ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಕೇಸ್ – ಆನ್ ಲೈನ್ ನಲ್ಲೇ ವಾದ ಮಂಡಿಸಿ ಎಂದ ಸುಪ್ರೀಂ ಜಡ್ಜ್
ನವದೆಹಲಿ: ದೇಶದಲ್ಲಿ ಕೊರೊನಾ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತೆ ಲಾಕ್ ಡೌನ್ ಆಗಲಿದ್ಯಾ ಅಂತಾ ಜನರು ಆತಂಕದಲ್ಲಿ ದಿನ ದೂಡುವಂತಾಗಿದೆ. ಇದೀಗ ಭಾರತದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಕಾರಣ ವಕೀಲರು ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆ ಇಲ್ಲ, ಆನ್ಲೈನ್ ಮೂಲಕ ಪ್ರಕರಣಗಳ ಬಗ್ಗೆ ವಾದ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ತಾಂಡವ – 5 ತಿಂಗಳಲ್ಲೇ ಮೊದಲ ಬಾರಿಗೆ 4 ಸಾವಿರ ಗಡಿ ದಾಟಿದ ಪಾಸಿಟಿವ್ ಕೇಸ್
ದೇಶದಲ್ಲಿ ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳ ವರದಿಯನ್ನು ನಾವು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಆ ಕಾರಣಕ್ಕೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಕೀಲರು ಕೋರ್ಟ್ಗೆ ಬರುವ ಅವಶ್ಯಕತೆ ಇಲ್ಲ. ನೀವು ಎಲ್ಲಿದ್ದೀರಾ ಅಲ್ಲಿಂದಲೇ ಕಾರ್ಯನಿರ್ವಹಿಸಿ, ಆನ್ಲೈನ್ ಮೂಲಕವೇ ನಿಮ್ಮ ವಾದಗಳನ್ನು ನಾವು ಕೇಳುತ್ತೇವೆ ಅಂತಾ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ತಿಳಿಸಿದ್ದಾರೆ.
ಈಗಾಗಲೇ ಅನೇಕ ನ್ಯಾಯಾಲಯಗಳು ಆನ್ಲೈನ್ ಮೂಲಕವೇ ವಿಚಾರಣೆಯನ್ನು ಮಾಡುತ್ತಿದೆ. ಹಾಗಾಗಿ ಇನ್ನೂ ಮುಂದಕ್ಕೆ ವರ್ಚುವಲ್ ವಿಚಾರಣೆಗಳನ್ನು ಮಾಡಬಹುದು ಅಂತಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆ್ಯಪ್ ಮತ್ತು ಯೂಟ್ಯೂಬ್ ಮೂಲಕ ಸಂವಿಧಾನ ಪೀಠದ ಪ್ರಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡಲು ಪ್ರಾರಂಭಿಸಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,431 ಹೊಸ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 23,091ಕ್ಕೆ ಏರಿಕೆಯಾಗಿದ್ದು, ಮಂಗಳವಾರ ಒಂದೇ ದಿನ 15 ಮಂದಿ ಸಾವನ್ನಪ್ಪಿದ್ದಾರೆ.