ಹಿಟ್‌ ಮ್ಯಾನ್‌ ಆಸ್ತಿ ಎಷ್ಟಿದೆ ಗೊತ್ತಾ? – ಕಾರು.. ವಾಚ್.. ಲೆಕ್ಕವೆಷ್ಟು?

ಹಿಟ್‌ ಮ್ಯಾನ್‌ ಆಸ್ತಿ ಎಷ್ಟಿದೆ ಗೊತ್ತಾ? – ಕಾರು.. ವಾಚ್.. ಲೆಕ್ಕವೆಷ್ಟು?

ಟೀಮ್ ಇಂಡಿಯಾ ಕ್ಯಾಪ್ಟನ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಸದ್ಯ ಐಪಿಎಲ್ ನಲ್ಲಿ ಒಳ್ಳೆ ಪ್ರದರ್ಶನ ನೀಡ್ತಾ ಇದ್ದಾರೆ.. ಈ ಹಿಟ್‌ಮ್ಯಾನ್‌ ಸದ್ಯ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟರ್ ಗಳಲ್ಲಿ ಒಬ್ರು..  ಅಲ್ಲದೆ ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮ ಹಲವು ದುಬಾರಿ ವಸ್ತುಗಳ ಮಾಲೀಕ.

ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ರೋಹಿತ್ ಶರ್ಮಾ. ಹಿಟ್‌ಮ್ಯಾನ್‌ ಅಂತಲೇ ಭಾರತೀಯ ಕ್ರಿಕೆಟ್‌ ಪ್ರೇಮಿಗಳು ಪ್ರೀತಿಯಿಂದ ರೋಹಿತ್‌ ಶರ್ಮಾರನ್ನು ಕರೀತಾರೆ.. ಕ್ರಿಕೆಟ್‌ನಿಂದಲೇ ಕೋಟ್ಯಂತರ ರೂಪಾಯಿ ಹಣ ಗಳಿಸುತ್ತಾರೆ ರೋಹಿತ್‌. ಕ್ರಿಕೆಟ್‌ ನ ಜೊತೆಗೆ  ರೋಹಿತ್‌ ಶರ್ಮ ಅವರ ಆದಾಯದ ದೊಡ್ಡ ಮೂಲ ಜಾಹೀರಾತುಗಳು. ಪ್ರಸ್ತುತ ರೋಹಿತ್‌ ಶರ್ಮ 24 ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.

ಇದನ್ನೂ ಓದಿ: ಬಡತನದಿಂದ ಮೇಲೆದ್ದ ಕ್ರಿಕೆಟರ್‌! – ಓದಿದ್ದು 8 ಕ್ಲಾಸ್‌.. ಈಗ ಫೇಮಸ್ ಆಟಗಾರ!

ಕ್ರಾಲ್‌( Kroll) ಸೆಲಬ್ರಿಟಿ ಬ್ರ್ಯಾಂಡ್‌ ವ್ಯಾಲ್ಯುವೇಷನ್‌ ಸ್ಟಡಿ ಪ್ರಕಾರ, 2021ರಲ್ಲಿ ರೋಹಿತ್‌ ಶರ್ಮ ಅವರ ಬ್ರ್ಯಾಂಡ್‌ ಮೌಲ್ಯ 26 ಮಿಲಿಯನ್‌ ಯುಎಸ್‌ ಡಾಲರ್‌ ಆಗಿತ್ತು. ಅಂದರೆ ಸರಿಸುಮಾರು 217 ಕೋಟಿ ರುಪಾಯಿಗಳ ಬ್ರ್ಯಾಂಡ್‌ ಮೌಲ್ಯವನ್ನು ರೋಹಿತ್‌ ಹೊಂದಿದ್ದರು.. ಇದರೊಂದಿಗೆ ರೋಹಿತ್‌ ಶರ್ಮ ಕೆಲವು ದುಬಾರಿ ವಸ್ತುಗಳಿಗೂ ಮಾಲೀಕರಾಗಿದ್ದಾರೆ. ರೋಹಿತ್‌ ಶರ್ಮ ಅವರ ಬಳಿ ಕಡಿಮೆ ಅಂದ್ರೂ 100ಕ್ಕೂ ಹೆಚ್ಚು ವಾಚ್‌ಗಳಿವೆ. ಇದರಲ್ಲಿ ಹುಬೋಲ್ಟ್‌ ಫೆರಾರಿ ಯುನಿಕೋ ಮ್ಯಾಜಿಕ್‌ ಗೋಲ್ಡ್‌ ವಾಚ್‌ ಕೂಡ ಸೇರಿದ್ದು ಅದರ ಮೌಲ್ಯ 27.8 ಲಕ್ಷ ರೂಪಾಯಿ.. ಇದರೊಂದಿಗೆ ರೋಹಿತ್‌ ಶರ್ಮ 2019ರಲ್ಲಿ ಭಾರತದಲ್ಲಿ ಲಾಂಚ್‌ ಆದ ಬಿಎಂಡಬ್ಲ್ಯು 350ಎಲ್‌ ಕಾರು ಹೊಂದಿದ್ದಾರೆ.. ಇದರ ಬೆಲೆ 80 ಲಕ್ಷ ರೂಪಾಯಿ. ಅಲ್ಲದೆ 95 ಲಕ್ಷ ಮೌಲ್ಯದ ಮರ್ಸಿಡೀಸ್ ಬೆಂಜ್‌ನ ಜಿಎಲ್‌ಎಸ್‌ 350 ಡಿ ಕಾರ್‌ಗೂ ರೋಹಿತ್‌ ಶರ್ಮ ಮಾಲೀಕರಾಗಿದ್ದಾರೆ.

ಕಳೆದ ಕೆಲವು ವಾರಗಳವರೆಗೂ 1.33 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಎಂ5 ಕಾರು ರೋಹಿತ್‌ ಶರ್ಮ ಅವರ ಗ್ಯಾರೇಜ್‌ನಲ್ಲಿದ್ದ ಅತ್ಯಂತ ದುಬಾರಿ ಕಾರು ಎನಿಸಿತ್ತು. ತೀರಾ ಇತ್ತೀಚೆಗೆ ರೋಹಿತ್‌ ಶರ್ಮ ಲ್ಯಾಂಬೋರ್ಗಿನಿ ಉರುಸ್‌ ಕಾರ್‌ಅನ್ನು ಖರೀದಿ ಮಾಡಿದ್ದಾರೆ. 3.10 ಕೋಟಿ ರೂಪಾಯಿ ಮೌಲ್ಯದ ಈ ಕಾರ್‌,  ರೋಹಿತ್ ಶರ್ಮ ಬಳಿಯಿರುವ ಅತ್ಯಂತ ದುಬಾರಿ ಕಾರು ಎನಿಸಿದೆ.

ಇನ್ನು ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಅವರ ಪ್ರಾಜೆಕ್ಟ್‌ ‘ಡಿಸ್ಕವರಿಯಲ್ಲಿ’ ಖಂಡಾಲಾ ಹಾಲಿಡೇ ಹೋಮ್‌ಅನ್ನು ರೋಹಿತ್‌ ಶರ್ಮ ಹೊಂದಿದ್ದಾರೆ. ಇದರ ಮೌಲ್ಯ 5 ಕೋಟಿ ರೂಪಾಯಿ.. ಇನ್ನು ಮುಂಬೈನ ವೊರ್ಲಿಯಲ್ಲಿರುವ ಅಹುಜಾ ಟವರ್ಸ್‌ನ 26ನೇ ಮಹಡಿಯಲ್ಲಿ ರೋಹಿತ್‌ ಶರ್ಮಾ ವಾಸ ಮಾಡುತ್ತಿದ್ದಾರೆ. ಈ 4 ಬಿಎಚ್‌ಕೆ ಫ್ಲ್ಯಾಟ್‌ನ ಮೌಲ್ಯ 30 ಕೋಟಿ ರೂಪಾಯಿ ಆಗಿದೆ. ಹೀಗೆ ಹಿಟ್‌ ಮ್ಯಾನ್‌ ತನ್ನ ಶ್ರೀಮಂತಿಕೆಗೆ ತಕ್ಕಂತ ಐಷಾರಾಮಿ ಮೌಲ್ಯದ ಆಸ್ತಿಪಾಸ್ತಿಯನ್ನು ಹೊಂದಿದ್ದಾರೆ.

Shwetha M

Leave a Reply

Your email address will not be published. Required fields are marked *