ಮನೆಯ ಮುಂದೆ ನಿಂಬೆ ಗಿಡ ನೆಡಬಹುದಾ? – ನಿಂಬೆ ಗಿಡಕ್ಕೆ ಶುಭ ದಿಕ್ಕು ಯಾವುದು?

ಮನೆಯ ಮುಂದೆ ನಿಂಬೆ ಗಿಡ ಇದೆಯಾ? ಹಾಗಾದರೆ ಈ ವಾಸ್ತು ನಿಯಮಗಳನ್ನು ತಪ್ಪದೇ ತಿಳಿದುಕೊಳ್ಳಿ. ಯಾಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ನಿಂಬೆ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡುತ್ತೇವೆ ಎಂಬುದು ಬಹಳ ಮುಖ್ಯ.
ನಿಂಬೆಹಣ್ಣನ್ನು ಪೂಜೆ-ಪುನಸ್ಕಾರಗಳಲ್ಲಿ ಬಳಸಲಾಗುತ್ತದೆ. ಅಲ್ಲದೆ, ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎಂಬ ಧಾರ್ಮಿಕ ನಂಬಿಕೆಯೂ ಇದೆ. ವಾಸ್ತು ಪ್ರಕಾರ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ನಿಂಬೆ ಗಿಡ ನೆಡುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಆದರೆ ಮನೆಯ ಮುಖ್ಯ ಬಾಗಿಲಿಗೆ ನೇರವಾಗಿ ಎದುರಾಗಿ ನಿಂಬೆ ಗಿಡ ನೆಡುವುದನ್ನು ತಪ್ಪಿಸಬೇಕು. ಗೇಟಿನಿಂದ ಮೂರರಿಂದ ನಾಲ್ಕು ಅಡಿ ದೂರದಲ್ಲಿ ಗಿಡ ನೆಡುವುದು ಉತ್ತಮ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:
ಇನ್ನು ದಕ್ಷಿಣ, ಪಶ್ಚಿಮ ಮತ್ತು ನೈಋತ್ಯ ದಿಕ್ಕುಗಳಲ್ಲಿ ನಿಂಬೆ ಗಿಡ ನೆಡುವುದು ಅಶುಭ ಎಂಬ ವಾಸ್ತು ನಂಬಿಕೆಯಿದೆ. ಇದರಿಂದ ಆರ್ಥಿಕ ಸಮಸ್ಯೆ ಹಾಗೂ ಕುಟುಂಬದಲ್ಲಿಶನಿವಾರದಂದು ಹನುಮಂತನ ಪೂಜೆಯಲ್ಲಿ ಇರಲಿ ಈ ಐದು ವಸ್ತುಗಳು ಮನಸ್ತಾಪ ಉಂಟಾಗಬಹುದು ಎಂದು ಕೆಲವರು ನಂಬುತ್ತಾರೆ. ಆದರೆ ಇದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.
ಹಾಗಾಗಿ ನಿಂಬೆ ಗಿಡ ನೆಡುವಾಗ ದಿಕ್ಕಿನ ಜೊತೆಗೆ ಮನೆಯ ಪ್ರವೇಶ ಮತ್ತು ಓಡಾಟಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ.

ನೋಡಿರಿ

