ತಲೆ ಬೋಳಿಸಿದ್ರೆ BBK ಫೈನಲ್‌.. ಹೆಡ್‌ ಶೇವ್‌ ಮಾಡಿಸಿದ್ರೆ ವಿನ್‌ ಆಗ್ತಾರಾ? – ಟಾಸ್ಕ್‌ ನೆಪ, ಫೀಲಿಂಗ್ಸ್‌ ಗೆ ಬೆಲೆ ಇಲ್ವಾ?

ತಲೆ ಬೋಳಿಸಿದ್ರೆ BBK ಫೈನಲ್‌.. ಹೆಡ್‌ ಶೇವ್‌ ಮಾಡಿಸಿದ್ರೆ ವಿನ್‌ ಆಗ್ತಾರಾ? – ಟಾಸ್ಕ್‌ ನೆಪ, ಫೀಲಿಂಗ್ಸ್‌ ಗೆ ಬೆಲೆ ಇಲ್ವಾ?

ಬಿಗ್‌ ಬಾಸ್‌ನಲ್ಲಿ ಈಗ ರಿಯಲ್‌ ಗೇಮ್‌ ಶುರುವಾದಂತಿದೆ. ದೊಡ್ಮನೆಯಲ್ಲಿ ಸ್ಪರ್ಧಿಗಳನ್ನ ಎರಡು ಬಣಗಳಾಗಿ ವಿಂಗಡಿಸಲಾಗಿದ್ದು, ಎರಡು ಟಿವಿ ಚಾನೆಲ್​​ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಇದೀಗ ಬಿಗ್​ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡಿದೆ. ಇದ್ರ ಪ್ರಕಾರ ಟಿವಿ ವಾಹಿನಿಯ ಎದುರಾಳಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತಿದೆ. ಟಾಸ್ಕ್‌ ವೇಳೆ ರಜತ್‌ ಗೆ ತಲೆ ಬೋಳಿಸಿಕೊಳ್ಳುವಂತೆ ಮಂಜು ಸವಾಲ್‌ ಹಾಕಿದ್ರು.. ಮಂಜು ಸವಾಲ್‌ ಅನ್ನ ರಜತ್‌ ಸ್ವೀಕರಿಸಿದ್ದಾರೆ.. ಇದೀಗ ವೀಕ್ಷಕರಿಗೆ ಒಂದು ಪ್ರಶ್ನೆ ಕಾಡ್ತಾ ಇದೆ. ತಲೆ ಬೋಳಿಸಿದ್ರೆ ಮಾತ್ರ ಬಿಗ್‌ ಬಾಸ್‌ ಮನೆಯಲ್ಲಿ ಇರೋದಿಕ್ಕೆ ಆಗೋದಾ? ತಲೆ ಬೋಳಿಸಿಕೊಂಡ್ರೆ ಫಿನಾಲೆ ವರೆಗೂ ಇರ್ತಾರಾ? ಅಂತಾ ಕೇಳ್ತಿದ್ದಾರೆ.. ಹಾಗಾದ್ರೆ ಇಷ್ಟು ಸೀಸನ್‌ಗಳಲ್ಲಿ ಯಾವ್ಯಾವ ಸ್ಪರ್ಧಿಗಳು ತಲೆಬೋಳಿಸಿಕೊಂಡಿದ್ರು.. ಅವರೆಲ್ಲರೂ ಫಿನಾಲೆವರೆಗೂ ಬಂದಿದ್ರಾ? ಈ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬೆಚ್ಚಿ ಬಿದ್ವಾ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ಸ್?.. ದಿಲ್ಲಿ ಮಾರ್ಕೆಟ್ನಲ್ಲಿ KMF ಟಾರ್ಗೆಟ್! – ಗ್ರಾಹಕರ ಕೈಗೆ ‘ನಂದಿನಿ’ ಸೇರದಂತೆ ಕುತಂತ್ರ

ಬಿಗ್‌ ಬಾಸ್‌ ಮನೆಯ ಆಟ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಾ ಇದೆ.. ದೊಡ್ಮನೆಯಲ್ಲಿ ಉಗ್ರಂ ಮಂಜು ಹಾಗೂ ರಜತ್ ಕಿಶನ್​​ಗೆ ಅಷ್ಟೊಂದಾಗಿ ಆಗಿ ಬರೋದಿಲ್ಲ.. ಇದು ವೀಕ್ಷಕರಿಗೂ ಗೊತ್ತಿರೋ ವಿಚಾರ. ಇಬ್ಬರು ಆಗಾಗ ಹಾವು ಮುಂಗೂಸಿಯಂತೆ ಕಿತ್ತಾಡಿಕೊಳ್ಳುತ್ತಿರುತ್ತಾರೆ. ರಜತ್​ ವೈಲ್ಡ್ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಎಂಟ್ರಿ ಆಗ್ತಿದ್ದಂತೆ ಮಂಜು ಮಸಲತ್ತು ಮಾಡಿದ್ದರು. ಕಳೆದ ವಾರವಷ್ಟೇ ರಜತ್ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್​​ನಿಂದ ದೂರ ಇಟ್ಟಿದ್ದರು. ಇದೇ ವಿಚಾರ ಇಬ್ಬರ ಮಧ್ಯೆ ದೊಡ್ಡ ಗಲಾಟೆಗೂ ಕಾರಣವಾಗಿತ್ತು. ಈ ವಾರ ಬಿಗ್​ಬಾಸ್​ ಮನೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಅದು ಮಂಜು ಮತ್ತು ರಜತ್ ಅವರ ಜಿದ್ದಾಜಿದ್ದಿಯನ್ನು ಯಾವ ಲೇವಲ್​​ಗೆ ಕೊಂಡೊಯ್ಯಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಬಿಗ್ ಬಾಸ್​ ಮನೆಯಲ್ಲಿ ಎರಡು ತಂಡ ಮಾಡಲಾಗಿದೆ. ಈ ವೇಳೆ ವಿವಿಧ ಚಾಲೆಂಜ್​ಗಳನ್ನು ನೀಡುವ ಟಾಸ್ಕ್ ಇತ್ತು. ಆಗ ರಜತ್ ಅವರಿಗೆ ತಲೆ ಬೋಳಿಸಿಕೊಳ್ಳುವ ಚಾಲೆಂಜ್ ನೀಡಲಾಗಿತ್ತು. ಇದನ್ನು ಅವರು ಸ್ವೀಕರಿಸಿದ್ದಾರೆ. ಅವರು ಟ್ರಿಮ್ಮರ್ ಮೂಲಕ ತಲೆ ಬೋಳಿಸಿಕೊಂಡಿದ್ದಾರೆ. ಇದನ್ನು ನೋಡಿ ಮನೆ ಮಂದಿಗೆ ಶಾಕ್ ಆಗಿದೆ. ಅಂದ್ಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಟಾಸ್ಕ್‌ ಅಂತಾ ಬಂದಾಗ ತಲೆ ಬೋಳಿಸಿಕೊಂಡಿರೋದು ಇದೇ ಮೊದಲೇನಲ್ಲ.. ಈ ಹಿಂದಿನ ಕೆಲ ಸೀಸನ್‌ಗಳಲ್ಲೂ ಕೆಲ ಸ್ಫರ್ಧಿಗಳು ತಲೆ ಬೋಳಿಸಿಕೊಂಡಿದ್ರು..

ಬಿಗ್‌ ಬಾಸ್‌ ಮನೆಯಲ್ಲಿ ಯಾರ್ಯಾರು ತಲೆ ಬೋಳಿಸಿಕೊಂಡಿದ್ರು?

ಬಿಗ್ ಬಾಸ್‌ ಕನ್ನಡ ಇತಿಹಾಸದಲ್ಲಿ ಸ್ಪರ್ಧಿಗಳು ಹೆಡ್‌ ಶೇವ್‌ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹೆಡ್‌ ಶೇವ್ ಮಾಡಿಕೊಂಡ ಸ್ಪರ್ಧಿಗಳಿದ್ದಾರೆ. ಕಾಕತಾಳೀಯವೆಂದರೆ, ಈ ಹಿಂದೆ ಹೆಡ್‌ ಶೇವ್‌ ಮಾಡಿಕೊಂಡ ಒಬ್ಬ ಸ್ಪರ್ಧಿ ವಿನ್ನರ್‌ ಆಗಿದ್ರೆ, ಇಬ್ಬರೂ ಸ್ಪರ್ಧಿಗಳು ಮೊದಲನೇ ರನ್ನರ್‌ ಅಪ್‌ ಸ್ಥಾನವೂ ಪಡೆದಿದ್ರು.. ಹೌದು,  ‘ಬಿಗ್ ಬಾಸ್ ಕನ್ನಡ ಸೀಸನ್‌ 2ನಲ್ಲಿ ನಟ, ನಿರೂಪಕ, ನಿರ್ಮಾಪಕ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್‌ ತಲೆ ಬೋಳಿಸಿಕೊಂಡಿದ್ದರು. ಆ ಸೀಸನ್‌ ನಲ್ಲಿ ಧಮ್‌ ಅನ್ನೋ ಟಾಸ್ಕ್‌ ನೀಡಲಾಗಿತ್ತು.. 30 ಪಾಂಟ್ಸ್‌ಗಾಗಿ ಸೃಜನ್‌ ತಲೆ ಬೋಳಿಸಿಕೊಂಡಿದ್ರು.. ಇನ್ನೂ, ‘ಬಿಗ್ ಬಾಸ್‌ ಕನ್ನಡ 3’ ಕಾರ್ಯಕ್ರಮದಲ್ಲಿ ಟಾಸ್ಕ್‌ ಸಲುವಾಗಿ ನಟ ಚಂದನ್ ಕುಮಾರ್‌ ಕೂಡ ಹೆಡ್ ಶೇವ್ ಮಾಡಿಸಿಕೊಂಡಿದ್ರು.. ಟಾಸ್ಕ್‌ ವಿಷಯದಲ್ಲಿ ನಾನು 100% ಕೊಡ್ತೀನಿ.. ಅಂತಾ ನೇರ ನಾಮಿನೇಷನ್‌ನಿಂದ ತಪ್ಪಿಸಿಕೊಳ್ಳಲು, ಚಂದನ್ ಕುಮಾರ್‌ ಹೆಡ್‌ ಶೇವ್ ಮಾಡಿಕೊಂಡಿದ್ರು.. ಇಂಟ್ರೆಸ್ಟಿಂಗ್ ಅಂದ್ರೆ, ಸೃಜನ್ ಲೋಕೇಶ್ ಹಾಗೂ ಚಂದನ್ ಕುಮಾರ್‌.. ಇಬ್ಬರೂ ಫಸ್ಟ್‌ ರನ್ನರ್‌ ಅಪ್‌ ಆಗಿದ್ರು..

ಇನ್ನು ಬಿಗ್ ಬಾಸ್‌ ಕನ್ನಡ  ಸೀಸನ್‌ 10 ನಲ್ಲಿ ಕಾರ್ತಿಕ್‌ ಮಹೇಶ್ ಹಾಗೂ ತುಕಾಲಿ ಸಂತು ಹೆಡ್‌ ಶೇವ್ ಮಾಡಿಸಿಕೊಂಡಿದ್ರು. ಟಾಸ್ಕ್‌ ವೇಳೆ ಎದುರಾದ ಸವಾಲಿನಿಂದಾಗಿ ತುಕಾಲಿ ಸಂತು ಮತ್ತು ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡಿದ್ದಾರೆ. ಕಾರ್ತಿಕ್‌ ಸೀಸನ್‌ 10 ವಿನ್ನರ್‌ ಆಗಿದ್ರು.. ತುಕಾಲಿ ಸಂತು ಆರನೇ ಸ್ಥಾನ ಪಡ್ಕೊಳ್ಳುವಲ್ಲಿ ಯಶಸ್ವಿಯಾಗಿದ್ರು..

ಈ ಸೀಸನ್‌ ನಲ್ಲಿ ಮಂಜು ಸವಾಲ್‌ ಅನ್ನ ರಜತ್‌ ಸ್ವೀಕರಿಸಿದ್ದು, ತಲೆ ಬೋಳಿಸಿಕೊಂಡಿದ್ದಾರೆ.. ಆದ್ರೀಗ ಮಂಜು ಅವರ ಈ ನಿರ್ಧಾರ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ರಜತ್​​ ಅವರು ಮಂಜು ವಿರುದ್ಧ ಟಾಸ್ಕ್​​​ನಲ್ಲಿ ಯಾವ ರೀತಿ ಸೇಡು ತೀರಿಸಿಕೊಳ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.. ಇದೀಗ ಕೆಲ ವೀಕ್ಷಕರು ಶೋ ವಿರುದ್ದ ಕಿರಿ ಕಾರುತ್ತಿದ್ದಾರೆ.. ಬಿಗ್‌ ಬಾಸ್‌ ಮನೆಯಲ್ಲಿರಲು ತಲೆ ಬೋಳಿಸಿಕೊಳ್ಳಬೇಕಾ? ಅದ್ಯಾಕೆ ಬೇರೆ ಟಾಸ್ಕ್‌ ನೀಡಲ್ಲ.. ಟಿವಿ ಶೋಗಳಲ್ಲಿ ದೊಡ್ಡವರು ಮಾತ್ರವಲ್ಲದೇ ಮಕ್ಕಳು ಕೂಡ ನೋಡ್ತಾ ಇರ್ತಾರೆ.. ಅವರು ಕೂಡ ಶೋ ನೋಡಿ ಇಂತಹ ಸಾಹಸಕ್ಕೆ ಕೈ ಹಾಕಲ್ವಾ? ಟಾಸ್ಕ್‌ ಆಯೋಜನೆ ಮಾಡೋವಾಗ ಎಲ್ಲಾ ವರ್ಗದ ವೀಕ್ಷಕರನ್ನ ಗಮನದಲ್ಲಿಟ್ಟುಕೊಳ್ಳಲ್ವಾ ಅಂತ ಕೇಳ್ತಾ ಇದ್ದಾರೆ.

Shwetha M

Leave a Reply

Your email address will not be published. Required fields are marked *