ಜೀವದ ಭಾಗದಂತಿದ್ದ ಅಮ್ಮನನ್ನು ಬೀಳ್ಕೊಟ್ಟ ವಿನೋದ್‌ರಾಜ್ – ಸೋಲದೇವನಹಳ್ಳಿಯ ತೋಟದಲ್ಲಿ ಲೀಲಾವತಿ ಅಂತ್ಯಕ್ರಿಯೆ
ಶುಕ್ರವಾರ ಕನ್ನಡದ ಮೇರು ಲೀಲಾವತಿ ಅವರ ಅಂತ್ಯಕ್ರಿಯೆ ನೆರವೇರಿದೆ. ಸೋಲದೇವನಹಳ್ಳಿಯ ತಮ್ಮ ತೋಟದಲ್ಲಿ ಲೀಲಾವತಿ ಅವರು ಮಣ್ಣಲ್ಲಿ ಮಣ್ಣಾದರು. ಪುತ್ರ ವಿನೋದ್ ರಾಜ್ ಅವರು ತನ್ನ ಜೀವದ ಭಾಗದಂತಿದ್ದ ಅಮ್ಮನನ್ನು ಭಾರವಾದ ಹೃದಯದೊಂದಿಗೆ ಬಾರದ ಲೋಕಕ್ಕೆ ಕಳುಹಿಸಿಕೊಟ್ಟಿರು.
ಇದನ್ನೂ ಓದಿ: ಬೆಂಗಳೂರಿನಿಂದ ಸೋಲದೇವನಹಳ್ಳಿಗೆ ಹೊರಟ ಲೀಲಾವತಿ ಪಾರ್ಥೀವ ಶರೀರ
ರವೀಂದ್ರಕಲಾ ಕ್ಷೇತ್ರದಲ್ಲಿ ಸಾರ್ವಜನಿಕ ಅಂತಿಮ ದರ್ಶನ ನಂತರ ಲೀಲಾವತಿ ಅವರ ಪಾರ್ಥೀವ ಶರೀರವನ್ನು ಸೋಲದೇವನ ಹಳ್ಳಿಯಲ್ಲಿರುವ ಅವರ ತೋಟದ ಮನೆಗೆ ಕರೆದೊಯ್ಯಲಾಗಿತ್ತು. ಮನೆಯಲ್ಲಿ ಅಂತಿಮ ವಿಧಿವಿಧಾನಗಳನ್ನು ಪುತ್ರ ವಿನೋದ್ ರಾಜ್ ಅವರು ಮನೆಯಿಂದ ಹೂವಿನ ಪಲ್ಲಕ್ಕಿಯಲ್ಲಿ ಲೀಲಾವತಿ ಅವರ ಪಾರ್ಥೀವ ಶರೀರವನ್ನು ತರಲಾಯಿತು. ನಂತರ ಸರ್ಕಾರ ಗೌರವಗಳೊಂದಿಗೆ ಗಣ್ಯರ ಸಮ್ಮುಖದಲ್ಲಿ ಲೀಲಾವತಿ ಅವರ ಅಂತಿಮ ಕ್ರಿಯೆಯನ್ನು ವಿನೋದ್‌ರಾಜ್ ನೆರವೇರಿಸಿದರು.
ತಾವು ಪ್ರೀತಿಯಿಂದ ಖರೀದಿಸಿ ಬೆಳೆಸಿದ್ದ ತೋಟದಲ್ಲಿ ಲೀಲಾವತಿ ಮಣ್ಣಾದರು. 85 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಲೀಲಾವತಿ ಅವರನ್ನು ಕನ್ನಡ ಚಿತ್ರರಂಗದ ಅಭಿಮಾನಿಗಳು ಭಾರವಾದ ಹೃದಯದೊಂದಿಗೆ ಕಳುಹಿಸಿಕೊಟ್ಟಿದ್ದಾರೆ.