ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆರಂಭವಾಗಲಿದೆ ಚಿರತೆ ಸಫಾರಿ! – ಯಾವಾಗಿನಿಂದ ಪ್ರಾರಂಭ?

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆರಂಭವಾಗಲಿದೆ ಚಿರತೆ ಸಫಾರಿ! – ಯಾವಾಗಿನಿಂದ ಪ್ರಾರಂಭ?

ಸಫಾರಿ ಪ್ರಿಯರಿಗೆ ರಾಜ್ಯ ಸರ್ಕಾರ ಗುಡುನ್ಯೂಸ್‌ ಒಂದನ್ನ ನೀಡಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ಸಫಾರಿ ಪ್ರಾರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಹೌದು, ಬಹು ನೀರಿಕ್ಷಿತ ಚಿರತೆ ಸಫಾರಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿಂಹ ಮತ್ತು ಹುಲಿ ಸಫಾರಿ ಮಾದರಿಯಲ್ಲಿ ಚಿರತೆ ಸಫಾರಿಯನ್ನು ಶೀಘ್ರ ಆರಂಭಿಸುವಂತೆ ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅರಣ್ಯ ಇಲಾಖೆ ಮತ್ತು ಮೃಗಾಲಯ ನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ವೇಗ ಪಡೆದುಕೊಂಡ ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕಾಮಕಾರಿ – ಇನ್ನೆಷ್ಟು ಕೆಲಸ ಬಾಕಿ..?

ಈ ಬಗ್ಗೆ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಚಿರತೆ ಸಫಾರಿ ಪ್ರಾರಂಭವಾಗುವುದು, ಪ್ರಾಣಿಗಳು ಎಷ್ಟು ವೇಗವಾಗಿ ತರಬೇತಿ ಪಡೆಯುತ್ತವೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಎಲ್ಲವೂ ಸರಿಯಾಗಿ ನಡೆದರೆ ಒಂದೂವರೆ ತಿಂಗಳ ಅವಧಿಯಲ್ಲಿ ಸಫಾರಿಯನ್ನು ಜನರಿಗೆ ತೆರೆಯಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ, ಮೇ ತಿಂಗಳಲ್ಲಿ ಅಥವಾ ನೀತಿ ಸಂಹಿತೆ ಹಿಂಪಡೆದ ಬಳಿಕ ಜನರಿಗೆ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಫಾರಿಗಾಗಿ ತನ್ನ ಪ್ರದೇಶದಲ್ಲಿ 20 ಹೆಕ್ಟೇರ್ ಭೂಮಿಯನ್ನು ನಿರ್ಮಿಸಲಾಗಿದೆ, ಎತ್ತರದ ಮೆಶ್ ಸ್ಥಾಪಿಸಿದೆ ಮತ್ತು ಎತ್ತರದ ಮರಗಳನ್ನು ಬೇಲಿಯಿಂದ ದೂರವಿಡಲಾಗಿದೆ. ಪ್ರಾಣಿಗಳು ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಿಲ್ಲ. ಹುಲಿಗಳು ಮತ್ತು ಸಿಂಹಗಳಿಗಿಂತ ಭಿನ್ನವಾಗಿ, ಚಿರತೆಗಳು ಬಹಳ ಚುರುಕುಬುದ್ಧಿಯವು ಮತ್ತು ಚಾಲಾಕಿಗಳು. ತಪ್ಪಿಸಿಕೊಳ್ಳಲು ಸಾಧ್ಯವಿರುವ ಯಾವುದೇ ಮಾರ್ಗವನ್ನು ಕಂಡುಕೊಳ್ಳುತ್ತವೆ, ಆದ್ದರಿಂದ ಆವರಣವನ್ನು ರಚಿಸುವಾಗ ಎಲ್ಲಾ ರೀತಿಯ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ. ಈ ಪ್ರದೇಶದಲ್ಲಿ 20 ಚಿರತೆಗಳಿಗೆ ಸ್ಥಳಾವಕಾಶವಿದೆ, ಆದರೆ ಇದೀಗ ಸುಮಾರು 12 ಚಿರತೆಗಳಿವೆ. ಜಗಳವಾಗದಂತೆ ಪರಸ್ಪರ ಒಗ್ಗಿಕೊಳ್ಳುವಂತೆ ಮಾಡಲಾಗುತ್ತಿದೆ. ಇರಿಸಲಾಗಿರುವ ಚಿರತೆಗಳು ತಲಾ ಆರು ಗುಂಪುಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲ್ಪಟ್ಟಿವೆ. ಪರಸ್ಪರ ಹೊದಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರದರ್ಶನಕ್ಕೆ ಇಡಲಾಗುವ ಎಲ್ಲಾ ಚಿರತೆಗಳು ಒಂದು ವರ್ಷದೊಳಗಿನವು ಮತ್ತು ಮೃಗಾಲಯದಲ್ಲಿ ಸಾಕಲ್ಪಟ್ಟ ಚಿರತೆಗಳಾಗಿವೆ. ಅವರು ಎರಡು ತಿಂಗಳೊಳಗೆ ಇರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ವ್ಯಕ್ತಿಗಳು ಹೊಲಗಳಿಂದ ಕರೆತಂದ ರಕ್ಷಿಸಲ್ಪಟ್ಟ ಮರಿಗಳು. ದಾಖಲೆಗಳ ಪ್ರಕಾರ, ಬಿಬಿಪಿಯಲ್ಲಿ 70 ಚಿರತೆಗಳು, 19 ಹುಲಿಗಳು ಮತ್ತು 19 ಸಿಂಹಗಳು ಮೃಗಾಲಯದಲ್ಲಿವೆ.

Shwetha M