ಫುಟ್ಬಾಲ್ ಲೋಕದ ದಂತಕಥೆ ಪೀಲೆ ಇನ್ನು ನೆನಪು ಮಾತ್ರ – ಕಾಲ್ಚೆಂಡಿನ ಜಗತ್ತಿನಿಂದ ಮರೆಯಾಯ್ತು ‘ಕಪ್ಪು ಮುತ್ತು’
ಅಗಲಿದ ‘ಫುಟ್ಬಾಲ್ ಲೋಕದ ದೇವರಿಗೆ’ ಜಗತ್ತಿನ ಗಣ್ಯರಿಂದ ಸಂತಾಪ

ಫುಟ್ಬಾಲ್ ಲೋಕದ ದಂತಕಥೆ ಪೀಲೆ ಇನ್ನು ನೆನಪು ಮಾತ್ರ – ಕಾಲ್ಚೆಂಡಿನ ಜಗತ್ತಿನಿಂದ ಮರೆಯಾಯ್ತು ‘ಕಪ್ಪು ಮುತ್ತು’ಅಗಲಿದ ‘ಫುಟ್ಬಾಲ್ ಲೋಕದ ದೇವರಿಗೆ’ ಜಗತ್ತಿನ ಗಣ್ಯರಿಂದ ಸಂತಾಪ

ಡಿಸೆಂಬರ್ 29.. ಫುಟ್ಬಾಲ್ ಜಗತ್ತಿಗೆ ಅಕ್ಷರಶ: ಕರಾಳ ದಿನ. ಫುಟ್ಬಾಲ್ ಲೋಕದ ದೇವರು, ಕಾಲ್ಚೆಂಡು ಜಗತ್ತಿನ ದೊರೆಯಾಗಿ ಮೆರೆದ ಪೀಲೆ ಇನ್ನು ಬರೀ ನೆನಪು ಮಾತ್ರ. ಫುಟ್ಬಾಲ್ ಲೋಕದ ದಂತಕಥೆ ಪೀಲೆ, ನಿನ್ನೆ ರಾತ್ರಿ ತಮ್ಮ 82ನೇ ವರ್ಷದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಪ್ಪು ಮುತ್ತು ಅಂತಾನೆ ಹೆಸರುವಾಸಿಯಾಗಿದ್ದ ಪೀಲೆ, ಮೆದುಳು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಬ್ರೆಜಿಲ್​​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29 ಗುರುವಾರ ರಾತ್ರಿ ತಮ್ಮ ಕುಟುಂಬಸ್ಥರ ಎದುರಲ್ಲೇ ಪೀಲೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪೀಲೆ ಬದುಕೋದು ಕಷ್ಟ ಅನ್ನೋದು ಖಚಿತವಾಗುತ್ತಲೇ ಇಡೀ ಕುಟುಂಬ ಆಸ್ಪತ್ರೆಗೆ ಧಾವಿಸಿತ್ತು. ಇದೀಗ ಪುಟ್ಬಾಲ್ ಜಗತ್ತು ತನ್ನ ಅತೀ ದೊಡ್ಡ ಸಂಪತ್ತೊಂದನ್ನ ಕಳೆದುಕೊಂಡು ಬಡವಾಗಿದೆ. ಬ್ರೆಜಿಲ್​​ನಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಇನ್ನು ಫುಟ್ಬಾಲ್ ಲೆಜೆಂಡ್​ನ ನಿಧನಕ್ಕೆ ಜಗತ್ತಿನಾದ್ಯಂತ ಗಣ್ಯರು, ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ. ಬ್ರೆಜಿಲ್ ಸೇರಿದಂತೆ ಜಗತ್ತಿನಾದ್ಯಂತ ಫುಟ್ಬಾಲ್ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಕಪ್ಪು ಮುತ್ತು ಎಂದು ಪ್ರಸಿದ್ಧರಾಗಿದ್ದ ಪೀಲೆ ಜಾಗತಿಕ ಫುಟ್ಬಾಲ್​ ಐಕಾನ್ ಆಗಿದ್ದರು. ಬ್ರೆಜಿಲ್​ಗೆ ಒಟ್ಟು 3 ಬಾರಿ ವಿಶ್ವಕಪ್ ಗೆಲ್ಲಿಸಿ ಕೊಟ್ಟಿದ್ದ ಕೀರ್ತಿ ಪೀಲೆಗೆ ಸಲ್ಲುತ್ತದೆ.  1958, 1962, 1970ರಲ್ಲಿ ಬ್ರೆಜಿಲ್ ಮುಕುಟಕ್ಕೆ ವಿಶ್ವಕಪ್ ಕಿರೀಟವಿರಿಸಿದ್ದರು. ​​ ಮೂರು ವಿಶ್ವಕಪ್ ಗೆದ್ದ ಜಗತ್ತಿನ ಏಕೈಕ ಆಟಗಾರ ಪೀಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪೀಲೆ ತಮ್ಮ  17ನೇ ವಯಸ್ಸಿನಲ್ಲೇ ವಿಶ್ವಕಪ್ ಎತ್ತಿ ಹಿಡಿದಿದ್ದರು.  ಪೀಲೆ ಒಟ್ಟು 1,282 ಗೋಲ್​​ಗಳನ್ನು ದಾಖಲಿಸಿದ್ದರು.

suddiyaana