ ಆಂಬ್ಯುಲೆನ್ಸ್ – ಎರಡು ಗಂಟೆ ಹೆರಿಗೆ ನೋವಲ್ಲಿ ರಸ್ತೆಯಲ್ಲೇ ನರಳಾಡಿದ ಗರ್ಭಿಣಿ..!
ವೈರಲ್ ಆಗಿರುವ ವಿಡಿಯೋದಲ್ಲಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುವ 6 ವರ್ಷದ ಬಾಲಕ ಮರದ ಗಾಡಿಯನ್ನು ತಳ್ಳಿಕೊಂಡು ಹೋಗಿರುವುದನ್ನು ಕಾಣಬಹುದು. ಆ ಗಾಡಿಯ ಇನ್ನೊಂದು ತುದಿಯನ್ನು ಆತನ ತಾಯಿ ತಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಿಂಗ್ರೌಲಿ ಜಿಲ್ಲಾಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆ ಕುರಿತು ತನಿಖೆಗೆ ಆದೇಶಿಸಿದೆ ಎನ್ನಲಾಗಿದೆ.
शायद मध्य प्रदेश की एंबुलेंस गरीबों के लिए नहीं है,
इसलिए मरीज़ को ठेले पर लिटाकर अस्पताल ले जाया जा रहा है!!वीडियो मे मरीज़ की पत्नी और बेटे ठेले को धक्का लगाकर ले जा रहे है!#MadhyaPradesh #सिंगरौलीhttps://t.co/7uIlBCDFZq pic.twitter.com/VD6N5nSUow
— Sadaf Afreen صدف (@s_afreen7) February 11, 2023