ಸಿಎಂ ಪಟ್ಟಕ್ಕೆ ಸಂಚಕಾರ – ಹೆಗಡೆ TO ಬಿಎಸ್ ವೈ
ಸೀಟು ಕಳೆದವರೆಷ್ಟು? ಪಡೆದವರೆಷ್ಟು?

ಅಧಿಕಾರ ಚುಕ್ಕಾಣಿ ಹಿಡಿಬೇಕು.. ಸಿಎಂ ಕುರ್ಚಿ ಮೇಲೆ ಕೂರಬೇಕು ಅನ್ನೋದು ಪ್ರತಿ ರಜಕಾರಣಿಗಳ ಕನಸು.. ಮುಖ್ಯಮಂತ್ರಿ ಅಧಿಕಾರಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ.. ರಾಜ್ಯಕ್ಕೆ ರಾಜನಾದ್ರೂ, ಎಷ್ಟೇ ಅಧಿಕಾರವಿದ್ರೂ ಕಾನೂನು ಮುಂದೆ ಆಟ ನಡೆಯಲ್ಲಾ.. ಅವರ ಮೇಲೂ ಕೇಸ್ ಆಗುತ್ತೆ ಜೈಲಿಗೆ ಹೋಗ್ತಾರೆ.. ಹಾಗಿದ್ರೆ ಇಲ್ಲಿ ತನಕ ಎಷ್ಟು ಸಿಎಂ ಮೇಲೆ ಕೇಸ್ ಆಗಿದೆ.. ಯಾರೆಲ್ಲಾ ಅಧಿಕಾರದಲ್ಲೇ ಇದ್ದಾಗಲೇ ರಾಜೀನಾಮೆ ನೀಡಿದ್ದಾರೆ..
ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.. 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಸಹ ಇಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ ಮೇಲೆ ಮುಡಾ ತೂಗುಗತ್ತಿ ನೇತಾಡುತ್ತಿದೆ. ಸಿಎಂ ಗಾದಿಯಲ್ಲಿದ್ದಾಗಲೇ ಬಂದ ಆರೋಪ ಸಿದ್ದರಾಮಯ್ಯರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಸಿದ್ದರಾಮಯ್ಯ ಸಿಎಂ ಗಾದಿಗೆ ರಾಜೀನಾಮೆ ನೀಡ್ಬೇಕು ಅಂತಾ ವಿಪಕ್ಷಗಳು ಆಗ್ರಹಿಸುತ್ತಿವೆ.. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕಳಗೆ ಇಳಿದ್ರೆ ನಮಗೆ ಆ ಸ್ಥಾನ ಸಿಗುತ್ತೆ ಅಂತಾ ಕಾಂಗ್ರಸ್ನ ಹಲವು ನಾಯಕರು ಕನಸು ಕಾಣುತ್ತಿದ್ದಾರೆ. ಆದ್ರೆ 2ನೇ ಬಾರಿಗೆ ಸಿಎಂ ಪಟ್ಟ ಅಲಂಕಾರಿ ಮಾಡಿರೋ ಸಿದ್ದರಾಮಯ್ಯ ಯಾವುದೇ ಕಾರಣಕ್ಕೆ ನಾನು ರಾಜೀನಾಮೆ ನೀಡಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಮಾತ್ರ ಅಲ್ಲ ಈ ಹಿಂದೆ ಕೂಡ ಕರ್ನಾಟಕ ಸಿಎಂಗಳ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ವು.. ತಮ್ಮ ಮೇಲೆ ಆರೋಪ ಕೇಳಿ ಬರ್ತಿದ್ದಂತೆ ಆ ಸಿಎಂಗಳು ಏನ್ ಮಾಡಿದ್ರೆ ಅನ್ನೋದನ್ನ ನೋಡೋಣ ಬನ್ನಿ..
1988ರಲ್ಲಿ ದೂರವಾಣಿ ಕದ್ದಾಲಿಕೆ ಹಗರಣ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಈ ಆರೋಪ ಕೇಳಿ ಬಂದಾಕ್ಷಣ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಟ್ಟು ಹೊರಬಂದ್ದಿದ್ದರು. ನಂತರ ಎಸ್. ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು. 1989 ರಲ್ಲಿ ಬಸವನಗುಡಿಯಿಂದ ಮತ್ತೆ ವಿಧಾನಸಭೆಗೆ ಆಯ್ಕೆ ಆಗಿದ್ರು. ಇದಾದ ನಂತರ ಕರ್ನಾಟಕ ಹೈಕೋರ್ಟ್ ವಿಚಾರಣೆ ಮಾಡಿ ಅಂತಿಮವಾಗಿ ಹೆಗಡೆಯವರ ಪರವಾಗಿ ತೀರ್ಪು ನೀಡಿತ್ತು.
ರಾಜ್ಯದಲ್ಲಿ ದೇವರಾಜ ಅರಸು ಆದ ಬಳಿಕ ಹಿಂದುಳಿದ ವರ್ಗಗಳಿಂದ ಸಿಎಂ ಆದ ಬಂಗಾರಪ್ಪ ಹಲವು ಜನಪ್ರಿಯ ಯೋಜನೆಗಳಿಗೆ ಪ್ರಸಿದ್ಧಿ. ಇದರ ಹೊರತಾಗಿಯೂ ಕ್ಲಾಸಿಕ್ ಹಗರಣದಲ್ಲಿ ಎಸ್.ಬಂಗಾರಪ್ಪ ಹೆಸರು ಕೇಳಿಬಂದಿತ್ತು. ಹಾಗಾಗಿ ಸಿಎಂ ಹುದ್ದೆಗೆ ಬಂಗಾರಪ್ಪ ರಾಜೀನಾಮೆ ನೀಡಿದ್ರು, ಇವರ ನಂತರ ವೀರಪ್ಪ ಮೊಯ್ಲಿ ಸಿಎಂ ಸ್ಥಾನ ಅಲಂಕರಿಸಿದ್ರು.
2011ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ವಿರುದ್ಧ ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ದಾಖಲಾಗಿತ್ತು. ರಾಜ್ಯಪಾಲರಿಂದ ಬಿಎಸ್‌ವೈ ವಿರುದ್ಧ ಪ್ರಸಿಕ್ಯೂಷನ್‌ಗೆ ಅನುಮತಿ ನೀಡಿದ್ರೂ, ಬಿಎಸ್‌ವೈ ರಾಜೀನಾಮೆ ಸಲ್ಲಿಸಿಲ್ಲ. 2011 ಜುಲೈ 21ರಂದು ಸರ್ಕಾರಕ್ಕೆ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಕ್ರಮದ ಬಗ್ಗೆ ವರದಿ ಸಲ್ಲಿಕೆ ಮಾಡಿದ್ರು. ಈ ಅಕ್ರಮದಲ್ಲಿ ಬಿಎಸ್‌ವೈ ಪಾತ್ರದ ಬಗ್ಗೆ ಉಲ್ಲೇಖ ಮಾಡಲಾಗಿತ್ತು ನಂತ್ರ ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಬಿಎಸ್‌ವೈ ರಾಜೀನಾಮೆ ನೀಡಿದ್ರು. ಬಿಎಸ್‌ವೈ ರಾಜೀನಾಮೆ ನೀಡಿದ ನಂತ್ರ 2011ರಲ್ಲಿ ಸದಾನಂದ ಗೌಡ, 2012ರಲ್ಲಿ ಶೆಟ್ಟರ್ ಸಿಎಂ ಆದ್ರು. ನಂತ್ರ 2018 ಮತ್ತು 2019ರಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ರು. ) ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಮ್ಮೆ ರಾಜೀನಾಮೆ ನೀಡಿದ ನಂತ್ರ ಮತ್ತೆ ಸಿಎಂ ಆಗಿದ್ದು ಅಂದ್ರೆ ಅದು ಬಿಎಸ್ ಯಡಿಯೂರಪ್ಪ ಮಾತ್ರ. ಇದೇ ತರ ಸಿದ್ದರಾಮಯ್ಯ ವಿಚಾರದಲ್ಲಿ ಆಗುತ್ತಾ ಅನ್ನೋದು ಕಾದು ನೋಡಬೇಕಿದೆ.
ಇನ್ನು ಸಿಎಂ ಸ್ಥಾನದಲ್ಲಿದ್ದಾಗಲೇ ಲಾಲು ಪ್ರಸಾದ್ ಯಾದವ್, ಜಯಲಲಿತಾ, ಹೇಮಂತ್ ಸೊರೇನ್, ಬಿ.ಎಸ್.ಯಡಿಯೂರಪ್ಪ, ಅರವಿಂದ್ ಕೇಜ್ರಿವಾಲ್ ಅರೆಸ್ಟ್ ಆಗಿದ್ರು. ಆದ್ರೆ ಇವರಲ್ಲಿ ಬಂಧನಕ್ಕೊಳಗಾದರೂ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸದವರೆಂದರೆ ಅದು ಜಯಲಲಿತಾ ಹಾಗೂ ಕೇಜ್ರಿವಾಲ್. ಜೈಲಿನಿಂದ ಹೊರ ಬಂದ ನಂತ್ರ ಕೇಜ್ರಿವಾಲ್ ರಾಜೀನಾಮೆ ನೀಡಿದ್ರು.
ಕೇಜ್ರಿವಾಲ್‌ಗೆ ಆದ ಸ್ಥಿತಿಯೇ ಸಿದ್ದರಾಮಯ್ಯಗೆ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಒಮ್ಮೆ ಎಲ್ಲಾದ್ರೂ ಸಿಎಂ ಮೇಲೆ ಬಂದಿರೋ ಮುಡಾ ಹಗರಣ ಸಬೀತಾದ್ರೆ ಜೈಲು ಪಾಲಾಗುವ ಸಾಧ್ಯತೆಯಿದೆ. ಹಾಗೇನಾದ್ರೂ ಜೈಲು ಪಾಲಾದ್ರೆ ಸಿಎಂ ರಾಜೀನಾಮೆ ಕೊಡ್ತಾರಾ ಕೊಡಲ್ವಾ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.