ಮನೆ ಬಾಗಿಲಿಗೆ ಬರಲಿದೆ ಜೀವನದಿ ಕಾವೇರಿ ತೀರ್ಥ! – ಅಂಚೆ ಇಲಾಖೆಯಿಂದ ಹೊಸ ಯೋಜನೆ
ತಲಕಾವೇರಿಯಲ್ಲಿನ ಕುಂಡಿಕೆಯಲ್ಲಿ ಪ್ರತಿ ವರ್ಷ ಕಾವೇರಿ ತೀರ್ಥ ರೂಪದಲ್ಲಿದರ್ಶನ ನೀಡುತ್ತಾಳೆ. ಈ ಸಂದರ್ಭ ಸಹಸ್ರಾರು ಭಕ್ತರು ತೀರ್ಥರೂಪಿಣಿ ಕಾವೇರಿ ತಾಯಿಯನ್ನು ಕಣ್ಣು ತುಂಬಿಕೊಳ್ಳುತ್ತಾರೆ. ಕೇವಲ ಕೊಡಗು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಸಾಕಷ್ಟು ಭಕ್ತರು ಆಗಮಿಸಿ ಇಲ್ಲಿಂದ ತೀರ್ಥ ಕೊಂಡೊಯ್ಯುತ್ತಾರೆ. ‘ಬ್ರಹ್ಮಕುಂಡಿಕೆ’ಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಲಿರುವ ಕಾವೇರಿ ತೀರ್ಥವನ್ನು ಪಡೆಯಲು ಜನರು ಇನ್ಮುಂದೆ ‘ತುಲಾ ಸಂಕ್ರಮಣ’ ದಿನದಂದು ತಲಕಾವೇರಿಗೆ ಧಾವಿಸುವ ಅಗತ್ಯವಿಲ್ಲ. ಇನ್ನು ಮುಂದೆ ಅಂಚೆ ಮೂಲಕ ನಿಮ್ಮ ಬಾಗಿಲಿಗೆ ‘ಶ್ರೀ ತಲಕಾವೇರಿ ದೇವಸ್ಥಾನದ ಪ್ರಸಾದ ತಲುಪಲಿದೆ.
ಇದನ್ನೂ ಓದಿ: ಯುರೋಪ್‌ಗೆ ಮುತ್ತಿಗೆ ಹಾಕಿದ ಇರುವೆಗಳ ಸೈನ್ಯ! – ಇರುವೆ ಮುಟ್ಟಿದ್ದೆಲ್ಲಾ ಸರ್ವನಾಶ!
ಹೌದು, ಭಾರತೀಯ ಅಂಚೆ ಇಲಾಖೆಯು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿ ಇಲಾಖೆಯ ಶ್ರೀ ತಲಕಾವೇರಿ ದೇವಸ್ಥಾನದ ಪ್ರಸಾದವನ್ನು ಇನ್ನು ಮುಂದೆ ಮನೆಬಾಗಿಲಿಗೆ ಕಳುಹಿಸಲಿದೆ. ಕೇವಲ 300 ರೂ. ಗಳಲ್ಲಿ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಪ್ರಸಾದ ತಲುಪಲಿದೆ. ಯಾವುದೇ ಅಂಚೆ ಕಚೇರಿಯಲ್ಲಿ ಇ-ಪಾವತಿ ಮೂಲಕ ಮೊತ್ತವನ್ನು ಪಾವತಿಸಿದರೆ, ಭಕ್ತರು ತಮ್ಮ ಮನೆ ಬಾಗಿಲಿನಲ್ಲೇ ಪ್ರಸಾದವನ್ನು ಪಡೆಯಬಹುದು. ಈ ಪ್ರಸಾದವನ್ನು ಭಾರತೀಯ ಅಂಚೆ ಜಾಲದ ಅಂಚೆ ಕಚೇರಿ ಶಾಖೆಯ ಮೂಲಕ ಯಾವುದೇ ದೂರದ ಮನೆಗಳಿಗೆ ಹಸ್ತಾಂತರಿಸಲಾಗುತ್ತದೆ.
‘ಭಾರತೀಯ ಅಂಚೆ ಇಲಾಖೆ ಕೈಗೊಂಡಿರುವ ಕಾರ್ಯಕ್ರಮದ ಅಡಿಯಲ್ಲಿ ನಾವು ಭಕ್ತರ ಮನೆ ಬಾಗಿಲಿಗೆ ಪ್ರಸಾದವನ್ನು ಪೂರೈಸುತ್ತಿದ್ದೇವೆ. ಮಂಗಳಕರವಾದ ‘ತುಲಾ ಸಂಕ್ರಮಣ’ದ ಮಹತ್ವವನ್ನು ಅರ್ಥಮಾಡಿಕೊಂಡು, ಭಾರತೀಯ ಅಂಚೆಯು ಭಕ್ತರಿಗೆ ಕಾವೇರಿ ತೀರ್ಥವನ್ನು ಪೂರೈಸುವ ಉಪಕ್ರಮವನ್ನು ತೆಗೆದುಕೊಂಡಿದೆ’ ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಭಕ್ತರು ಪ್ರಸಾದವನ್ನು ಕಾಯ್ದಿರಿಸಲು ಹತ್ತಿರದ ಉಪ ಅಂಚೆ ಕಚೇರಿಗಳು ಅಥವಾ ಪ್ರಧಾನ ಅಂಚೆ ಕಚೇರಿಗೆ ಬರಬೇಕು. ನಂತರ ನಮ್ಮ ಪೋಸ್ಟ್‌ಮ್ಯಾನ್‌ಗಳು ಅವರ ಮನೆ ಬಾಲಿಗೆಗೆ ಪ್ರಸಾದವನ್ನು ತಲುಪಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.