ಈ ದೇಶದಲ್ಲಿ ಸೂರ್ಯನಿಗೆ ಡೇ & ನೈಟ್ ಡ್ಯೂಟಿ – ರವಿ ಮುಳುಗುವುದು ಕೇವಲ 40 ನಿಮಿಷ ಮಾತ್ರ!

ಈ ದೇಶದಲ್ಲಿ ಸೂರ್ಯನಿಗೆ ಡೇ & ನೈಟ್ ಡ್ಯೂಟಿ – ರವಿ ಮುಳುಗುವುದು ಕೇವಲ 40 ನಿಮಿಷ ಮಾತ್ರ!

ವೈಜ್ಞಾನಿಕವಾಗಿ ಮನುಷ್ಯ ಎಷ್ಟೇ ಮುಂದುವರಿದರೂ ಕೂಡ ಕೆಲವೊಂದು ವಿಚಾರಗಳು ಅಚ್ಚರಿಯ ಜೊತೆಗೆ ಪ್ರಶ್ನಾರ್ಥಕವಾಗಿಯೇAll Posts ಉಳಿದಿವೆ. ಅದ್ರಲ್ಲೂ ನಿಸರ್ಗದ ಚಮತ್ಕಾರಗಳನ್ನು ಒಪ್ಪಿಕೊಳ್ಳಲೇಬೇಕು. ಸಾಮಾನ್ಯವಾಗಿ ಭೂಮಿಯ ಮೇಲೆ 12 ಗಂಟೆ ಹಗಲು ಮತ್ತು 12 ಗಂಟೆ ರಾತ್ರಿ ಇರುವುದು ನಮಗೆಲ್ಲರಿಗೂ ಗೊತ್ತು. ಆದರೆ, ವಿಶ್ವದ ಒಂದು ದೇಶದಲ್ಲಿ ರಾತ್ರಿ ಎನ್ನುವುದು ಕೇವಲ ಹೆಸರಿಗಷ್ಟೇ ಇದೆ.

ಇದನ್ನೂ ಓದಿ : ಜೇನುತುಪ್ಪ ತೆಗೆಯಲು ಹೋದ ಬಾಲಕ ಬಂಡೆಗಳ ಮಧ್ಯೆ 12 ಗಂಟೆ ಲಾಕ್!‌ – ಡೇಂಜರಸ್‌ ಜಾಗದಿಂದ ಬಚಾವ್‌ ಆಗಿದ್ದು ಹೇಗೆ?

ಹೌದು, ಈ ದೇಶದಲ್ಲಿ ಸೂರ್ಯ ಮುಳುಗಿದ ಕೇವಲ 40 ನಿಮಿಷಗಳಲ್ಲೇ ಮತ್ತೆ ಉದಯಿಸುತ್ತಾನೆ. ಹಾಗಾಗಿಯೇ, ಈ ದೇಶವನ್ನು ಸೂರ್ಯ ಮುಳುಗದ ನಾಡು ಅಂತಾನೇ ಕರೆಯಲಾಗುತ್ತೆ. ಯಾಕಂದ್ರೆ ಕೇವಲ 40 ನಿಮಿಷಗಳ ಕಾಲ ಮಾತ್ರ ರಾತ್ರಿ ಇರುವ ಆ ದೇಶವೇ ನಾರ್ವೆ. ಹಾಗಾಗಿಯೇ, ಯುರೋಪ್ ಖಂಡದ ಉತ್ತರ ಭಾಗದಲ್ಲಿರುವ ಈ ದೇಶವನ್ನು ಮಧ್ಯರಾತ್ರಿಯ ಸೂರ್ಯನ ನಾಡು ಅಥವಾ ಲ್ಯಾಂಡ್ ಆಫ್ ದಿ ಮಿಡ್‌ನೈಟ್ ಸನ್ ಎಂದು ಕರೆಯಲಾಗುತ್ತದೆ. ಇಲ್ಲಿನ ಹ್ಯಾಮರ್‌ಫೆಸ್ಟ್ ಎಂಬ ನಗರದಲ್ಲಿ ಸೂರ್ಯನು ರಾತ್ರಿ ಸುಮಾರು 12 ಗಂಟೆ 43 ನಿಮಿಷಕ್ಕೆ ಅಸ್ತಮಿಸುತ್ತಾನೆ ಮತ್ತು ಕೇವಲ 40 ನಿಮಿಷಗಳ ನಂತರ ಅಂದರೆ ಸುಮಾರು 1 ಗಂಟೆ 23 ನಿಮಿಷಕ್ಕೆ ಮತ್ತೆ ಉದಯಿಸುತ್ತಾನೆ. ಈ 40 ನಿಮಿಷಗಳ ಕಾಲ ಮಾತ್ರ ಅಲ್ಲಿ ಕತ್ತಲೆ ಇರುತ್ತದೆ.

ಈ ಘಟನೆಗೆ ಮಿಡ್‌ನೈಟ್ ಸನ್ ಎಂದು ಕರೆಯಲಾಗುತ್ತದೆ. ಅಂದರೆ ಮಧ್ಯರಾತ್ರಿ ಸಮಯದಲ್ಲಿಯೂ ಸೂರ್ಯ ಮುಳುಗದೆ ಕಾಣಿಸುವುದು. ಇದು ಆರ್ಕ್ಟಿಕ್ ಸರ್ಕಲ್ ಒಳಗಿರುವ ದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಘಟನೆ. ನಾರ್ವೇ ಕೂಡ ಆರ್ಕ್ಟಿಕ್ ಸರ್ಕಲ್ ವ್ಯಾಪ್ತಿಯಲ್ಲಿ ಇರುವುದರಿಂದ ಇಲ್ಲಿ ಈ ವೈಶಿಷ್ಟ್ಯ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಭೂಮಿಯ ಅಕ್ಷವು ಸುಮಾರು 23.5 ಡಿಗ್ರಿಗಳಷ್ಟು ಓರೆಯಾಗಿರುವುದರಿಂದ, ಬೇಸಿಗೆ ಕಾಲದಲ್ಲಿ ಉತ್ತರ ಧ್ರುವದ ಭಾಗಗಳಲ್ಲಿ ಸೂರ್ಯ ಅಸ್ತಮಿಸುವ ಸಮಯ ಕಡಿಮೆಯಾಗುತ್ತದೆ. ಇದರಿಂದ ದಿನದ ಅವಧಿ ಹೆಚ್ಚಾಗಿ, ರಾತ್ರಿ ಸಮಯವು ಬಹಳ ಕಡಿಮೆಯಾಗುತ್ತದೆ. ಕೆಲ ದಿನಗಳಲ್ಲಿ ಸೂರ್ಯ ಸಂಪೂರ್ಣವಾಗಿ ಅಸ್ತಮಿಸದೇ ಇರುವುದರಿಂದ ನಿಜವಾದ ರಾತ್ರಿ ಕಾಣುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾರ್ವೇ ನಿವಾಸಿಗಳ ದಿನಚರಿ ಸಾಮಾನ್ಯ ದೇಶಗಳಿಗಿಂತ ಭಿನ್ನವಾಗಿರುತ್ತದೆ. ರಾತ್ರಿ ಕತ್ತಲೆ ಇಲ್ಲದ ಕಾರಣ ಜನರು ಹೆಚ್ಚು ಸಮಯ ಹೊರಗೆ ಕಳೆಯುತ್ತಾರೆ. ಪ್ರವಾಸಿಗರಿಗೂ ಇದು ಒಂದು ವಿಶಿಷ್ಟ ಅನುಭವವಾಗುತ್ತದೆ. ಮಿಡ್‌ನೈಟ್ ಸನ್ ನೋಡಲು ಪ್ರಪಂಚದ ವಿವಿಧ ಭಾಗಗಳಿಂದ ಪ್ರವಾಸಿಗರು ನಾರ್ವೇಗೆ ಭೇಟಿ ನೀಡುತ್ತಾರೆ. ಇದು ಪ್ರಕೃತಿ ಪ್ರಿಯರಿಗೆ ಅತ್ಯಂತ ಆಕರ್ಷಕ ಅನುಭವವಾಗಿದೆ. ಬೇಸಿಗೆ ಸಮಯದಲ್ಲಿ ಈ ದೇಶ ಪ್ರವಾಸೋದ್ಯಮದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಮೇ ತಿಂಗಳಿನಿಂದ ಜುಲೈ ಅಂತ್ಯದವರೆಗೆ ಇಲ್ಲಿ ಸೂರ್ಯ ಸಂಪೂರ್ಣವಾಗಿ ಮರೆಯಾಗುವುದೇ ಇಲ್ಲ. ಪ್ರಕೃತಿಯ ಇಂತಹ ವಿಸ್ಮಯಗಳು ಭೂಮಿ ಎಷ್ಟು ವೈವಿಧ್ಯಮಯವಾಗಿದೆ ಎಂಬುದನ್ನು ನಮಗೆ ನೆನಪಿಸುತ್ತವೆ.

Shantha Kumari

Leave a Reply

Your email address will not be published. Required fields are marked *