ತಾಯಿ ಸಾವಿಗೆ ರಜೆ ಹಾಕಿದ್ದಕ್ಕೆ ಕೆಲಸದಿಂದ ವಜಾ – ಗೂಗಲ್ ವಿರುದ್ಧ ನೋವು ತೋಡಿಕೊಂಡ ಟೆಕ್ಕಿ

ತಾಯಿ ಸಾವಿಗೆ ರಜೆ ಹಾಕಿದ್ದಕ್ಕೆ ಕೆಲಸದಿಂದ ವಜಾ – ಗೂಗಲ್ ವಿರುದ್ಧ ನೋವು ತೋಡಿಕೊಂಡ ಟೆಕ್ಕಿ

ಆರ್ಥಿಕ ಹೊಡೆತಕ್ಕೆ ಸಿಲುಕಿ ಈಗಾಗ್ಲೇ ದೈತ್ಯ ಟೆಕ್ ಸಂಸ್ಥೆಗಳೇ ತಮ್ಮ ಉದ್ಯೋಗಿಗಳನ್ನ ವಜಾಗೊಳಿಸುತ್ತಿವೆ. ಇತ್ತೀಚೆಗೆ ಗೂಗಲ್ ಸಂಸ್ಥೆ ಕೂಡ ತನ್ನ 12 ಸಾವಿರ ಉದ್ಯೋಗಿಗಳನ್ನ ಏಕಕಾಲಕ್ಕೆ ವಜಾಗೊಳಿಸೋದಾಗಿ ಘೋಷಣೆ ಮಾಡಿದೆ.

ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ರು. ಆದ್ರೆ ಗೂಗಲ್ ಸಂಸ್ಥೆ ಕೊಟ್ಟ ದಿಢೀರ್​ ಶಾಕ್​ಗೆ ಅಲ್ಲಿದ್ದ ಸಿಬ್ಬಂದಿಗೆ ದಿಕ್ಕೇ ತೋಚದಂತಾಗಿದೆ. ಹೀಗೆ ಕೆಲಸ ಕಳೆದುಕೊಂಡ ಉದ್ಯೋಗಿಗಳಲ್ಲಿ ಒಬ್ಬರು ತಮ್ಮ ನೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಾನಿಯಾ ಮಿರ್ಜಾ ಗ್ರ್ಯಾಂಡ್ ಸ್ಲಾಮ್ ಪಯಣ ಅಂತ್ಯ – ಕೊನೇ ಪಂದ್ಯದ ಬಳಿಕ ಮೂಗುತಿ ಸುಂದರಿ ಭಾವುಕ

ತನ್ನ ತಾಯಿ ಸಾವಿನ ಕಾರ್ಯ ಮುಗಿಸಿ ಕೆಲಸಕ್ಕೆ ಮರಳಿದ ಕೆಲವೇ ದಿನಗಳಲ್ಲಿ ತನ್ನನ್ನು ಕೆಲಸದಿಂದ ವಜಾ ಮಾಡಿರೋದಾಗಿ ನೋವು ತೋಡಿಕೊಂಡಿದ್ದಾರೆ. ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೋ ನಿವಾಸಿ ಟಾಮಿ ಯಾರ್ಕ್ ಎಂಬುವವರ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಹೀಗಾಗಿ ಟಾಮಿ ನಾಲ್ಕು ದಿನ ಕೆಲಸಕ್ಕೆ ರಜೆ ಹಾಕಿ ಅಂತಿಮ ವಿಧಿವಿಧಾನಗಳನ್ನ ನೆರವೇರಿಸಿ ಬಂದಿದ್ರು. ಆದ್ರೆ ಹೀಗೆ ಮರಳಿದ ಟಾಮಿರನ್ನ ಗೂಗಲ್ ಸಂಸ್ಥೆ ಕೆಲಸದಿಂದ ತೆಗೆದುಹಾಕಿದೆ. ಗೂಗಲ್ ಸಂಸ್ಥೆಯ ಈ ನಡೆ ನೆಲಕ್ಕೆ ಬಿದ್ದವನನ್ನ ಹೊಡೆದಂತಿದೆ ಹಾಗೇ ಕಪಾಳಕ್ಕೆ ಬಾರಿಸಿದಂತಿದೆ ಎಂದು ತಮ್ಮ ದುಃಖ ತೋಡಿಕೊಂಡಿದ್ದಾರೆ.

ಇದಲ್ಲದೆ, ಟಾಮಿ ತಮ್ಮ ತಾಯಿಯೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ. “ತನ್ನ ತಾಯಿಯೊಂದಿಗೆ ಕಡೇ ಕ್ಷಣದವರೆಗೆ ಸಮಯ ಕಳೆದಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ನನ್ನ ಕೆಲಸ ಕಳೆದುಕೊಂಡಿರುವುದರ ಬಗ್ಗೆ ಚಿಂತಿಸುವುದಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಆ ಸಂಸ್ಥೆಯಲ್ಲಿ ಕೆಲಸ ಮಾಡುವುದಿಲ್ಲ”  ಎಂದು ಹೇಳಿಕೊಂಡಿದ್ದಾರೆ.

suddiyaana