ಚಾಮರಾಜನಗರದಲ್ಲಿ ಲಘು ವಿಮಾನ ಪತನ – ತಾಂತ್ರಿಕ ದೋಷವೇ ಕಾರಣವಾಯ್ತಾ?

ಚಾಮರಾಜನಗರದಲ್ಲಿ ಲಘು ವಿಮಾನ ಪತನ – ತಾಂತ್ರಿಕ ದೋಷವೇ ಕಾರಣವಾಯ್ತಾ?

ಚಾಮರಾಜನಗರ: ಲಘು ವಿಮಾನವೊಂದು ಭೋಗಪುರದ ಹೊರವಲಯದಲ್ಲಿ ಪತನಗೊಂಡು ಧಗ ಧಗನೇ ಹೊತ್ತಿ ಉರಿದಿತ್ತು. ಇದೀಗ ಈ ಘಟನೆಗೆ ಕಾರಣವೇನು ಅನ್ನು ವಿಚಾರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಬೆಂಗಳೂರಿನ HAL ನಿಂದ ಹೊರಟಿದ್ದ ಲಘು ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡಿತ್ತು. ವಿಮಾನ ಅಪಘಾತದ ಸುಳಿಗೆ ಸಿಲುಕುತ್ತಿದ್ದಂತೆ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‌ಎಎಲ್‌ನ ಸೇನಾ ಹೆಲಿಕಾಪ್ಟರ್‌ಗಳು ಪೈಲಟ್‌ಗಳಾದ ತೇಜ್ ಪಾಲ್ ಹಾಗೂ ಭೂಮಿಕಾ ಇಬ್ಬರನ್ನೂ ಏರ್‌ಲಿಫ್ಟ್ ಮೂಲಕ ರವಾನೆ ಮಾಡಿದ್ದರು. ಇಬ್ಬರಿಗೂ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಲಘು ವಿಮಾನ ಪತನ – ಪೈಲಟ್‌ಗಳು ಪಾರಾಗಿದ್ದು ಹೇಗೆ ಗೊತ್ತಾ?

ಲಘು ವಿಮಾನದಲ್ಲಿ ತರಬೇತಿ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡಿದೆ. ಇನ್ನು ಪ್ಯಾರಾಚೂಟ್‌ ಬಳಸಿ ಹಾರಿದ ಪೈಲಟ್‌ಗಳಿಗೆ ಸಣ್ಣಪುಟ್ಟಗಾಯಗಳಾಗಿವೆ. ವಿಂಗ್ ಕಮಾಂಡರ್ ತೇಜಪಾಲ್ ತರಬೇತುದಾರ ಪೈಲಟ್ ಹಾಗು ಭೂಮಿಕಾ  ತರಬೇತಿ ಪಡೆಯುತ್ತಿದ್ದ ಪೈಲಟ್ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಏರ್‌ಲಿಪ್ಟ್ ಮಾಡಲಾಗಿದೆ. ಇದು ಸೇನಾ ತರಬೇತಿ ವಿಮಾನದಲ್ಲಿ ಇಬ್ಬರು ಪೈಲಟ್ ಇದ್ದರು. ತೇಜಪಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ  ಹಾಗೂ ಅಗ್ನಿಶಾಮಕ ದಳ ಮುಖ್ಯ ಅಧಿಕಾರಿ ಜಯರಾಮ ಮಾಹಿತಿ ನೀಡಿದ್ದಾರೆ.

ಭಾರತೀಯ ವಾಯು ಸೇನೆಯ ಏರ್ ಮಾರ್ಷಲ್ವಿಮಾನ ಬಿದ್ದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. ಇನ್ನು ವಾಯುಪಡೆ ಅಧಿಕಾರಿಗಳು ಕೂಡ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದು, ಚಾಮರಾಜನಗರದಲ್ಲಿ ವಿಮಾನ ನಿಲ್ಲಿಸಿ ಅಲ್ಲಿಂದ ಸ್ಥಳೀಯ ಪೊಲೀಸರನ್ನು ಕರೆದುಕೊಂಡು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಲಘು ವಿಮಾನ ದುರಂತ ನಡೆದ ಸ್ಥಳಕ್ಕೂ,ಪೈಲಟ್ ಬಿದ್ದಿದ್ದ ಸ್ಥಳಕ್ಕೂ 2 ಕಿಮೀ ಅಂತರ ಇರುವುದನ್ನು ಗಮನಿಸಿದ್ದಾರೆ. ಇನ್ನು ಪೈಲಟ್‌ಗಳು ಕೂಡ ಪರಿಶೀಲನಾ ತಂಡಕ್ಕೆ ಮಾಹಿತಿ ನೀಡಿದ್ದಾರೆ.

suddiyaana