ಪುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರನಿಗೆ ಬಿಗ್ ಶಾಕ್ – ಚೀನಾದಲ್ಲಿ ಲಿಯೋನೆಲ್ ಮೆಸ್ಸಿ ಬಂಧನ!

ಪುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರನಿಗೆ ಬಿಗ್ ಶಾಕ್ – ಚೀನಾದಲ್ಲಿ ಲಿಯೋನೆಲ್ ಮೆಸ್ಸಿ ಬಂಧನ!

ಫುಟ್ಬಾಲ್ ಜಗತ್ತನ್ನೇ ಆಳುತ್ತಿರುವ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ. ಮೆಸ್ಸಿ ಮೈದಾನಕ್ಕೆ ಇಳಿದರೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟುವಂತಿರುತ್ತೆ. ಅವರ ಕಾಲ್ಚೆಂಡಿನ ಚಮತ್ಕಾರಕ್ಕೆ ಕ್ರೀಡಾಂಗಣವೇ ತಲೆದೂಗುತ್ತೆ. ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಆದರೀಗ ಕಾಲ್ಚೆಂಡಿನ ಇದೇ ಚತುರ ಬಂಧನದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ.

ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಜೂನ್ 10ರಂದು ಚೀನಾಗೆ ತೆರಳಿದ್ದರು. ಚೀನಾ ರಾಜಧಾನಿ ವರ್ಕರ್ಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟೀನಾದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕೂ ಮುನ್ನ ಬೀಜಿಂಗ್‌ಗೆ ಆಗಮಿಸಿದ್ದರು. ಕಳೆದ ಬಾರಿ ಫಿಫಾ ವಿಶ್ವಕಪ್​ ಗೆದ್ದ ಅರ್ಜೆಂಟೀನಾ ಸದ್ಯ ಬೇರೆ ಬೇರೆ ದೇಶಿಯ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದೆ. ಇದರ ನಡುವೆ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರನ್ನು ಚೀನಾ ರಾಜಧಾನಿ ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ : 1 ವರ್ಷ, 8,640 ಕಿ.ಮೀ ದೂರದ ಪ್ರಯಾಣ -ಕೇರಳದಿಂದ ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ಶಿಹಾಬ್ ಚೋಟ್ಟೂರ್..!

ಹೌದು, ಇದು ವದಂತಿ ಅಲ್ಲ. ನಿಜವಾಗಿಯೂ ಮೆಸ್ಸಿ ಅವರನ್ನು ಚೀನಾದ ಪೊಲೀಸರು ಬಂಧಿಸಿದ್ದರು. ಯಾಕೆಂದರೆ ಅರ್ಜೆಂಟೀನಾದ ಬದಲಿಗೆ ಸ್ಪ್ಯಾನಿಷ್ ಪಾಸ್‌ಪೋರ್ಟ್‌ನೊಂದಿಗೆ ಬಂದ ಕಾರಣ ಮೆಸ್ಸಿಯನ್ನು ಮೊದಲಿಗೆ ವಿಚಾರಣೆ ನಡೆಸಲಾಯಿತು. ಬಳಿಕ ಸ್ಪ್ಯಾನಿಷ್ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ಚೀನಾಕ್ಕೆ ಪ್ರವೇಶಿಸುವಂತಿಲ್ಲ ಎಂದು ಮಾಹಿತಿ ನೀಡಲಾಗಿದೆ. ಇದಾದ ಬಳಿಕ ಮೆಸ್ಸಿ ಸರಿಸುಮಾರು 2 ಗಂಟೆಗಳ ನಂತರ ಚೀನಾ ವೀಸಾ ಪಡೆದಿದ್ದಾರೆ. ಅಲ್ಲಿಯವರೆಗೆ ಮೆಸ್ಸಿಯನ್ನು ಚೀನಾ ಪೊಲೀಸರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು.

ಇದಕ್ಕೂ ಮುನ್ನ ಮೆಸ್ಸಿ ಚೀನಾಗೆ ಬರುವುದಕ್ಕೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಿರಲಿಲ್ಲ. ಅಲ್ಲದೇ ಅವರು ಅರ್ಜೆಂಟೀನಾ ಬದಲಿಗೆ ಸ್ಪ್ಯಾನಿಷ್ ಪಾಸ್​ಪೋರ್ಟ್​ ಹೊಂದಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೆಸ್ಸಿಯ ಸುತ್ತಲೂ ಚೀನಾ ಪೊಲೀಸರು ಸುತ್ತುವರೆದಿರುವ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿದೆ. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.

suddiyaana