ಮದುವೆ ಮನೆಯಲ್ಲಿ ಪಾನ್‌ ತಿಂದ ಬಾಲಕಿ – ಅಯ್ಯಯ್ಯೋ.. ಹೊಟ್ಟೆಯಲ್ಲಿ ಸೃಷ್ಟಿಯಾಯ್ತು ರಂಧ್ರ!

ಮದುವೆ ಮನೆಯಲ್ಲಿ ಪಾನ್‌ ತಿಂದ ಬಾಲಕಿ – ಅಯ್ಯಯ್ಯೋ.. ಹೊಟ್ಟೆಯಲ್ಲಿ ಸೃಷ್ಟಿಯಾಯ್ತು ರಂಧ್ರ!

ಇದು ಫ್ಯಾಷನ್‌ ಜಗತ್ತು.. ಹಾಕೋ ಬಟ್ಟೆಯಿಂದ ಹಿಡಿದು ತಿನ್ನೋ ಆಹಾರದವರೆಗೂ ಏನೇನೋ ಟ್ರೆಂಡ್‌ಗಳು ಶುರುವಾಗಿದೆ. ಆಹಾರಗಳಿಗೆ ಹೊಸ ಟಚ್‌ ಕೊಡಲು ಹೋಗಿ ಇವುಗಳು ವಿಷವಾಗಿ ಮಾರ್ಪಾಡಾಗುತ್ತಿದೆ. ಇಂತಹ ಆಹಾರಗಳು ಜನರ ಜೀವಕ್ಕೆ ಕುತ್ತು ತರುತ್ತಿದೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದೆ. ಮದುವೆ ಕಾರ್ಯಕ್ರಮವೊಂದರಲ್ಲಿ ಪುಟ್ಟ ಬಾಲಕಿ ಪಾನ್‌ ತಿಂದು ಆಸ್ಪತ್ರೆ ಸೇರುವಂತಾಗಿದೆ.

ಇದನ್ನೂ ಓದಿ: ಜಾಮೀನು ಸಿಕ್ಕರೂ ತಪ್ಪದ ಸಂಕಷ್ಟ!- SIT ಅಧಿಕಾರಿಗಳ ಈ ನಿರ್ಧಾರದಿಂದ ರೇವಣ್ಣಗೆ  ಮತ್ತೆ ಆತಂಕ?

ಈ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮದುವೆಯ ಆರತಕ್ಷತೆಯಲ್ಲಿ ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ ತಿಂದ 12 ವರ್ಷದ ಬಾಲಕಿ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಶಾಕ್‌ ಆಗಿದ್ದಾರೆ. ಯಾಕಂದ್ರೆ ಪಾನ್‌ ತಿಂದ ಬಳಿಕ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವೇ ಸೃಷ್ಟಿಯಾಗಿದೆ.

ಹೌದು, ಬಾಲಕಿಯ ಹೊಟ್ಟೆಯ ಭಾಗದಲ್ಲಿ 4×5 ಸೆಂಟಿಮೀಟರ್ ಹೋಲ್‌ ಆಗಿದೆ. ಬಾಲಕಿಗೆ ರಂಧ್ರ ಪೆರಿಟೋನಿಟಿಸ್ ಎಂಬ ಅನಾರೋಗ್ಯ ಉಂಟಾಗಿದೆ ಎಂದು ದೃಢಪಡಿಸಿದರು. ಸ್ಲೀವ್ ಗ್ಯಾಸ್ಟ್ರೆಕ್ಟಮಿ ಮೂಲಕ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಭಾರತದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗುತ್ತಿದ್ದು, ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಆಹಾರದಲ್ಲಿ ಪ್ರಯೋಗಾತ್ಮಕ ರೀತಿಯಲ್ಲಿ ದ್ರವ ಸಾರಜನಕವನ್ನು ಬಳಸುವುದರಿಂದ ಉಂಟಾಗುವ ಅಪಾಯಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

Shwetha M