ಇನ್ನು ಮುಂದೆ ಅಮೆರಿಕದಲ್ಲೂ ದೀಪಾವಳಿ ರಜೆ!

ಭಾರತದಲ್ಲಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತದೆ. ದೀಪಾವಳಿಯಂದು ದೇಶದಾದ್ಯಂತ ಶಾಲಾ – ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗುತ್ತದೆ. ಇದೀಗ ಅಮೆರಿಕದಲ್ಲಿ ಕೂಡ ದೀಪಾವಳಿ ಹಬ್ಬದಂದು ಸಾರ್ವಜನಿಕ ರಜೆ ಘೋಷಿಸುವ ಬಗ್ಗೆ ಯುಎಸ್ ಸಂಸದೀಯ ಸದಸ್ಯೆ ಗ್ರೇಸ್ ಮೆಂಗ್ ಮಸೂದೆ ಮಂಡಿಸಿದ್ದಾರೆ. ಈ ಮಸೂದೆಯನ್ನು ಕಾಂಗ್ರೆಸ್ ಅಂಗೀಕರಿಸಿ, ಅಧ್ಯಕ್ಷರು ಸಹಿ ಹಾಕಿದಲ್ಲಿ ದೀಪಾವಳಿಯು ಯುಎಸ್ಎನಲ್ಲಿ ಮಾನ್ಯತೆ ಪಡೆದ 12 ರಜಾ ದಿನ ಆಗಿರಲಿದೆ.
ಇದನ್ನೂ ಓದಿ: ಯೂಟ್ಯೂಬ್ ಬಳಕೆದಾರರಿಗೆ ಶಾಕ್! – ಈ ಫೀಚರ್ ಇನ್ನು ಮುಂದೆ ಸಿಗಲ್ಲ
ಈ ಕುರಿತು ಟ್ವೀಟ್ ಮಾಡಿರುವ ಸಂಸದೀಯ ಸದಸ್ಯೆ ಗ್ರೇಸ್ ಮೆಂಗ್, ದೀಪಾವಳಿಯನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಿಸುವ ಬಗ್ಗೆ ನನ್ನ ಮಸೂದೆಯಾದ ಮಂಡಿಸಿದೆ. ದೀಪಾವಳಿ ದಿನದ ಕಾಯ್ದೆಯನ್ನು ಪರಿಚಯಿಸಲು ಹೆಮ್ಮೆಪಡುತ್ತೇನೆ. ಈ ವೇಳೆ ನನ್ನೊಂದಿಗೆ ಸೇರಿಕೊಂಡು ಬೆಂಬಲ ವ್ಯಕ್ತಪಡಿಸಿದ ಎಲ್ಲಾ ಸರ್ಕಾರಿ ಸಹೋದ್ಯೋಗಿಗಳಿಗೆ ಮತ್ತು ವಕೀಲರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ದೀಪಾವಳಿ ಹಬ್ಬವನ್ನು ವಿವಿಧ ದೇಶಗಳ ಜನರಿಗೆ ಪ್ರಮುಖ ಹಬ್ಬವಾಗಿದೆ. ಜತೆಗೆ ನ್ಯೂಯಾರ್ಕ್ನಲ್ಲಿರುವ ಬಹುತೇಕ ಸಮುದಾಯಗಳ ಮಂದಿಗೆ ಪ್ರಮುಖ ರಜಾದಿನಗಳಲ್ಲಿ ದೀಪಾವಳಿಯೂ ಒಂದಾಗಿದೆ. ದೀಪಾವಳಿ ಹಬ್ಬದಂದು ದೇಶದಲ್ಲಿ ಸಾರ್ವತ್ರಿಕ ರಜೆ ಘೋಷಿಸಿದಲ್ಲಿ ಎಲ್ಲರಿಗೂ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸೇರಿ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ವೈವಿಧ್ಯಮಯ ಸಾಂಸ್ಕೃತಿಕತೆಯನ್ನು ದೇಶ ಗೌರವಿಸುತ್ತದೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಮಸೂದೆ ಮಂಡನೆ ನಂತರ ನಡೆದ ಚರ್ಚೆಯಲ್ಲಿ ಪ್ರಸ್ತಾಪವಾಗಿದೆ.