Biggbossನಿಂದ ಜಗದೀಶ್‌, ರಂಜಿತ್‌ OUT – ಲೇ.. ಲೋ.. ಇದೇನಾ ಸಂಸ್ಕೃತಿ?
ಮಾರಾಮಾರಿ.. ಶೋ ಮುಂದುವರಿಯುತ್ತಾ?

Biggbossನಿಂದ ಜಗದೀಶ್‌, ರಂಜಿತ್‌ OUT – ಲೇ.. ಲೋ.. ಇದೇನಾ ಸಂಸ್ಕೃತಿ?ಮಾರಾಮಾರಿ.. ಶೋ ಮುಂದುವರಿಯುತ್ತಾ?

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದೆ. ದೊಡ್ಮನೆಯಲ್ಲಿ ನಡೆದ ಮಾರಾಮಾರಿ ಕಂಡು ಬಿಗ್‌ಬಾಸ್ ತಾಳ್ಮೆ ಕಳೆದುಕೊಂಡಿದ್ದಾರೆ. ಜೊತೆಗೆ ಈ ರಿಯಾಲಿಟಿ ಶೋ ನೋಡ್ತಿರೋ ಫ್ಯಾನ್ಸ್ ಕೂಡಾ ಬಡಿದಾಟ, ಕಿತ್ತಾಟ ಕಂಡು ಮುಜುಗರಕ್ಕೊಳಾಗಿದ್ದಾರೆ. ಕೊನೆಗೂ ದೊಡ್ಮನೆ ಸರಿಯಾದ ಶಿಕ್ಷೆಯನ್ನೇ ನೀಡಿದೆ. ಕರ್ನಾಟಕದ ಕ್ರಶ್‌ ಅಂತಾ ದಿಢೀರ್ ಫೇಮಸ್ ಆಗಿರೋ ಲಾಯರ್ ಜಗದೀಶ್‌ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಜೊತೆಗೆ ರಂಜಿತ್‌ ಕೂಡಾ ಔಟ್‌ ಆಗಿದ್ದಾರೆ. ಅಷ್ಟಕ್ಕೂ ಜಗದೀಶ್ ಕೆಣಕಿದ್ದು ಯಾಕೆ, ರಂಜಿತ್‌ ಫೈಟಿಂಗ್ ಮಾಡಿದ್ದು ಯಾಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 39 ಫೋರ್.. 6 ಸಿಕ್ಸ್.. 309 ರನ್ – ಮುಲ್ತಾನ್ ಸುಲ್ತಾನ್ ಮತ್ತೆ ನೆನಪಾಗಿದ್ದೇಕೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗೆ ಕಾಲಿಟ್ಟ ಸ್ಪರ್ಧಿಗಳು ಮೊದಲ ದಿನದಿಂದಲೇ ತಾವು ಬಂದಿರೋದು ಜಗಳವಾಡಲು ಅನ್ನೋತರ ಕಿತ್ತಾಟ ಶುರು ಮಾಡ್ಕೊಂಡಿದ್ರು.. ಇದೀಗ ದೊಡ್ಮನೆಯ ಕಿತ್ತಾಟ ತಾರಕಕ್ಕೆ ಏರಿದೆ. ಇದೀಗ ಸ್ಪರ್ಧಿಗಳು ಕೈ ಕೈ ಮಿಲಾಸುವ ಮಟ್ಟಿಗೆ ಹೋಗಿದೆ. ಇದು ದೊಡ್ಮನೆ ಬಾಸ್ ನ ತಾಳ್ಮೆಗೂ ಪೆಟ್ಟು ಕೊಟ್ಟಿದೆ.  ಹೌದು. ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಜಗಳ ಆಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳವಾಗಿತ್ತು. ಕೆಲವು ಮಾಹಿತಿ ಪ್ರಕಾರ ಮತ್ತೊಬ್ಬ ಸ್ಪರ್ಧಿ ಮಾನಸಾ ಅವರ ವಿಚಾರಕ್ಕೆ ಜಗಳ ಆಗಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ರಂಜಿತ್‌ ಹಾಗೂ ಜಗದೀಶ್‌ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬಿಗ್​​ಬಾಸ್ ಮನೆಯಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯಲ್ಲಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಅಂದ್ಹಾಗೆ ಜಗದೀಶ್‌ ಆರಂಭದಿಂದಲೂ ತುಂಬಾ ಅಗ್ರೆಸೀವ್ ಆಗಿ ಆಟ ಆಡುತ್ತಿದ್ದರು. ಇತರೆ ಸ್ಪರ್ಧೆಗಳನ್ನು ಕೆರಳಿಸುವ ರೀತಿಯಲ್ಲಿ ಮಾತುಗಳನ್ನು ಆಡ್ತಿದ್ರು.. ಈ ಹಿಂದೆ ಬಿಗ್‌ ಬಾಸ್‌ ಗೂ ಅವಾಸ್‌ ಹಾಕಿದ್ರು.. ಎಲ್ಲಾ ಎಕ್ಸ್‌ಪೋಸ್‌ ಮಾಡ್ತೀನಿ.. ಹೊರಗಡೆ ಹೋಗಿ ನೋಡ್ಕೊಳ್ತೀನಿ ಅಂತಾ ಹೇಳಿದ್ರು.. ಪ್ರತಿ ಸ್ಪರ್ಧಿಗಳ ಜೊತೆಗೂ ಕಿತ್ತಾಡುತ್ತಿದ್ರು.. ಅಷ್ಟೇ ಅಲ್ಲದೇ ಹೆಣ್ಣು ಮಕ್ಕಳ ಬಗ್ಗೆಯೂ ಕೆಟ್ಟದಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು.. ಹೀಗಾಗಿ ಮಹಿಳಾ ಸ್ಪರ್ಧಿಗಳು ಈ ಬಗ್ಗೆ ಬಿಗ್‌ ಬಾಸ್‌ ಬಳಿ ನೇರವಾಗಿ ಆರೋಪ ಮಾಡ್ತಿದ್ದರು. ಇದೀಗ ಜಗದೀಶ್‌ ಆಟ ಅತಿರೇಕಕ್ಕೆ ಹೋಗಿದೆ.. ಸಹ ಸ್ಪರ್ಧಿಗಳನ್ನ ನಿಂದಿಸುವುದು ಜಾಸ್ತಿ ಆಗಿದೆ. ನಿನ್ನೆಯೂ ಚೈತ್ರಾ ಕುಂದಾಪುರ ಅವರ ಕೇಸ್‌ ವಿಚಾರವಾಗಿ ಮಾತನಾಡಿದ್ರು.. ಇದ್ರಿಂದಾಗಿ ಚೈತ್ರಾ ಕೆರಳಿ ಕೆಂಡವಾಗಿದ್ರು.. ಇದೀಗ ದೊಡ್ಮನೆಯಲ್ಲಿ ಜಗಳ ಅತಿರೇಕಕ್ಕೆ ಹೋಗಿದೆ. ಹೀಗಾಗಿ ಲಾಯರ್‌ ಜಗದೀಶ್‌ ಹಾಗೂ ರಂಜಿತ್‌  ಮನೆಯಿಂದನೇ ಹೊರ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಕಲರ್ಸ್‌ ಕನ್ನಡ ವಾಹಿನಿ ಇವತ್ತು ರಿಲೀಸ್‌ ಮಾಡಿರೋ ಪ್ರೋಮೋದಲ್ಲೂ ಬರೀ ಜಗಳವನ್ನೇ ತೋರಿಸಲಾಗಿತ್ತು.. ಇತಿ-ಮಿತಿ ಎಲ್ಲವೂ ಮರೆತ ಸ್ಪರ್ಧಿಗಳು ಎಂದು ರಿಲೀಸ್ ಆಗಿರುವ ವಿಡಿಯೋಗೆ ಟ್ಯಾಗ್​​ಲೈನ್ ಕೊಡಲಾಗಿದೆ. ಈ ಪ್ರೋಮೋದಲ್ಲಿ  ಶಿಶಿರ್ ಅವರು ತಮ್ಮ ಮೊದಲ ನಾಮಿನೇಷನ್ ಧರ್ಮ ಅವರು ಎಂದು ಹೇಳುತ್ತಾರೆ. ಇದಕ್ಕೆ ಲಾಯರ್ ಜಗದೀಶ್ ಅವರು ನೀವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ನನಗನಿಸುತ್ತಿದೆ ಎಂದಿದ್ದಾರೆ. ಈ ವೇಳೆ ಮಾನಸ ಎಲ್ಲದಕ್ಕೂ ಬಾಯಿ ಹಾಕುತ್ತಿರಲ್ಲ ಎಂದು ಜಗದೀಶ್​ ಅವರಿಗೆ ಆವಾಜ್ ಹಾಕಿದ್ದಾರೆ. ಆಗ ಮನೆ ಮಂದಿಯೆಲ್ಲ ಎದ್ದು ಜಗಳಕ್ಕೆ ನಿಂತಿದ್ದಾರೆ.

ನಾಮಿನೇಟ್ ಆದವರೇ ಸುಮ್ಮನೆ ಇದ್ದಾರೆ, ನಿಂದೇನು ಲೇ, ಹೋಗಲೇ, ನಿಮ್ಮನೇ ಮುಂದೆ ನಿಂತಿದ್ದೇನಾ? ಎಂದು ಜಗದೀಶ್​ಗೆ ತ್ರಿವಿಕ್ರಮ್ ಏಕವಚನದಲ್ಲೇ ಹೇಳಿದ್ದಾರೆ. ಇದೇ ವೇಳೆ ಮಂಜು ಬಂದು ಥೂ ನಿನ್ನ ಯೋಗ್ಯತೆಗೆ, ಹೋಗಲೇ.. ಹೋಗಲೇ.. ಎಂದು ಜಗದೀಶ್​ಗೆ ಹೇಳಿದ್ದಾರೆ. ಇನ್ನು ಈ ರೀತಿ ಹೇಳುವಾಗ ಜಗದೀಶ್ ಹಾಗೂ ಮಂಜು ಇಬ್ಬರು ಫೇಸ್​ ಟು ಫೇಸ್ ಇದ್ದರು. ಇದೇ ವೇಳೆ ಬಿಗ್ ಬಾಸ್ ಎಂಟ್ರಿಯಾಗಿದ್ದು ಈ ಕೂಡಲೇ ಸೋಫಾದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ಹೀಗೆ ಹೇಳುವಾಗಲೂ ಸ್ಪರ್ಧಿಗಳೆಲ್ಲ ಗುಂಪಾಗಿಯೇ ಇದ್ದರು. ಈ ಕಾರಣಕ್ಕಾಗಿಯೇ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕನ್ನಡ ಬಿಗ್​ಬಾಸ್​ ಇತಿಹಾಸದಲ್ಲಿ ಜಗಳ ಆಡಿಕೊಂಡು ಸ್ಪರ್ಧಿಗಳು ಹೊರಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಹುಚ್ಚ ವೆಂಕಟ್​ ಬಿಗ್​ಬಾಸ್ ಮನೆಯಿಂದ ಔಟ್ ಆಗಿದ್ದರು. ​ ಹುಚ್ಚ ವೆಂಕಟ್ ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಯೊಬ್ಬರ ಮೇಲೆ ಕೈ ಮಾಡಿದ್ದರು. ಕಿಚ್ಚನ ಕಾರ್ಯಕ್ರಮದಲ್ಲಿಯೇ ಕೈ ಮಿಲಾಯಿಸಿಕೊಂಡಿದ್ದರು. ಇದನ್ನು ನೋಡಿದ ಕಿಚ್ಚ ಸುದೀಪ್​ ನೇರವಾಗಿ ಹುಚ್ಚಾ ವೆಂಕಟ್​ ಅವರನ್ನ ಮನೆಯಿಂದ ಹೊರ ಹಾಕಿದ್ದರು.‌

Shwetha M

Leave a Reply

Your email address will not be published. Required fields are marked *