ಲಾಯರ್‌ ಜಗದೀಶ್‌ ಅರೆಸ್ಟ್‌ – ಯುವಕರು ಅಟ್ಯಾಕ್‌ ಮಾಡಿದ್ಯಾಕೆ?

ಲಾಯರ್‌ ಜಗದೀಶ್‌ ಅರೆಸ್ಟ್‌ – ಯುವಕರು ಅಟ್ಯಾಕ್‌ ಮಾಡಿದ್ಯಾಕೆ?

ಲಾಯರ್‌ ಜಗದೀಶ್..‌ ವಿವಾದ ಇವರನ್ನ ಹುಡುಕಿಕೊಂಡು ಬರುತ್ತೋ.. ಇಲ್ಲ ಇವರೇ ಹುಡುಕಿಕೊಂಡು ಹೋಗ್ತಾರೋ ಗೊತ್ತಿಲ್ಲ. ಬಿಗ್‌ ಬಾಸ್‌ ಮನೆಯಿಂದ ಹೊರಬಂದ್ಮೇಲೆ ಜಗದೀಶ್‌ ಒಂದಲ್ಲ ಒಂದು ವಿವಾದದಿಂದ ಸುದ್ದಿಯಲ್ಲಿದ್ದಾರೆ. ಇದೀಗ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಯುವಕರೊಂದಿಗೆ ಹೊಡೆದಾಡಿಕೊಂಡಿದ್ದು, ಅರೆಸ್ಟ್‌ ಆಗುವಂತೆ ಆಗಿದೆ. ಅಷ್ಟಕ್ಕೂ ಲಾಯರ್‌ ಜಗದೀಶ್‌ ಅರೆಸ್ಟ್‌ ಆಗಿದ್ದು ಯಾಕೆ? ಏನ್‌ ಕೇಸ್‌.. ಯುವಕರು ಅಟ್ಯಾಕ್‌ ಮಾಡಿದ್ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಭಿಷೇಕ್ ಇಂಜುರಿ.. ಶಮಿ ಅನ್ ಫಿಟ್ – 2 ಪಂದ್ಯಕ್ಕೆ ಟೀಂ ಕಂಪ್ಲೀಟ್ ಚೇಂಜ್?

ಕೇಸ್ ಯಾವುದೇ ಇರಲಿ..‌ ಸೋಶಿಯಲ್‌ ಮೀಡಿಯಾ ಮೂಲಕ ಆ ಪ್ರಕರಣದ ಕುರಿತು ವಕಾಲತ್ತು ಮಾಡೋರು ಕೆ.ಎನ್. ಜಗದೀಶ್.. ವಕೀಲ್ ಸಾಬ್ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್‌ ಆಗಿರೋ ಜಗದೀಶ್ ನ್ಯಾಯಾಲಯದ ಆವರಣದಕ್ಕಿಂತ ಬೀದಿಯಲ್ಲಿ ಕಾಣಿಸಿದ್ದೇ ಹೆಚ್ಚು. ಇದೀಗ ಜಗದೀಶ್‌ ಮತ್ತೆ ದೊಡ್ಡ ಕಿರಿಕ್‌ ಮಾಡಿಕೊಂಡಿದ್ದಾರೆ. ಇದೀಗ ಯುವಕರೊಂದಿಗೆ ದೊಡ್ಡ ಗಲಾಟೆ ಮಾಡಿಕೊಂಡಿದ್ದಾರೆ. ಈ ಕೇಸ್‌ ಸಂಬಂಧ ಲಾಯರ್‌ ಜಗದೀಶ್‌ ಹಾಗೂ ಗನ್‌ ಮ್ಯಾನ್‌ ಅರೆಸ್ಟ್‌ ಆಗಿದ್ದಾರೆ. ಕೋಡಿಗೆಹಳ್ಳಿ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಜಗದೀಶ್‌ ನಿವಾಸವನ್ನ ಸಂಪರ್ಕಿಸುವ ರಸ್ತೆಯಲ್ಲಿ ಅಲ್ಲಿನ ಸ್ಥಳೀಯ ಯುವಕರು ಅಣ್ಣಮ್ಮ ಕೂರಿಸಲು ರಸ್ತೆ ಬಂದ್‌ ಮಾಡಿದ್ರು.. ಇದೇ ವಿಚಾರವಾಗಿ ಗುರುವಾರ ಲಾಯರ್‌ ಜಗದೀಶ್‌  ಸ್ಥಳೀಯ ಯುವಕರನ್ನ ಪ್ರಶ್ನೆ ಮಾಡಿದ್ರು.. ಈ ವೇಳೆ ಇದು ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿತ್ತು.. ಯುವಕರ ಗುಂಪು ಜಗದೀಶ್‌ ಗೆ ಸರಿಯಾಗಿ ಥಳಿಸಿದ್ರು.. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೇ ವಿಚಾರವಾಗಿ ಮತ್ತೆ ಲಾಯರ್‌ ಜಗದೀಶ್‌ ಮತ್ತೆ ಯುವಕರೊಂದಿಗೆ ಕಿರಿಕ್‌ ಮಾಡಿದ್ದಾರೆ.

ಹೌದು, ನಿನ್ನೆ ರಾತ್ರಿ 9 ಗಂಟೆಗೆ ಅದೇ ಮಾರ್ಗದಲ್ಲಿ ಲಾಯರ್‌ ಜಗದೀಶ್‌ ಹೋಗಿದ್ದಾರೆ. ರೋಡ್‌ ಬಂದ್‌ ಮಾಡಿದ್ದಕ್ಕೆ ಮತ್ತೆ ತಮ್ಮದೇ ಶೈಲಿಯಲ್ಲಿ ಜಗದೀಶ್‌ ಯುವಕರನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ವಕೀಲ ಜಗದೀಶ್ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿತ್ತು. ಜಗದೀಶ್‌ ನಡೆಯಿಂದ ಸಿಟ್ಟಾದ ಯುವಕರು ಅವರ ಸ್ಪಾರ್ಪಿಯೋ ಕಾರ್‌ ಮೇಲೆ ದಾಳಿ ನಡೆಸಿ, ಕಾರನ್ನ ಚಿಂದಿ ಮಾಡಿದ್ರು..  ಈ ಗಲಾಟೆಯಲ್ಲಿ ಲಾಯರ್ ಜಗದೀಶ್ ಅವರ ಗನ್​ಮ್ಯಾನ್​ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.  ಗುಂಡಿನ ಸದ್ದು ಕೇಳಿ ಬೆಚ್ಚಿದ ಜನರು ರೊಚ್ಚಿಗೆದ್ದು ಜಗದೀಶ್​ ಹಾಗೂ ಗನ್ ಮ್ಯಾನ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗ್ತಿದೆ.  ಆ ನಂತರ ಸಾಕಷ್ಟು ಗದ್ದಲ ಉಂಟಾಗಿತ್ತು ಅಂತಾ ಹೇಳಲಾಗ್ತಿದೆ.  ಮತ್ತೆ ಜಗದೀಶ್‌ ಮನೆ ಬಳಿ ಬಂದ ಯುವಕರ ಗುಂಪು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗ್ತಿದೆ. ಬಳಿಕ ಫೇಸ್​ಬುಕ್​ ಲೈವ್​ನಲ್ಲಿ ತನ್ನ ಮೇಲಾದ ಅಟ್ಯಾಕ್ ಬಗ್ಗೆ ಜಗದೀಶ್​ ಮಾತಾಡಿದ್ದಾರೆ. ಇವತ್ತು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪೊಲೀಸರು ಬಂದು ನಮ್ಮನ್ನು ರಕ್ಷಿಸಿದ್ದಾರೆ. ನನ್ನ ಫ್ಯಾಮಿಲಿ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಜಗದೀಶ್ ವಿಡಿಯೋದಲ್ಲಿ ಹೇಳಿದ್ರು.  ಈ ಪ್ರಕರಣ ಸಂಬಂಧ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೇಜಸ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್ ಜಗದೀಶ್  ಹಾಗೂ ಗನ್‌ ಮ್ಯಾನ್‌ ಅನ್ನ ಬಂಧಿಸಿದ್ದಾರೆ . ಕೊಡಿಗೇಹಳ್ಳಿ ಪೊಲೀಸರು ಜಗದೀಶ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇನ್ನು ಬಿಗ್‌ ಬಾಸ್‌ ಸೀಸನ್‌ 11 ಗ್ರ್ಯಾಂಡ್‌ ಫಿನಾಲೆ ರೆಕಾರ್ಡಿಂಗ್‌ ಮುಗಿದಿದೆ. ಈ ಸೀಸನ್‌ ನಲ್ಲಿ ಲಾಯರ್‌ ಜಗದೀಶ್‌ ಹೆಚ್ಚು ಸದ್ದು ಮಾಡಿದ್ರು.. ದೊಡ್ಮನೆಯಲ್ಲಿ ಅವಾಚ್ಯ ಶಬ್ದಗಳನ್ನ ಬಳಸಿ, ಸಹ ಸ್ಪರ್ಧಿಗಳನ್ನು ನಿಂದಿಸಿದ್ರು.. ಇದೇ ವಿಚಾರವಾಗಿ ಕಿರಿಕ್‌ ಮಾಡಿಕೊಂಡು ದೊಡ್ಮನೆಯಿಂದ ಆಚೆ ಬಂದಿದ್ರು.. ಬಿಗ್‌ ಬಾಸ್‌ ಮನೆಯಿಂದ ಬಂದ ಜಗದೀಶ್‌, ಶೋ ಬಗ್ಗೆ ಕೂಡ ಕೆಟ್ಟದಾಗಿ ಮಾತನಾಡಿದ್ರು.. ಕಳೆದ ವಾರ ಮಾಜಿ ಸ್ಪರ್ಧಿಗಳನ್ನ ದೊಡ್ಮನೆಗೆ ಕರೆಸಲಾಗಿತ್ತು.. ಆದ್ರೆ ಲಾಯರ್‌ ಜಗದೀಶ್‌ ಮಾತ್ರ ಬಂದಿರ್ಲಿಲ್ಲ.. ಗ್ರ್ಯಾಂಡ್‌ ಫಿನಾಲೆಯಲ್ಲೂ ಜಗದೀಶ್‌ ಭಾಗಿಯಾಗಿಲ್ಲ.. ಇದಕ್ಕೆ ಕಾರಣ ಜಗದೀಶ್‌ ಮಾಡಿಕೊಳ್ಳುತ್ತಿರುವ ಕಿರಿಕ್‌ಗಳೇ ಅಂತಾ ಹೇಳಲಾಗ್ತಿದೆ. ಇದೀಗ ಯುವಕರೊಂದಿಗೆ ಜಗಳಮಾಡಿಕೊಂಡು ಜಗದೀಶ್‌ ಜೈಲು ಸೇರುವಂತೆ ಆಗಿದೆ.

Shwetha M