ವಂತಾರದಲ್ಲಿ ಸಿಂಹದ ಮರಿಗೆ ಲಿಯೋನೆಲ್ ಹೆಸರು – ಆನೆಯೊಂದಿಗೆ ಫುಟ್ಬಾಲ್ ಆಡಿ ಸಂಭ್ರಮಿಸಿದ ಮೆಸ್ಸಿ

ವಂತಾರದಲ್ಲಿ ಸಿಂಹದ ಮರಿಗೆ ಲಿಯೋನೆಲ್ ಹೆಸರು – ಆನೆಯೊಂದಿಗೆ ಫುಟ್ಬಾಲ್ ಆಡಿ ಸಂಭ್ರಮಿಸಿದ ಮೆಸ್ಸಿ

ಭಾರತದ ಪ್ರವಾಸದಲ್ಲಿರುವ ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ವಂತಾರ ವನ್ಯಜೀವಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೆಸ್ಸಿ ಆನೆಗಳ ಜೊತೆ ಫುಟ್ಬಾಲ್ ಆಡಿದ್ದು ವಿಶೇಷವಾಗಿತ್ತು. ಜೊತೆಗೆ ಇದೇ ವೇಳೆ ಸಿಂಹದ ಮರಿಗೆ ಮೆಸ್ಸಿ ಹೆಸರನ್ನು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ:3 ದಿನ.. 4 ಸಿಟಿ.. ₹1000 ಕೋಟಿ INCOME – ಭಾರತದಲ್ಲಿ ದುಡ್ಡಿನ ಮಳೆ ಸುರಿಸಿದ ಮೆಸ್ಸಿ!

ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಗುಜರಾತ್‌ನ ಜಾಮ್ನಗರ್‌ನಲ್ಲಿರುವ ವಂತಾರ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದರು. ರಿಲಯನ್ಸ್ ಫೌಂಡೇಷನ್‌ನ ಸ್ಥಾಪಕ ಅನಂತ್ ಅಂಬಾನಿ ಅವರು ಮೆಸ್ಸಿಯನ್ನು ವಂತಾರಕ್ಕೆ ಆಹ್ವಾನಿಸಿದರು. ಮೆಸ್ಸಿ ಅವರು ತಮ್ಮ ಇಂಟರ್ ಮಿಯಾಮಿ ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ವಂತಾರಗೆ ಆಗಮಿಸಿದ್ದರು. ವಂತಾರಕ್ಕೆ ಆಗಮಿಸಿದ ಮೆಸ್ಸಿ ಅವರನ್ನು ಸಾಂಪ್ರದಾಯಿಕ ಹಿಂದೂ ಆಚರಣೆಗಳೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ಜಾನಪದ ಸಂಗೀತ, ಹೂವುಗಳ ಮಳೆ ಮತ್ತು ಆರತಿಯೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಮಹಾ ಆರತಿಯಲ್ಲಿ ಮೆಸ್ಸಿ ಭಾಗವಹಿಸಿ, ಅಂಬೆ ಮಾತೆ, ಗಣೇಶ, ಹನುಮಾನ್ ಮತ್ತು ಶಿವನ ಪೂಜೆಗಳಲ್ಲಿ ಭಾಗಿಯಾದರು.

ವಂತಾರಕ್ಕೆ ಆಗಮಿಸಿದ ಮೆಸ್ಸಿಯವರು, ಸಿಂಹಗಳು, ಹುಲಿಗಳು, ಚಿರತೆಗಳು ಸೇರಿದಂತೆ ಅನೇಕ ಪ್ರಾಣಿಗಳ ಪ್ರಾಣಿಗಳ ಜೊತೆ ಸಮಯ ಕಳೆದಿದರು. ನಂತರ ಮಲ್ಟಿ-ಸ್ಪೆಷಾಲಿಟಿ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದರು. ಒಕಾಪಿ, ಖಡ್ಗಮೃಗಗಳು, ಜಿರಾಫೆಗಳು ಮತ್ತು ಆನೆಗಳಿಗೆ ಆಹಾರ ನೀಡಿದರು. ಇದೇ ವೇಳೆ ಅನಂತ್ ಅಂಬಾನಿ ಮತ್ತು ಅವರ ಪತ್ನಿ ರಾಧಿಕಾ ಮರ್ಚಂಟ್ ಅವರು ಸಿಂಹದ ಮರಿಗೆ ಮೆಸ್ಸಿ ಅವರ ಭೇಟಿಯ ಗೌರವಾರ್ಥವಾಗಿ ‘ಲಿಯೋನೆಲ್’ ಎಂದು ಹೆಸರಿಟ್ಟರು. ಆನೆಗಳ ಆರೈಕೆ ಕೇಂದ್ರದಲ್ಲಿ ಮೆಸ್ಸಿ ಅವರು ರಕ್ಷಿತ ಆನೆ ಮರಿ ಮಾಣಿಕ್ಲಾಲ್‌ನೊಂದಿಗೆ ಫುಟ್ಬಾಲ್ ಆಡಿ ಗಮನಸೆಳೆದರು. ಆ ಬಳಿಕ ನಡೆದ ಸಂದರ್ಶನದಲ್ಲಿ ಮಾತನಾಡಿದ ಮೆಸ್ಸಿ, ವಂತಾರದ ಕಾರ್ಯವನ್ನು ಶ್ಲಾಘಿಸಿದರು. ‘ವಂತಾರ ಮಾಡುತ್ತಿರುವ ಕೆಲಸ ನಿಜವಾಗಿಯೂ ಸುಂದರವಾಗಿದೆ. ಪ್ರಾಣಿಗಳಿಗೆ ನೀಡುವ ಆರೈಕೆ, ರಕ್ಷಣೆ ಮತ್ತು ನೋಡಿಕೊಳ್ಳುವ ರೀತಿ ಶ್ಲಾಘನೀಯ. ವಂತಾರಕ್ಕೆ ಬೆಂಬಲ ನೀಡಲು ಮತ್ತೆ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಮೆಸ್ಸಿ ಇದೇ ವೇಳೆ ಹೇಳಿದ್ದಾರೆ.

Sulekha