ಐಷಾರಾಮಿ ಜೀವನ.. – ಟೀಮ್‌ ಇಂಡಿಯಾ ಆಟಗಾರರ ಬಳಿ ಇದೆ ಖಾಸಗಿ ಜೆಟ್​!

ಐಷಾರಾಮಿ ಜೀವನ.. – ಟೀಮ್‌ ಇಂಡಿಯಾ ಆಟಗಾರರ ಬಳಿ ಇದೆ ಖಾಸಗಿ ಜೆಟ್​!

ಬಿಸಿಸಿಐ ಒಪ್ಪಂದ.. ಐಪಿಎಲ್ ವೇತನ.. ಕಂಪನಿಗಳೊಂದಿಗೆ ಪ್ರಾಯೋಜಕತ್ವ. ಬ್ಯುಸಿನೆಸ್.. ಹೀಗೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ಸ್ ಭರ್ಜರಿ ಹಣ ಗಳಿಸ್ತಾರೆ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅದ್ರಲ್ಲೂ ಕೆಲವರ ಬಳಿ ದುಬಾರಿ ಬಂಗಲೆ, ದುಬಾರಿ ಕಾರು, ವಾಚ್​ಗಳಿವೆ. ಇನ್ನು ಕೆಲವರು ಖಾಸಗಿ ಜೆಟ್​ಗಳನ್ನೇ ಹೊಂದಿದ್ದಾರೆ. ಲೀಗ್​ ಕ್ರಿಕೆಟ್​​, ಬ್ರ್ಯಾಂಡ್​​ ಎಂಡಾರ್ಸ್​​ಮೆಂಟ್​​ ಮತ್ತು ಜಾಹೀರಾತುಗಳ ಮೂಲಕ ಸಾಕಷ್ಟು ಹಣ  ಗಳಿಸುವ ಕ್ರಿಕೆಟರ್ಸ್ ಪ್ರೈವೇಟ್​​ ಜೆಟ್​ಗಳನ್ನೂ ಹೊಂದಿದ್ದಾರೆ. ಅಷ್ಟಕ್ಕೂ ಟೀಂ ಇಂಡಿಯಾದ ಯಾವೆಲ್ಲಾ ಕ್ರಿಕೆಟಿಗರ ಬಳಿ ಖಾಸಗಿ ಜೆಟ್​​ ಇದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 3 ವರ್ಷದಿಂದ ಟೆಸ್ಟ್ ಗೆದ್ದಿಲ್ಲ PAK – ಬಾಬರ್ ಔಟ್.. ಹೊಸ ಕ್ಯಾಪ್ಟನ್ ಫೇಲ್

ಕ್ರಿಕೆಟರ್ಸ್ ಪ್ರೈವೇಟ್ ಜೆಟ್! 

ಭಾರತದ ತಂಡದ ಮಾಜಿ ನಾಯಕ, ಆಲ್​ರೌಂಡರ್​ ಕಪಿಲ್ ದೇವ್ ಬಳಿ ಖಾಸಗಿ ಜೆಟ್​ ಇದೆ. ಕಪಿಲ್ ನಾಯಕತ್ವದಲ್ಲಿ ಭಾರತವು 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಕಪಿಲ್ ದೇವ್ ಟೀಂ ಇಂಡಿಯಾದಲ್ಲಿ ಖಾಸಗಿ ಜೆಟ್ ಖರೀದಿಸಿದ ಮೊದಲ ಕ್ರಿಕೆಟಿಗರಾಗಿದ್ದು, 110 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್​ ಇವರ ಬಳಿಯಿದೆ. ಹಾಗೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಸಚಿನ್​ ಇದ್ದು, ಇವರು ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಲೆಜೆಂಡರಿ ಕ್ರಿಕೆಟಿಗನ ಬಳಿ 250 ಕೋಟಿ ರೂಪಾಯಿ ಮೌಲ್ಯದ ಜೆಟ್ ಇದೆ. ಎಂಎಸ್ ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ. ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ. ಮಾತ್ರವಲ್ಲದೆ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರು. ಎಂಎಸ್ ಧೋನಿ ಕೂಡ ಖಾಸಗಿ ಜೆಟ್ ಮಾಲೀಕರಾಗಿದ್ದು, ಇವರ ಬಳಿ 110 ಕೋಟಿ ಮೌಲ್ಯದ ಜೆಟ್​ ಇದೆ. ಪ್ರಸಕ್ತ ಕ್ರಿಕೆಟ್​ನಲ್ಲಿ ರನ್ ಮೆಷಿನ್ ಎಂದೇ ಖ್ಯಾತಿ ಪಡೆದ ವಿರಾಟ್ ಕೊಹ್ಲಿ ಬಳಿಯೂ ದುಬಾರಿ ಕಾರು ಮತ್ತು ಖಾಸಗಿ ಜೆಟ್ ಇದೆ. 120 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಖಾಸಗಿ ಜೆಟ್​​ ಅನ್ನು ವಿರಾಟ್​ ಕೊಹ್ಲಿ ಹೊಂದಿದ್ದಾರೆ. ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅತ್ಯುತ್ತಮ ಕ್ರಿಕೆಟ್​ರಗಳಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಪಾಂಡ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾರ್ದಿಕ್​ ಭಾರತದ ಶ್ರೀಮಂತ ಕ್ರಿಕೆಟ್​ರಗಳಲ್ಲಿ ಒಬ್ಬರಾಗಿದ್ದು, ಖಾಸಗಿ ಜೆಟ್​ನ ಮಾಲೀಕರೂ ಆಗಿದ್ದಾರೆ. ಇವರ ಬಳಿ 40 ಕೋಟಿ ಮೌಲ್ಯದ ಜೆಟ್​ ಇದೆ.

ನಿಜ. ಬಿಸಿಸಿಐ ಅಂದ್ರೆನೆ ಶ್ರೀಮಂತ ಕ್ರೀಡಾ ಸಂಸ್ಥೆ. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಅನ್ನೋದು ಅತಿಶಯೋಕ್ತಿ ಅಲ್ಲ. ಹಾಗೆಯೇ ಕ್ರಿಕೆಟಿಗರು ಕೂಡ ಒಂದು ಬಾರಿ ತಂಡಕ್ಕೆ ಆಯ್ಕೆ ಆದ್ರೆ ಅವರ ಲಕ್​ ಬದಲಾದಂತೆಯೇ ಲೆಕ್ಕ. ಭಾರತ ಕ್ರಿಕೆಟ್​ ತಂಡದ ಹಾಲಿ, ಮಾಜಿ ಆಟಗಾರರು ಭವಿಷ್ಯವೇ ಬದಲಾಗಿದ್ದು, ಲಕ್ಸುರಿ ಲೈಫ್ ಲೀಡ್ ಮಾಡ್ತಿದ್ದಾರೆ. ತಾವು ಬಳಸೋ ದುಬಾರಿ ವಸ್ತುಗಳಿಂದಲೂ ಸುದ್ದಿಯಲ್ಲಿರುತ್ತಾರೆ. ಅದ್ರಲ್ಲೂ ಸಚಿನ್​ ತೆಂಡೂಲ್ಕರ್​, ಎಮ್​.ಎಸ್​ ಧೋನಿ, ವಿರಾಟ್​ ಕೊಹ್ಲಿ ವಿಶ್ವದ ಅಗ್ರ ಮೂವರು ಶ್ರೀಮಂತ ಕ್ರಿಕೆಟರ್​ ಆಗಿದ್ದಾರೆ.  ಪ್ರತೀ ವರ್ಷ ಮಿಲಿಯನ್ ಗಟ್ಟಲೇ ಆದಾಯ ಗಳಿಸುವ ಈ ಸ್ಟಾರ್ಸ್ ಕೋಟಿಗಳ ಲೆಕ್ಕದಲ್ಲಿ ತೆರಿಗೆ ಕೂಡ ಪಾವತಿ ಮಾಡ್ತಾರೆ. ಬಾಲಿವುಡ್ ಸೆಲೆಬ್ರಿಟಿಗಳ ಲೈಫ್​ಸ್ಟೈಲ್​ಗೆ ಟಕ್ಕರ್ ಕೊಡುವಂತೆ ಬದುಕುತ್ತಿದ್ದಾರೆ.

Shwetha M

Leave a Reply

Your email address will not be published. Required fields are marked *