ಲಾಯರ್ ಮಮತಾ ಬ್ಯಾನರ್ಜಿ – ಕೋರ್ಟ್ನಲ್ಲಿ ವಕೀಲಿಕೆ, ದೀದಿ ಗೆಟಪ್ ಚೇಂಜ್

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಳಿ ಸೀರೆ ಉಟ್ಟುಕೊಂಡು ಸಿಂಪಲ್ ಆಗಿ ಇರೋದನ್ನು ಎಲ್ಲರೂ ನೋಡಿದ್ದಾರೆ. ಇದೀಗ ದೀದಿ ಗೆಟಪ್ ಚೇಂಜ್ ಆಗಿದೆ.
ಇದನ್ನೂ ಓದಿ:ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ! – ರಾಹುಲ್ ಗಾಂಧಿ ಆಪ್ತನಿಗೆ ಬಿಗ್ಶಾಕ್!
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಕರಿಕೋರ್ಟ್ ಧರಿಸಿ ಕೋರ್ಟ್ಗೆ ಬಂದಿದ್ದಾರೆ. ಗುರುವಾರ ವಕೀಲರ ಕಪ್ಪು ಕೋಟ್ ಧರಿಸಿ ಮೊದಲ ಬಾರಿಗೆ ಕೋಲ್ಕತ್ತಾ ಹೈಕೋರ್ಟ್ಗೆ ಹಾಜರಾದರು. ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರವಾಗಿ ವಾದ ಮಂಡಿಸಿದರು.
ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, “ನಾನು ಇಲ್ಲಿ ವಕೀಲೆಯಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಹೈಕೋರ್ಟ್ನಲ್ಲಿ ಇದು ನನ್ನ ಮೊದಲ ಹಾಜರಾತಿಯಾಗಿದ್ದು, ಗೌರವಾನ್ವಿತ ನ್ಯಾಯಾಧೀಶರಿಗೆ ನನ್ನ ನಮನಗಳು” ಎಂದು ಮಾತು ಆರಂಭಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿ, ತಮ್ಮ ವಾದ ಮಂಡಿಸಿದರು. ಪಶ್ಚಿಮ ಬಂಗಾಳವು ಬುಲ್ಡೋಜರ್ ರಾಜ್ಯವಲ್ಲ. ಇಲ್ಲಿ ಕಾನೂನಿನ ಆಡಳಿತವಿದೆ. ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುತ್ತಿರುವುದು ಖಂಡನೀಯ. ಹಿಂಸಾಚಾರದಲ್ಲಿ ಮಕ್ಕಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನೂ ಬಿಡುತ್ತಿಲ್ಲ. ಕೊಲೆಯಾದ 10 ಜನರ ಪಟ್ಟಿಯನ್ನು ನಾನು ನೀಡುತ್ತಿದ್ದೇನೆ, ಇದರಲ್ಲಿ ಆರು ಮಂದಿ ಹಿಂದೂಗಳಾಗಿದ್ದಾರೆ ಎಂದು ವಕೀಲೆ ಮಮತಾ ಬ್ಯಾನರ್ಜಿ ನ್ಯಾಯಪೀಠಕ್ಕೆ ತಿಳಿಸಿದರು.
. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಪುತ್ರ ಶೀರ್ಷಣ್ಯ ಬ್ಯಾನರ್ಜಿ ಅವರು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಲು ಮಮತಾ ಬ್ಯಾನರ್ಜಿ ಅವರೇ ನೇರವಾಗಿ ನ್ಯಾಯಾಲಯಕ್ಕೆ ಇಳಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಮಮತಾ ಬ್ಯಾನರ್ಜಿ ಅವರು ಬಹುಪದವಿಗಳನ್ನು ಗಳಿಸಿದ್ದಾರೆ. ಬಿಎ, ಎಂಎ, ಬಿಎಡ್, ಎಲ್ಎಲ್ಬಿ ಓದಿದ್ದಾರೆ. ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಕೋಲ್ಕತಾದ ಜೋಗೇಶ್ ಚಂದ್ರ ಚೌಧುರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ನೋಡಿರಿ

