ಲಿಬಿಯಾದಲ್ಲಿ ವಿನಾಶ ಸೃಷ್ಟಿಸಿದ ಪ್ರವಾಹ – ಸಾವಿನ ಸಂಖ್ಯೆ 6,000 ಕ್ಕೆ ಏರಿಕೆ!

ಲಿಬಿಯಾದಲ್ಲಿ ವಿನಾಶ ಸೃಷ್ಟಿಸಿದ ಪ್ರವಾಹ – ಸಾವಿನ ಸಂಖ್ಯೆ 6,000 ಕ್ಕೆ ಏರಿಕೆ!

ಲಿಬಿಯಾದಲ್ಲಿ ಭಾರಿ ಮಳೆ ಹಾಗೂ ಚಂಡಮಾರುತದಿಂದಾಗಿ ಉಂಟಾದ ಪ್ರವಾಹದಿಂದ 2 ಅಣೆಕಟ್ಟೆಗಳು ಒಡೆದು ದೊಡ್ಡ ದುರಂತವೇ ನಡೆದುಹೋಗಿದೆ. ಈ ಅವಘಡದಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಅವಘಡದಲ್ಲಿ 6000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಯೋಧನನ್ನು ಉಳಿಸಲು ಪ್ರಾಣ ತ್ಯಾಗ ಮಾಡಿದ ಶ್ವಾನ- ಭಾರತೀಯ ಸೇನೆಯ ‘ಕೆಂಟ್’ ಇನ್ನಿಲ್ಲ!

ಮೆಡಿಟರೇನಿಯನ್‌ ವಲಯದಿಂದ ಧಾವಿಸಿ ಬಂದ ಡೇನಿಯಲ್‌ ಚಂಡಮಾರುತ ಕಳೆದ ಸೋಮವಾರ ಲಿಬಿಯಾದ ಪೂರ್ವ ಭಾಗಗಳ ಮೇಲೆ ಅಪ್ಪಳಿಸಿದ್ದು ಭಾರೀ ಪ್ರಮಾಣದ ಮಳೆಗೆ ಕಾರಣವಾಗಿದೆ. ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿದು ಬಂದ ಕಾರಣ ಎರಡು ಅಣೆಕಟ್ಟುಗಳು ಒತ್ತಡ ತಾಳಲಾಗದೇ ರಾತ್ರಿ ವೇಳೆ ಒಡೆದು ಹೋಗಿದೆ. ಹೀಗಾಗಿ ಅಣೆಕಟ್ಟೆಯಲ್ಲಿನ ನೀರು ಭಾರಿ ರಭಸದೊಂದಿಗೆ ವಾಡಿ ಡೆರ್ನಾ ನದಿಗೆ ಸೇರಿಕೊಂಡು ಡೆರ್ನಾ ನಗರವನ್ನು ಸರ್ವನಾಶ ಮಾಡಿದೆ.

ನಾಪತ್ತೆಯಾದವ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್ (ಐಎಫ್‌ಆರ್‌ಸಿ) ಲಿಬಿಯಾ ರಾಯಭಾರಿ ಹೇಳಿದೆ. ಪ್ರವಾಹದ ಸಂತ್ರಸ್ತರಿಗೆ ಸಹಾಯ ಮಾಡುವಾಗ ಮೂವರು ಐಎಫ್‌ಆರ್‌ಸಿ ಸ್ವಯಂಸೇವಕರು ಸಾವನ್ನಪ್ಪಿದ್ದಾರೆ. ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿಯು ಲಿಬಿಯಾಗೆ ಸಹಾಯ ಮಾಡಲು ತುರ್ತು ಪ್ರತಿಕ್ರಿಯೆ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಹೇಳಿದೆ.

Shwetha M