ಲಿಯಾಮ್ ಜಾಗಕ್ಕಾಗಿ ಐವರ ರೇಸ್ – 2026ಕ್ಕೆ RCB ಕ್ಯಾಂಪ್ ಸೇರೋದ್ಯಾರು?
ಆಲ್ ರೌಂಡರ್ ಟಿಕೆಟ್.. ಯಾರಿಗೆ ಲಾಟರಿ?

ಲಿಯಾಮ್ ಜಾಗಕ್ಕಾಗಿ ಐವರ ರೇಸ್ – 2026ಕ್ಕೆ RCB ಕ್ಯಾಂಪ್ ಸೇರೋದ್ಯಾರು?ಆಲ್ ರೌಂಡರ್ ಟಿಕೆಟ್.. ಯಾರಿಗೆ ಲಾಟರಿ?

2026ರ ಐಪಿಎಲ್​ಗೆ ತಂಡಗಳನ್ನ ಸ್ಟ್ರಾಂಗ್ ಮಾಡಿಕೊಳ್ಳೋಕೆ ಈಗಾಗ್ಲೇ ಫ್ರಾಂಚೈಸಿಗಳಲ್ಲಿ ಲೆಕ್ಕಾಚಾರಗಳು ಶುರುವಾಗಿವೆ. ಮಿನಿ ಹರಾಜಿಗೂ ಮುನ್ನವೇ ಕೆಲ ಫ್ರಾಂಚೈಸಿಗಳು ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲು ಮುಂದಾಗುತ್ತಿದೆ. ಅಂದ್ರೆ ಎರಡು ತಂಡಗಳು ಪರಸ್ಪರ ಆಟಗಾರರನ್ನ ಬದಲಾವಣೆ ಮಾಡಿಕೊಳ್ಳಬಹುದು. ಅಥವಾ ಮಾರಾಟ ಮಾಡಬಹುದು. ಕೆಲವೊಮ್ಮೆ ಈ ಟ್ರಾನ್ಸ್​ಫರ್ ಡೀಲ್ ಗೌಪ್ಯವಾಗಿಯೂ ಇಡಬಹುದು. ಇನ್ನು ಈ ಟ್ರೇಡ್ ವಿಂಡೋ ಆಪ್ಶನ್ ಐಪಿಎಲ್ ಮಿನಿ ಹರಾಜು ನಡೆಯುವ ಮುನ್ನ ಒಂದು ವಾರದವರೆಗೂ ಚಾಲ್ತಿಯಲ್ಲಿರುತ್ತೆ. ಇದೇ ಆಪ್ಶನ್​ನಡಿ ಆರ್​ಸಿಬಿ ಲಿಯಾಮ್ ಲಿವಿಂಗ್​ಸ್ಟೋನ್​ರನ್ನ ಕೈಬಿಡೋ ಸಾಧ್ಯತೆ ಇದೆ.

ಇದನ್ನೂ ಓದಿ : 5,590 ಕೋಟಿ ಅಕ್ರಮ – ದೆಹಲಿ ಮಾಜಿ ಸಚಿವ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ

ಮಿಡಲ್ ಆರ್ಡರ್ ನಲ್ಲಿ ಬಲ ತುಂಬದ ಲಿವಿಂಗ್ ಸ್ಟೋನ್!

18ನೇ ಸೀಸನ್​ನಲ್ಲಿ ಆರ್​ಸಿಬಿ ಕಪ್ ಗೆಲ್ಲೋಕೆ ಪ್ರತಿಯೊಬ್ಬ ಆಟಗಾರನ ಕೊಡುಗೆಯೂ ಜಾಸ್ತಿನೇ ಇದೆ. ಹೀಗಿದ್ರೂ ಲಿಯಾಮ್ ಲಿವಿಂಗ್ ಸ್ಟೋನ್ ಮಾತ್ರ ಕ್ಲಿಕ್ ಆಗಿರಲಿಲ್ಲ. ಮಿಡಲ್ ಆರ್ಡರ್ ನಲ್ಲಿ ಪವರ್ ಶೋ ತೋರಿಸಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ದುಬಾರಿಯಾಗಿದ್ದಾರೆ. ಕಳೆದ ನವೆಂಬರ್​ನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ 8.75 ಕೋಟಿ ರೂಪಾಯಿ ನೀಡಿ ಇವ್ರನ್ನ ಖರೀದಿ ಮಾಡಿತ್ತು. ಆದ್ರೆ ಕೊಟ್ಟ ಹಣಕ್ಕೂ ಅವ್ರ ಪರ್ಫಾಮೆನ್ಸ್​ಗೂ ತಾಳೆ ಆಗ್ಲಿಲ್ಲ. ಮೊದಲ ಮೂರು ಪಂದ್ಯಗಳಲ್ಲಿ 39.5 ಸರಾಸರಿಯಲ್ಲಿ 146.3 ಸ್ಟ್ರೈಕ್-ರೇಟ್‌ನಲ್ಲಿ 79 ರನ್ ಗಳಿಸಿದ್ರು. ಇದ್ರಲ್ಲಿ ಒಂದು ಅರ್ಧಶತಕವೂ ಸೇರಿತ್ತು. ಆದ್ರೆ ಆ ಬಳಿಕ ಐದು ಇನ್ನಿಂಗ್ಸ್‌ಗಳಲ್ಲಿ 6.6 ರ ಕಳಪೆ ಸರಾಸರಿ ಮತ್ತು 110 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 33 ರನ್‌ಗಳನ್ನು ಗಳಿಸಿದರು. ಹಾಗೇ ಇಡೀ ಪಂದ್ಯಾವಳಿಯಲ್ಲಿ ಕೇವಲ 9 ಓವರ್‌ಗಳನ್ನು ಬೌಲ್ ಮಾಡಿ ಎರಡು ವಿಕೆಟ್‌ಗಳನ್ನು ಪಡೆದರು. ಹೀಗಾಗಿ ನೆಕ್ಸ್​ಟ್ ಸೀಸನ್​ಗೆ ರಿಲೀಸ್ ಮಾಡೋಕೆ ನೋಡ್ತಿದೆ. ಇದ್ರ ನಡುವೆ ಮುಂದಿನ ಆವೃತ್ತಿ ವೇಳೆಗೆ ಮಿನಿ ಹರಾಜಿನಲ್ಲಿ ಆರ್ ಸಿಬಿ ಫ್ರಾಂಚೈಸಿ ಕೆಲವರ ಮೇಲೆ ಕಣ್ಣಿಟ್ಟಿದೆ.

ಮಿಡಲ್ ಆರ್ಡರ್ ಬ್ಯಾಟರ್ ಆಗ್ತಾರಾ ಸರ್ಫರಾಜ್ ಖಾನ್?

ಟೀಂ ಇಂಡಿಯಾದ ಮಿಡಲ್ ಆರ್ಡರ್ ಬ್ಯಾಟ್ಸ್​ಮನ್ ಆಗಿರುವ ಸರ್ಫರಾಜ್ ಖಾನ್ 2025ರ ಐಪಿಎಲ್ ಟೂರ್ನಿಯಲ್ಲಿ ಅನ್ ಸೋಲ್ಡ್ ಆಗಿದ್ರು. ಬಟ್ ಈಗ ತೂಕ ಇಳಿಸಿಕೊಳ್ಳೋದ್ರ ಜೊತೆಗೆ ದೇಶೀಯ ಟೂರ್ನಿಗಳಲ್ಲಿ ಸದ್ದು ಮಾಡ್ತಿದ್ದಾರೆ. ಹೀಗಾಗಿ ಮಿನಿ ಹರಾಜಿನಲ್ಲಿ ಸರ್ಫರಾಜ್ ಮೇಲೆ ಆರ್​ಸಿಬಿ ಕಣ್ಣಿಡಬಹುದು. ಮಿಡಲ್ ಆರ್ಡರ್ ನಲ್ಲಿ ವೇಗವಾಗಿ ರನ್ ಗಳಿಸೋದ್ರ ಜೊತೆಗೆ ಸ್ಪಿನ್ ಬೌಲಿಂಗ್‌ ಮಾಡುವ ಸಾಮರ್ಥ್ಯ ಇದೆ. ಆಲ್ರೆಡಿ ಆರ್​ಸಿಬಿ ಪರವೂ ಆಡಿರುವಂತ ಅನುಭವ ಇದೆ.

ಅನ್ ಸೋಲ್ಡ್ ಆಗಿದ್ದ ಗಸ್ ಅಟ್ಕಿನ್ಸನ್ ಟಾರ್ಗೆಟ್!

2025ರ ಐಪಿಎಲ್​ಗೂ ಮುನ್ನ ಅನ್ ಸೋಲ್ಡ್ ಆಗಿದ್ದ ಗಸ್ ಅಟ್ಕಿನ್ಸನ್ ಕೂಡ ಒಳ್ಳೆಯ ಆಟಗಾರ. 2 ಕೋಟಿ ರೂಪಾಯಿ ಮೂಲ ಬೆಲೆಗೆ ಹರಾಜಿನಲ್ಲಿ ನೋಂದಾಯಿಸಿಕೊಂಡರು ಆದರೆ ಯಾವುದೇ ತಂಡವು ಅವನ ಬಗ್ಗೆ ಆಸಕ್ತಿ ತೋರಿಸದ ಕಾರಣ ಮಾರಾಟವಾಗದೆ ಉಳಿದರು. ಇಂಗ್ಲೆಂಡ್ ಮೂಲದ ಅಟ್ಕಿನ್ಸನ್ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಹೀಗಾಗಿ ನೆಕ್ಸ್ ಟ್ ಸೀಸನ್​ಗೆ ಇವರ ಮೇಲೆ ಕಣ್ಣಿಡಬಹುದು. ಅಲ್ದೇ ಕಳೆದ ಸೀಸನ್​ನಲ್ಲಿ ಜೋಶ್ ಹ್ಯಾಜಲ್‌ವುಡ್ ತಂಡದ ಪ್ರಮುಖ ಬೌಲರ್ ಆಗಿದ್ದರು. ಬಹುತೇಕ ಎಲ್ಲಾ ಹಂತಗಳಲ್ಲಿ ಅವರ ಮೇಲೇ ಡಿಪೆಂಡ್ ಆಗಿತ್ತು. ಒಂದು ವೇಳೆ ಹೇಜಲ್​ವುಡ್ ಅಲಭ್ಯರಾದ್ರೆ ಡೆತ್ ಓವರ್​ಗಳಲ್ಲಿ ಬೌಲ್ ಮಾಡುವಂತ ಸ್ಟ್ರಾಂಗ್ ಪ್ಲೇಯರ್ ಬೇಕಿದೆ. ಅಟ್ಕಿನ್ಸನ್ ಬಂದ್ರೆ ತಂಡಕ್ಕೆ ಪ್ಲಸ್ ಆಗಬಹುದು.

ಕಿವೀಸ್ ತಂಡದ ಆಲ್ ರೌಂಡರ್ ಮೈಕೆಲ್ ಬ್ರೆಸ್ ವೆಲ್ ಮೇಲೆ ಕಣ್ಣು!

ಕಿವೀಸ್ ತಂಡದ ಆಲ್‌ರೌಂಡರ್ ಆಗಿರುವ ಮೈಕೆಲ್ ಬ್ರೆಸ್ ವೆಲ್ ಕೂಡ ಆಪ್ಶನ್ ಇದ್ದಾರೆ. ಲಿವಿಂಗ್ ಸ್ಟೋನ್ ರನ್ನ ಕೈಬಿಟ್ರೆ ಉತ್ತಮ ರಿಪ್ಲೇಸ್ ಮೆಂಟ್ ಆಗಬಹುದು. ಎಂಎಲ್‌ಸಿಯ ಇತ್ತೀಚಿನ ಆವೃತ್ತಿಯಲ್ಲಿ, ಬ್ರೇಸ್‌ವೆಲ್ 135.11 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಕೆಲವೊಂದು ಪಂದ್ಯಗಳಲ್ಲಿ ಪ್ರೆಶರ್​ನಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಬ್ರೇಸ್‌ವೆಲ್ ಬ್ಯಾಟಿಂಗ್ ಜೊತೆಗೆ ಪರಿಣಾಮಕಾರಿ ಬೌಲರ್ ಆಗಬಹುದು. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳೆರಡರಲ್ಲೂ ಅವರು ಬೌಲಿಂಗ್ ಮಾಡಬಹುದು. ಮಿನಿ-ಹರಾಜಿನಲ್ಲಿ ಬ್ರೇಸ್‌ವೆಲ್ ಆಯ್ಕೆಯಾದರೆ, ಆರ್‌ಸಿಬಿಗೆ ಪವರ್ ಸಿಕ್ಕಂತಾಗುತ್ತೆ.

ನುವಾನ್ ತುಷಾರ ಬದಲಿಗೆ ಆರ್ ಸಿಬಿಗೆ ಲ್ಯಾನ್ಸ್ ಮೋರಿಸ್?

ಕಳೆದ ಸೀಸನ್ ನಲ್ಲಿ ಬೆಂಗಳೂರು ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಬೌಲಿಂಗ್ ಸ್ಟ್ರೆಂಥ್ ಆಗಿದ್ರಿಂದ ನುವಾನ್ ತುಷಾರಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಸಿಕ್ಕ ಒಂದೇ ಅವಕಾಶದಲ್ಲಿ ಇಂಪ್ಯಾಕ್ಟ್ ಮಾಡಿದ್ರು. ಆದ್ರೂ ಮುಂದಿನ ಆವೃತ್ತಿಗೆ ಫ್ರಾಂಚೈಸಿಯು ಶ್ರೀಲಂಕಾದ ವೇಗಿಗಳನ್ನು ಬಿಡುಗಡೆ ಮಾಡಬಹುದು. ಹಾಗೇನಾದ್ರೂ ಮಾಡಿದ್ರೆ  ಲ್ಯಾನ್ಸ್ ಮೋರಿಸ್ ಅವ್ರನ್ನ ಸೆಲೆಕ್ಟ್ ಮಾಡಬಹುದು. ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿರೋ ಮೋರಿಸ್ ಟಿ20 ಪಂದ್ಯದ ಬಹುತೇಕ ಎಲ್ಲಾ ಹಂತಗಳಲ್ಲಿ ಮಾರಕ ದಾಳಿ ನಡೆಸಿದ್ದಾರೆ. ಸೋ ಇವ್ರ ಮೇಲೂ ಮಾಲೀಕರು ಕಣ್ಣಿಟ್ಟಿದ್ದಾರೆ.

ಸದ್ದು ಮಾಡ್ತಿದ್ದಾರೆ ರಾಮಸಿಂಗ್ ಸೋನು ಯಾದವ್!

ಇನ್ನು ಇತ್ತೀಚಿನ ಟಿಎನ್‌ಪಿಎಲ್ ಆವೃತ್ತಿಯಲ್ಲಿ ಭಾರತದ ಆಲ್‌ರೌಂಡರ್ ರಾಮಸಿಂಗ್ ಸೋನು ಯಾದವ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೋನು ಯಾದವ್ ಟೂರ್ನಿಯಲ್ಲಿ ಏಳು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಬೇಟೆಯಾಡಿದ್ದಾರೆ. ಅದೂ ಕೂಡ  8 ಕ್ಕಿಂತ ಕಡಿಮೆ ಎಕಾನಮಿ ರೇಟ್ ನಲ್ಲಿ. ಹಾಗೇ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್ ಮನ್ ಕೂಡ ಆಗಬಲ್ಲರು.

Shantha Kumari