ಅಂತಾರಾಷ್ಟ್ರಿಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ ಮೆಸ್ಸಿ ಎಷ್ಟು ಟ್ರೋಫಿ ಗೆದ್ದಿದ್ದಾರೆ ಗೊತ್ತಾ?

ಫುಟ್ಬಾಲ್ ಲೋಕದ ದಿಗ್ಗಜ ಲಿಯೋನೆಲ್ ಮೆಸ್ಸಿ ತಮ್ಮ ಅಂತಾರಾಷ್ಟ್ರಿಯ ಫುಟ್ಬಾಲ್ ವೃತ್ತಿಜೀವನಕ್ಕೆ ಗುಡ್ಬಾಯ್ ಹೇಳಿದ್ದಾರೆ. ನಾವು ಈ ದಿಗ್ಗಜ ಆಟಗಾರ ತಮ್ಮ ವೃತ್ತಿ ಜೀವನದಲ್ಲಿ ಎಷ್ಟು ಟ್ರೋಫಿಗಳನ್ನ ಗೆದ್ದಿದ್ದಾರೆ ಅನ್ನೋದ್ದನ್ನ ನೋಡೋಣ.
🏆 ಫಿಫಾ ವಿಶ್ವಕಪ್ – 2022
ಅರ್ಜೆಂಟೀನಾ ತಂಡವನ್ನು ಮುನ್ನಡೆಸಿ 2022ರಲ್ಲಿ ಫಿಫಾ ವಿಶ್ವಕಪ್ ಗೆದ್ದು, ತಮ್ಮ ಬಹುದಿನಗಳ ಕನಸನ್ನು ನನಸು ಮಾಡಿಕೊಂಡರು.
🏆 ಕೋಪಾ ಅಮೆರಿಕ – 2021 & 2024
ಮೆಸ್ಸಿ ಅರ್ಜೆಂಟೀನಾ ಪರವಾಗಿ ಎರಡು ಬಾರಿ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದಿದ್ದಾರೆ.
🏆 ಫಿನಾಲಿಸಿಮಾ – 2022
ಕೋಪಾ ಅಮೆರಿಕ ಚಾಂಪಿಯನ್ ಅರ್ಜೆಂಟೀನಾ ಮತ್ತು ಯುರೋ ಕಪ್ ಚಾಂಪಿಯನ್ ಇಟಲಿ ನಡುವಿನ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದು ಫಿನಾಲಿಸಿಮಾ ಟ್ರೋಫಿ ತನ್ನದಾಗಿಸಿಕೊಂಡಿತು.
🥇 ಒಲಿಂಪಿಕ್ ಚಿನ್ನ – 2008
ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಅರ್ಜೆಂಟೀನಾ ಪರ ಆಡಿದ ಮೆಸ್ಸಿ ಚಿನ್ನದ ಪದಕ ಗೆದ್ದಿದ್ದರು.
🏆 ಫಿಫಾ U-20 ವಿಶ್ವಕಪ್ – 2005
ಯುವ ಅರ್ಜೆಂಟೀನಾ ತಂಡದ ಪರ ಅದ್ಭುತ ಪ್ರದರ್ಶನ ನೀಡಿ 2005ರಲ್ಲಿ U-20 ವಿಶ್ವಕಪ್ ಚಾಂಪಿಯನ್ ಆದರು.
🔥 ವಿಶ್ವಕಪ್ನಿಂದ ಒಲಿಂಪಿಕ್ ಚಿನ್ನದವರೆಗೆ…
ಮೆಸ್ಸಿಯ ಟ್ರೋಫಿ ಪಯಣ ನಿಜಕ್ಕೂ ಫುಟ್ಬಾಲ್ ಇತಿಹಾಸದ ಅತ್ಯಂತ ವಿಶೇಷ ಅಧ್ಯಾಯಗಳಲ್ಲಿ ಒಂದು!

ನೋಡಿರಿ

