ಚಂಡಮಾರುತದ ಅಬ್ಬರಕ್ಕೆ ನಲುಗಿದ ಲಿಬಿಯಾ – ಬರೋಬ್ಬರಿ 2000 ಸಾವಿರ ಮಂದಿ ಸಾವು!

ಚಂಡಮಾರುತದ ಅಬ್ಬರಕ್ಕೆ ನಲುಗಿದ ಲಿಬಿಯಾ – ಬರೋಬ್ಬರಿ 2000 ಸಾವಿರ ಮಂದಿ ಸಾವು!

ಡೇನಿಯಲ್ ಚಂಡಮಾರುತ ಹಾಗೂ ಭಾರಿ ಪ್ರವಾಹದ ಅಬ್ಬರಕ್ಕೆ ಉತ್ತರ ಆಫ್ರಿಕಾದ ದೇಶದ ಪೂರ್ವ ಭಾಗಗಳಲ್ಲಿಸುಮಾರು 2,000 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪೂರ್ವ ನಗರವಾದ ಡರ್ನಾದಲ್ಲಿ 2,000 ಜನರು ಚಂದ್ರಮರುತ ಹೊಡೆತಕ್ಕೆ ಮೃತಪಟ್ಟಿರುವುದಾಗಿ ಹಾಗೂ ಸಾವಿರಾರು ಜನರು ಕಾಣೆಯಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಒಸಾಮಾ ಹಮದ್ ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಧಾನಿ ಸೋಮವಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು ಮತ್ತು ದೇಶಾದ್ಯಂತ ಧ್ವಜಗಳನ್ನು ಅರ್ಧಮಟ್ಟಕ್ಕೆ ಹಾರಿಸಲು ಆದೇಶಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರೈಲು ಚಾಲಕರು ನಿದ್ರೆಗೆ ಜಾರಿದ್ರೆ ಬಡಿಯುತ್ತೆ ಅಲರಾಂ! – ರೈಲ್ವೇ ಇಲಾಖೆಯಿಂದ ವಿಶಿಷ್ಟ ಸಾಧನ ಅಭಿವೃದ್ದಿ!

ಡೇನಿಯಲ್ ಚಂಡಮಾರುತದ ಬಳಿಕ ಡರ್ನಾದಲ್ಲಿ ಉಂಟಾದ ಪ್ರವಾಹದಿಂದ ಭಾರಿ ವಿನಾಶವನ್ನು ಉಂಟುಮಾಡಿದೆ. ಈ ನಗರವನ್ನು ದುರಂತ ಪ್ರದೇಶವೆಂದು ಘೋಷಿಸಲಾಗಿದೆ. ಇಲ್ಲಿವರೆಗೂ ಸುಮಾರು 2 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಡರ್ನಾದಲ್ಲಿ 5 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೂರ್ವ ಲಿಬಿಯಾ ಸರ್ಕಾರದ ಆರೋಗ್ಯ ಸಚಿವ ಓಥ್ಮಾನ್ ಅಬ್ದುಲ್ಜಲೀಲ್ ಹೇಳಿದ್ದಾರೆ.

suddiyaana