ವಂದೇ ಭಾರತ್ ರೈಲಿನಲ್ಲಿ ಆಹಾರ ಸೇವಿಸಿದ ಮಹಿಳೆ ಶಾಕ್! – ಊಟ ಮಾಡಿದ ಮೇಲೆ ಏನಾಯ್ತು?

ಇತ್ತೀಚಿನ ದಿನಗಳಲ್ಲಿ ಯಾವುದು ಅಸಲಿ, ಯಾವುದು ನಕಲಿ ಅನ್ನೋದೇ ಗೊತ್ತಾಗ್ತಿಲ್ಲ. ತಿನ್ನೋ ಆಹಾರ ಕೂಡ ವಿಷವಾಗುತ್ತಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಳಪೆ ಮಟ್ಟದ ಆಹಾರ ನೀಡಲಾಗಿದೆ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ.
ಇದನ್ನೂ ಓದಿ: ಜನ ಮೆಚ್ಚಿದ ಜೋಡಿಯೇ ಜೋಡಿ ನಂ.1 ಶೋ ತೀರ್ಪುಗಾರರು! – ಹೊಸ ಶೋಗೆ ಡುಮ್ಮು ಸರ್, ಭೂಮಿ ಟೀಚರ್ ಜಡ್ಜಸ್!
ಹೌದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಹಾರ ಸೇವಿಸಿದ ಬಳಿಕ ತೀವ್ರ ಅಲರ್ಜಿ ಉಂಟಾಗಿದೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ. ಅಲ್ಲದೆ ತಮ್ಮ ಎರಡು ವರ್ಷದ ಮಗನೂ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಭಾರತೀಯ ರೈಲುಗಳಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ಮತ್ತೆ ಕಳವಳ ಮೂಡುವಂತೆ ಮಾಡಿದೆ.
ಅಷ್ಟಕ್ಕೂ ಆಗಿದ್ದೇನು?
ಮಾರ್ಚ್ 27ರಂದು ಉತ್ತರ ಪ್ರದೇಶದ ವಾರಣಾಸಿಯಿಂದ ದಿಯೋಘರ್‌ಗೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 22500ರ ಕೋಚ್ E1ರಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು. ಅವರು ಹೇಳಿಕೊಂಡಂತೆ ವಿಮಾನದಲ್ಲಿ ನೀಡಿದ ಊಟವನ್ನು ಸೇವಿಸಿದ ಕೂಡಲೇ ಅವರಿಗೆ ತೀವ್ರ ಅಲರ್ಜಿಯ ಉಂಟಾಯಿತು. ಪ್ರಯಾಣದ ಸಮಯದಲ್ಲಿ ತನ್ನ ಎರಡು ವರ್ಷದ ಮಗ ಕೂಡ ಅನಾರೋಗ್ಯಕ್ಕೆ ಒಳಗಾಗಿ ಅತಿಸಾರ ಸಮಸ್ಯೆ ಎದುರಿಸಿದ ಎಂದು ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಈ ವಿವರವನ್ನು ಹಂಚಿಕೊಂಡ ಅವರು, ವೈದ್ಯರ ಪ್ರಿಸ್ಕ್ರಿಪ್ಷನ್ ಜತೆಗೆ ಊದಿಕೊಂಡ ತುಟಿಗಳನ್ನು ತೋರಿಸಿದ್ದಾರೆ. ರೈಲಿನಲ್ಲಿ ನೀಡಲಾಗುವ ಕುಡಿಯುವ ನೀರಿನ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅದು ಅಸಾಮಾನ್ಯ ರುಚಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ನೋಡಿರಿ

