ಬಿಡುಗಡೆಗೂ ಮುನ್ನವೇ ದಳಪತಿ ವಿಜಯ್ ಸಿನಿಮಾಗೆ ಆತಂಕ – ಕೇರಳದಲ್ಲಿ ಜೋರಾಯ್ತು ಲಿಯೋ ಬಾಯ್ಕಾಟ್ ಟ್ರೆಂಡ್!
ದಕ್ಷಿಣ ಚಿತ್ರರಂಗದಲ್ಲಿ ದಳಪತಿ ವಿಜಯ್ (Thalapathy Vijay ) ಎಂದೇ ಖ್ಯಾತರಾಗಿರುವ ಜೋಸೆಫ್ ವಿಜಯ್ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ತಮಿಳುನಾಡಿನಲ್ಲಂತೂ ಜೂನಿಯರ್ ಸೂಪರ್ ಸ್ಟಾರ್ ಎಂದೇ ಕರೆಯಲಾಗುತ್ತೆ. ಇದೀಗ ವಿಜಯ್ ಅಭಿನಯದ ಬಹುನಿರೀಕ್ಷಿತ ಲಿಯೋ ಸಿನಿಮಾ ತೆರೆಗೆ ಅಪ್ಪಳಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಕೇರಳದಲ್ಲಿ ಈ ಸಿನಿಮಾಗೆ ಬಾಯ್ಕಾಟ್ ಆತಂಕ ಎದುರಾಗಿದೆ.
ಇದನ್ನೂ ಓದಿ : ನಿರ್ದೇಶಕನ ಜೊತೆ ಗುಟ್ಟಾಗಿ ಮದುವೆಯಾದ್ರಾ ಸಾಯಿ ಪಲ್ಲವಿ..? – ಗುಟ್ಟು ಬಿಚ್ಚಿಟ್ಟ ನ್ಯಾಚುರಲ್ ಬ್ಯೂಟಿ
ತಮಿಳಿನ ಖ್ಯಾತ ನಟ ದಳಪತಿ ವಿಜಯ್ (Vijay) ನಟನೆಯ, ಬಹುನಿರೀಕ್ಷಿತ ‘ಲಿಯೋ’ (Leo) ಸಿನಿಮಾ ಅಕ್ಟೋಬರ್ 19ಕ್ಕೆ ರಿಲೀಸ್ ಆಗಲಿದೆ. ಆದರೆ ಸಿನಿಮಾವನ್ನು ಬೈಕಾಟ್ (Boycott) ಮಾಡಬೇಕು ಎನ್ನುವ ಕೂಗು ಕೇರಳದಲ್ಲಿ (Kerala) ಕೇಳಿ ಬರುತ್ತಿದೆ. ಲಿಯೋ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಬೇರೆ ಮಾಡಲಾಗುತ್ತಿದೆ. ಹೀಗಾಗಿ ಸಹಜವಾಗಿಯೇ ನಿರ್ಮಾಪಕರಿಗೆ ಆತಂಕ ಎದುರಾಗಿದೆ. ತಮಿಳು ನಟ ವಿಜಯ್ ಮತ್ತು ಮಲಯಾಳಂ ನಟ ಮೋಹನ್ ಲಾಲ್ (Mohanlal) ಅಭಿಮಾನಿಗಳು ಯಾವಾಗಲೂ ಕಿತ್ತಾಡುತ್ತಿರುತ್ತಾರೆ. ಈ ಜೋಡಿ ನಟನೆಯ ‘ಜಿಲ್ಲಾ’ ಸಿನಿಮಾದ ಸಂದರ್ಭದಲ್ಲಿ ವಿಜಯ್ ಅಭಿಮಾನಿಯೊಬ್ಬ ಮೋಹನ್ ಲಾಲ್ ಅವರಿಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದ, ಅಲ್ಲಿಂದ ಈ ಇಬ್ಬರ ಫ್ಯಾನ್ಸ್ ವಾರ್ ಶುರುವಾಗಿತ್ತು. ವಿಜಯ್ ಸಿನಿಮಾ ರಿಲೀಸ್ ಗೆ ಬಂದಾಗೆಲ್ಲ ಬೈಕಾಟ್ ಕೂಗು ಕೇಳಿ ಬರುತ್ತದೆ.
ಲಿಯೋ ಚಿತ್ರ ಬಿಡುಗಡೆಗೆ ಇನ್ನೊಂದು ತಿಂಗಳೂ ಕೂಡ ಇಲ್ಲ. ಹೀಗಾಗಿ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ, ಚಿತ್ರವನ್ನು ನಿರ್ಮಿಸುತ್ತಿರುವ 7 ಸ್ಕ್ರೀನ್ ಸ್ಟುಡಿಯೋ ಸಂಸ್ಥೆಯು, ಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆ ಮಾಡಿದೆ. ತಮಿಳಿನ ಜನಪ್ರಿಯ ನಿರ್ದೇಶಕರಾದ ಲೋಕೇಶ್ ಕನಕರಾಜ್ ನಿರ್ದೇಶಿಸಿರುವ ‘ಲಿಯೋ’ ಚಿತ್ರದಲ್ಲಿ ‘ಇಳಯದಳಪತಿ’ ವಿಜಯ್, ತ್ರಿಷಾ, ಸಂಜಯ್ ದತ್, ಅರ್ಜುನ್ ಸರ್ಜಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಲಿಯೋ’ ಚಿತ್ರವು ಒಂದು ಅದ್ಭುತ ಅನುಭವ ನೀಡುವ ಚಿತ್ರವಾಗಿ ರೂಪುಗೊಂಡಿದ್ದು, ಇದರಲ್ಲಿ ಆಕ್ಷನ್, ಡ್ರಾಮಾ, ಎಮೋಷನ್ ಸೇರಿದಂತೆ ಎಲ್ಲಾ ಭಾಷೆಯ ಮತ್ತು ಪ್ರದೇಶದ ಜನರನ್ನು ಆಕರ್ಷಿಸುವಂತಹ ಅಂಶಗಳಿವೆ.
ಇನ್ನು, ಚಿತ್ರದ ಕರ್ನಾಟಕ ವಿತರಣೆಯ ಹಕ್ಕುಗಳನ್ನು ಸ್ವಾಗತ್ ಎಂಟರ್ ಪ್ರೈಸಸ್ ಸಂಸ್ಥೆಯು ತನ್ನದಾಗಿಸಿಕೊಂಡಿದ್ದು, ಚಿತ್ರವನ್ನು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ‘ಲಿಯೋ’ ಚಿತ್ರವು ಅಕ್ಟೋಬರ್ 19ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.