ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ – ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ – ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ

ಬಿಜೆಪಿಯ ಲಕ್ಷ್ಣಣರೇಖೆಯನ್ನು ಸವದಿ ದಾಟಿಯಾಗಿದೆ. ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಸವದಿ, ತಮ್ಮ ಆಪ್ತ ಸಹಾಯಕನ ಮೂಲಕ ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಬಿಜೆಪಿ ಉಪಾಧ್ಯಕ್ಷ ಸ್ಥಾನ, ಪಕ್ಷದ ಕೋರ್ ಕಮಿಟಿ ಸದಸ್ಯ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ. ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಗುಡ್ ಬೈ.. ಬೊಮ್ಮಾಯಿ ವಿರುದ್ಧ ಬಾಂಬ್ – ಸಿಡಿದೆದ್ದ ಸವದಿ ಬಗ್ಗೆ ಸಿಎಂ ಹೇಳಿದ್ದೇನು..!?

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಲಕ್ಷ್ಮಣ ಸವದಿ, ಕಾಂಗ್ರೆಸ್ ಪಕ್ಷದ ನಾಯಕರ ಮುಂದೆ ಎರಡು ಷರತ್ತುಗಳನ್ನು ಇಟ್ಟಿರುವುದಾಗಿ ಹೇಳಿದರು. ಮೊದಲನೇಯದ್ದು ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ನೀಡಬೇಕು ಮತ್ತು ಸರ್ಕಾರ ರಚನೆಯಾದ ಮೇಲೆ ಅಥಣಿ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಗಳನ್ನು ಪೂರ್ತಿಗೊಳಿಸಬೇಕು ಅನ್ನೋದನ್ನು.

ಇನ್ನು ಅಥಣಿಯಲ್ಲಿ ಭಾಷಣವೊಂದರಲ್ಲಿ ಮಾತನಾಡಿದ ಸವದಿ, ಇಂದು ನನಗೆ ರಾಜಕೀಯ ಜೀವನ ಕೊಟ್ಟ ಪಕ್ಷಕ್ಕೆ ವಿದಾಯ ಹೇಳ್ತಿನಿ. ನನಗೆ ಬಿಜೆಪಿಯಲ್ಲಿ ಸಹಾಯ ಮಾಡಿದ ಎಲ್ಲಾ ನಾಯಕರಿಗೆ ಹೃದಯ ತುಂಬಿ ಧನ್ಯವಾದ ಹೇಳ್ತೀನಿ. ನನ್ನ ಗೆಲ್ಲಿಸಿ ಕಳ್ಸಿದ್ರೆ ಹಾರ ಹಾಕಿಕೊಳ್ಳುತ್ತೇನೆ. ಇಲ್ಲಾ ನನ್ನ ಹೆಣದ ಮೇಲೆ ಹಾರ ಹಾಕಿ ಎಂದು, ಹಾರ ಶಾಲು ತಂದ ಕಾರ್ಯಕರ್ತರೆದುರು ಭಾವುಕರಾಗಿ ನುಡಿದಿದ್ದಾರೆ. ಹಾಗೂ ಇಂದಿನಿಂದ ಹಾರ ಹಾಕಿಕೊಳ್ಳುವುದಿಲ್ಲ ಎಂದು ವೇದಿಕೆ ಮೇಲೆ ಶಪಥ ಮಾಡಿದ್ದಾರೆ. ಈ ವೇಳೆ ಅಥಣಿಯ ಜನರ ಸ್ವಾಭಿಮಾನಕ್ಕೆ ಜೈ ಎಂದು ಸವದಿ ಭಾಷಣ ಮುಗಿಸಿದ್ದಾರೆ.

ಸವದಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಹೋಗುತ್ತಿರುವುದು ದುಃಖ ತರಿಸಿದೆ. ಲಕ್ಷ್ಮಣ ಸವದಿ ಜೊತೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಲಕ್ಷ್ಮಣ ಸವದಿಗೆ ಕಾಂಗ್ರೆಸ್‌ನಲ್ಲಿ ಭವಿಷ್ಯ ಕಾಣಿಸಿದೆ, ಹೋಗಿದ್ದಾರೆ. ಕಾಂಗ್ರೆಸ್‌ಗೆ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳು ಗತಿಯಿಲ್ಲ. ಅದಕ್ಕಾಗಿ ಬೇರೆ ಪಕ್ಷಗಳಿಂದ ಕೆಲವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

suddiyaana