ತಾನೇ ಸಾಕಿ ಸಲಹಿದ್ದ ಸಿಂಹಕ್ಕೆ ಆಹಾರವಾದ ಮೃಗಾಲಯ ಸಿಬ್ಬಂದಿ – ಸಿಂಹಕ್ಕೆ ದಯಾಮರಣ ನೀಡಿದ ಝೂ

ತಾನೇ ಸಾಕಿ ಸಲಹಿದ್ದ ಸಿಂಹಕ್ಕೆ ಆಹಾರವಾದ ಮೃಗಾಲಯ ಸಿಬ್ಬಂದಿ – ಸಿಂಹಕ್ಕೆ ದಯಾಮರಣ ನೀಡಿದ ಝೂ

ಹುಟ್ಟಿದಾಗಿನಿಂದ ಸಾಕಿ ಸಲಹಿದ್ದ ಮೃಗಾಲಯ ಸಿಬ್ಬಂದಿಯನ್ನೇ ಸಿಂಹವೊಂದು ಕೊಂದು ಹಾಕಿರುವ ಘಟನೆ ನಡೆದಿದೆ. ಇದೀಗ ಈ ಸಿಂಹಕ್ಕೆ ಮೃಗಾಲಯ ದಯಾಮರಣ ನೀಡಿದೆ ಎಂದು ವರದಿಯಾಗಿದೆ.

ನೈಜೀರಿಯಾದ ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯದ ಆವರಣದಲ್ಲಿರುವ ಝೂನಲ್ಲಿ ಈ ಘಟನೆ ನಡೆದಿದೆ.  ಸಿಂಹದ ದಾಳಿಯಿಂದಲೇ ಸಾವಿಗೀಡಾದ ಮೃಗಾಲಯ ಸಿಬ್ಬಂದಿಯನ್ನು  ಒಲಬೊಡೆ ಒಲವುಯಿ ಎಂದು ಗುರುತಿಸಲಾಗಿದೆ. ಒಲಬೊಡೆ ಒಲವುಯಿ ಸುಮಾರು 9 ವರ್ಷಗಳಿಂದ ಈ ಸಿಂಹವನ್ನು ಸಾಕಿ ಸಲಹಿದ್ದ. ಇದು ಹುಟ್ಟಿದಾಗಿನಿಂದಲೂ ಒಲಬೊಡೆ ಒಲವುಯಿ ಈ ಸಿಂಹದ ಮರಿಯ ಲಾಲನೆ ಪಾಲನೆ ಮಾಡುತ್ತಿದ್ದ. ಸಿಂಹ ಹೀಗೆ ತನ್ನ ಸಾಕಿದವನ ಮೇಲೆಯೇ ದಾಳಿ ನಡೆಸಿ ಕೊಂದು ಹಾಕಿದೆ.

ಇದನ್ನೂ ಓದಿ: ಆರ್ಥಿಕವಾಗಿ ಪಾತಾಳ ಸೇರುತ್ತಿದೆ ಪಾಕಿಸ್ತಾನ – ಇನ್ನೆರಡು ತಿಂಗಳಲ್ಲಿ ಪಾಕ್ ಆಟ ಬಂದ್..!

ಘಟನೆ ನಡೆಯುವ ವೇಳೆ  ಒಲಬೊಡೆ ಒಲವುಯಿ  ಸಿಂಹಕ್ಕೆ ಆಹಾರ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ವೇಳೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃಗಾಲಯದ ಇನ್ನೊಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಒಲಬೊಡೆ ಒಲವುಯಿ ಅವರನ್ನು ಸಿಂಹದ ದಾಳಿಯಿಂದ ಉಳಿಸಲು ಅವರ ಸಹೋದ್ಯೋಗಿಗಳು ಯತ್ನಿಸಿದ್ದರಾದು ಅಷ್ಟರಲ್ಲಾಗಲೇ  ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಒಎಯು ಸಿಬ್ಬಂದಿ ಹೇಳಿಕೆ ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.  ಹೀಗೆ ಮೃಗಾಲಯದ ಸಿಬ್ಬಂದಿ ಮೇಲೆಯೇ ದಾಳಿ ಮಾಡಿದ ಸಿಂಹಕ್ಕೆ ದಯಾಮರಣ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.

Shwetha M