ಬೆಂಗಳೂರಿಗರೇ ಹುಷಾರ್.. – ನಿಮ್ಮ ಅಕ್ಕಪಕ್ಕದ ರಸ್ತೆಯಲ್ಲೇ ಚಿರತೆಯ ತಿರುಗಾಟ..!

ಬೆಂಗಳೂರಿಗರೇ ಹುಷಾರ್.. – ನಿಮ್ಮ ಅಕ್ಕಪಕ್ಕದ ರಸ್ತೆಯಲ್ಲೇ ಚಿರತೆಯ ತಿರುಗಾಟ..!

ಬೆಂಗಳೂರಲ್ಲಿ ಮತ್ತೊಮ್ಮೆ ಚಿರತೆಯ ಚಿಂತೆ ಶುರುವಾಗಿದೆ. ಅದರಲ್ಲೂ ಬೆಂಗಳೂರಿನ ರಸ್ತೆಯೊಂದರಲ್ಲಿ ಬೆಳಗ್ಗೆಯೇ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿದೆ.

ಇದನ್ನೂ ಓದಿ:ಚಾರ್ಮಾಡಿ ಘಾಟಿ ಅರಣ್ಯದಲ್ಲಿ ಕಾಳ್ಗಿಚ್ಚು – ಪಶ್ಚಿಮ ಘಟ್ಟಗಳ ಸೂಕ್ಷ್ಮ ಹುಲ್ಲುಗಾವಲು ಭಸ್ಮ

ಬೆಂಗಳೂರಿನ ಅಂಜನಾಪುರದ 7ನೇ ಬ್ಲಾಕ್ ​ನಲ್ಲಿ ಚಿರತೆ ಕಾಣಿಸಿಕೊಂಡಿದೆ. ರಸ್ತೆಯಲ್ಲೇ ಚಿರತೆ ಓಡಾಡ್ತಿರುವ ದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಚಿರತೆ ಓಡಾಟ ಜನರ ಚಿಂತೆಗೆ ಕಾರಣವಾಗಿದೆ. ರಸ್ತೆಯಲ್ಲೇ ಚಿರತೆ ಓಡಾಡ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಅಂಜನಾಪುರ ಅರಣ್ಯ ಪ್ರದೇಶದ ಸಮೀಪವೇ ಇದೆ. ತುರಹಳ್ಳಿ ಅರಣ್ಯ ಪ್ರದೇಶದ ಸಮೀಪ ಅಂಜನಾಪುರ ಇರುವ ಹಿನ್ನೆಲೆ ಈ ಅರಣ್ಯ ಪ್ರದೇಶದಿಂದಲೇ ಚಿರತೆ ನಗರದತ್ತ ಬಂದಿದೆ ಎಂದು ಅರಣ್ಯಾಧಿಕಾರಿಗಳು ಹೇಳ್ತಿದ್ದಾರೆ.

ಈ ಮೊದಲು ಬನ್ನೇರುಘಟ್ಟ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ಇದೀಗ ಬೆಂಗಳೂರು ದಕ್ಷಿಣ ಭಾಗದತ್ತ ಚಿರತೆಗಳ ಸವಾರಿ ಶುರುವಾಗಿದೆ. ಆದಷ್ಟು ಬೇಗ ಅರಣ್ಯಾಧಿಕಾರಿಗಳು ಚಿರತೆಗಳ ಕಾಟಕ್ಕೆ ಮುಕ್ತಿ ನೀಡಬೇಕಿದೆ.

Sulekha