ಸುಪ್ರೀಂ ಜಡ್ಜ್ ಮೇಲೆ ಶೂ! – CJI ಮೇಲೆ ಲಾಯರ್‌ಗೆ ಸಿಟ್ಟೇಕೆ?
ಹಿಂದೂ ಧರ್ಮ ಅಪಮಾನ ಸಹಿಸಲ್ಲ

ಸುಪ್ರೀಂ ಜಡ್ಜ್ ಮೇಲೆ ಶೂ! – CJI ಮೇಲೆ ಲಾಯರ್‌ಗೆ ಸಿಟ್ಟೇಕೆ?ಹಿಂದೂ ಧರ್ಮ ಅಪಮಾನ ಸಹಿಸಲ್ಲ

ಯಾರೇ ತಪ್ಪು ಮಾಡಿದ್ರೂ ಅವರಿಗೆ ಕಾನೂನಿನಲ್ಲಿ ಶಿಕ್ಷೆ ಆಗುತ್ತೆ.. ಆ ಶಿಕ್ಷೆಯನ್ನ ನೀಡುವರು ಕೋರ್ಟ್ನಲ್ಲಿರೋ ಜಡ್ಜ್.. ಅವರನ್ನ ದೇವರಂತೆ ನಾವು ನೋಡ್ತಿವಿ. ಅವರು ಕೊಟ್ಟ ತೀರ್ಪಿಗೆ ತಲೆಬಾಗಿಸಿ ಶಿಕ್ಷೆಯನ್ನ ಅನುಭವಿಸುತ್ತೇವೆ..ನಮ್ಮ ದೇಶದಲ್ಲಿ ಸೆಷನ್ಸ್ ಕೋರ್ಟ್ನಲ್ಲಿ ನ್ಯಾಯ ಸಿಕ್ಕಿಲ್ಲ, ಅಂದ್ರೆ ಹೈ ಕೋರ್ಟ್ಗೆ ಹೋಗ್ತಿವಿ.. ಹೈಕೋರ್ಟ್ನಲ್ಲಿ ನ್ಯಾಯ ಸಿಕ್ಕಿಲ್ಲ ಅಂದ್ರೆ ಸುಪ್ರೀಂಗೆ ಹೋಗ್ತಿವಿ.. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಫೈನಲ್. ಆಮೇಲೆ ಏನ್ ಮಾಡಿದ್ರೂ ಶಿಕ್ಷೆ ಕಮ್ಮಿಯಾಗಲ್ಲ. ಹೀಗಿರುವಾಗ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾ.. ಸರಿತಪ್ಪು ನೋಡಿ ತೀರ್ಪು ನೀಡೋ ಸುಪ್ರೀಂ ಮುಖ್ಯ ನ್ಯಾಯಮೂರ್ತಿಗೆ ಇವತ್ತು ಅವಮಾನ ಆಗಿದೆ. ಅವರ ಮೇಲೆ  ಶೂನಿಂದ ದಾಳಿಗೆ ಯತ್ನಿಸಲಾಗಿದೆ..

ಸುಪ್ರೀಂ ಅಂಗಳದಲ್ಲಿ ಇವತ್ತು ಇಡೀ ದೇಶವೇ ನಡುಗಿ ಹೋಗುವ , ದೇಶದ ಜನ ಅಸಹ್ಯ ಪಡೋ ಘಟನೆ ನಡೆದಿದೆ.. ಇದು ಪ್ರತಿಯೊಬ್ಬ ಭಾರತೀಯನೂ ಕೂಡ ತಲೆ ತಗ್ಗಿಸೋ ಘಟನೆ ಅಂದ್ರೆ ತಪ್ಪಿಲ್ಲ. ಆಗಿದ್ದೇನು ಅಂದ್ರೆ ಇವತ್ತು CJI ಬಿ.ಆರ್. ಗವಾಯಿ ನೇತೃತ್ವದ ನ್ಯಾಯಪೀಠವು ಕೇಸ್ಗಳ ವಿಚಾರಣೆಯನ್ನ ನಡೆಸುತ್ತಿತ್ತು. ಕೋರ್ಟ್ ಹಾಲ್ ಕೂಡ ಪರವಿರೋಧ ಚರ್ಚೆಯನ್ನ ಕೇಳ್ತಾ ಇತ್ತು. ಈ ಟೈಂಗೆ ಅಲ್ಲಿಗೆ ಬಂದ ವಕೀಲ ಕಿಶೋರ್ ರಾಕೇಶ್ ಶೂ ಕಳಚಿ ನ್ಯಾಯಮೂರ್ತಿಗಳತ್ತ ಎಸೆಯೋಕೆ ಯತ್ನ ಮಾಡಿದ್ದಾನೆ..  ಆದರೇ, ಶೂ ಸಿಜೆಐ ಮೇಲೆ ಬಿದ್ದಿಲ್ಲ.  ಶೂ, ಸಿಜೆಐ ಅವರ  ಬೆಂಚ್ ಮೇಲೆ ಬಿದ್ದಿದೆ. ಇದ್ದನ್ನ ಗಮನಿಸುತ್ತಿದ್ದ ಅಲ್ಲಿನ  ಭದ್ರತಾ ಸಿಬ್ಬಂದಿ   ವಕೀಲ ಕಿಶೋರ್ ರಾಕೇಶ್ರನ್ನು ತಡೆದು, ಕೋರ್ಟ್ ಹಾಲ್ನಿಂದ ಹೊರಕ್ಕೆ ಹಾಕಿದ್ದಾರೆ. ಈ ಟೈಂನಲ್ಲಿ ಆ ವಕೀಲ ಸನಾತನ ಕಾ ಅಪಮಾನ್ ನಹೀ ಸಹೇಂಗೆ ಅಂತ ಹಿಂದಿಯಲ್ಲಿ ಕೂಗಿದ್ದಾನೆ. ಅಂದ್ರೆ  ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ ಅನ್ನೋದ್ದನ್ನ ಕೂಗಿ ಹೇಳಿದ್ದಾನೆ. ಈ ಘಟನೆಯಿಂದ ಅಲ್ಲಿದ್ದ ವಕೀಲರು ಕೂಡ ಬೆಚ್ಚಿ ಬಿದ್ದಿದ್ದಾರೆ. ಆದ್ರೆ ಸಿಜೆಐ ಗವಾಯಿ ಮಾತ್ರ ಯಾವುದ್ದಕ್ಕೂ ತಲೆ ಕೆಡಿಸಿಕೊಂಡಿಲ್ಲ ಅನ್ನೋದೆ ಇಂಟ್ರೆಸ್ಟಿಂಗ್ ವಿಷ್ಯ..

ವಕೀಲ ರಾಕೇಶ್ ಚಪ್ಪಲಿ ಎಸೆದ್ರೂ  ಸಿಜೆಐ ಗವಾಯಿ ಚೂರೇ ಚೂರು ಶೇಕ್ ಆಗಿಲ್ಲ.  ಆ ಮೇಲೆ ಅಲ್ಲಿದ್ದ ವಕೀಲರ ಜೊತೆ ಮಾತಾಡಿದ ಅವರು  ಇಂತಹ ವಿಚಾರಗಳಿಂದ ನಿಮ್ಮ ಗಮನ ಬೇರೆಡೆಗೆ ಹೋಗದಂತೆ ನೋಡಿಕೊಳ್ಳಿ. ನಾವು ವಿಚಲಿತರಾಗಿಲ್ಲ. ಇಂಥದ್ದರಿಂದ ನನ್ನ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ ಎಂದು ಗಟ್ಟಿ ದನಿಯಲ್ಲಿ ಹೇಳುತ್ತಾ  ನ್ಯಾಯಾಲಯದ ಕಲಾಪವನ್ನು ಮುಂದುವರಿಸಿದ್ರು.

 ಸಿಜೆಐ ಮೇಲೆ ಶೂ ಎಸೆಯೋ ಕೋಪ ಏನು?

ನಮ್ಗೆ ಈ ಘಟನೆ ನೋಡಿದ ಮೇಲೆ ಒಂದು ಅನ್ಸುತ್ತೆ.. ಒಬ್ಬ ಲಾಯರ್.. ಕಾನೂನು ಗೊತ್ತಿರೋ ವ್ಯಕ್ತಿ.. ಕೋರ್ಟ್ ಹಾಗೂ ಜಡ್ಜ್ ಮೇಲೆ ಗೌರವ ಹೊಂದಿರೋ ವ್ಯಕ್ತಿ.. ಆದ್ರೆ ಯಾಕೆ ಶೂ ಎಸೆದ ಅನ್ನೋದು ಎಲ್ಲರನ್ನೂ ಕಾಡುತ್ತೆ.   ಇದ್ದಕ್ಕೆ ಕಾರಣ ಮಧ್ಯಪ್ರದೇಶದಲ್ಲಿರುವ ಖಜುರಾಹೋ ಹಿಂದೂ ದೇವಾಲಯವಂತೆ.. ಇದು ಕ್ರಿ.ಶ. 950 ಮತ್ತು ಕ್ರಿ.ಶ 1050 ರ ನಡುವೆ ಚಂಡೇಲಾ ರಾಜವಂಶದ ಆಡಳಿತಗಾರರು ನಿರ್ಮಿಸಿದ ದೇವಸ್ಥಾನ . ಈ ದೇಗುಲ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಹೆಸರುವಾಸಿ. ಆದ್ರೆ ಇದ್ರಲ್ಲಿ ಸಾಕಷ್ಟು ವಿಗ್ರಹಗಳು  ಮೊಘಲ್ ಆಕ್ರಮಣದ ಸಮಯದಲ್ಲಿ ವಿರೂಪಗೊಂಡಿವೆ.  ಹಾಗೇ ಈ ದೇವಸ್ಥಾನದಲ್ಲಿರೋ 7 ಅಡಿ ಎತ್ತರದ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸುವ ಕುರಿತು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಆ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ಸೆಪ್ಪೆಂಬರ್ 16 ರಂದು ವಜಾಗೊಳಿಸಿತ್ತು. ಅಷ್ಟೇ ಆಗಿಲ್ಲ.. ಈ ಪ್ರಕರಣದಲ್ಲಿ ಸಿಜೆಐ ಬಿ.ಆರ್. ಗವಾಯಿ ನೀಡಿದ್ದ ಹೇಳಿಕೆಯೇ ಇವತ್ತಿನ ಘಟನೆಗೆ ಕಾರಣ ಎನ್ನಲಾಗ್ತಿದೆ. ಆ ಪ್ರಕರಣವನ್ನು ವಜಾಗೊಳಿಸುವಾಗ, ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಈಗ ಹೋಗಿ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ  ಎಂದು ಅರ್ಜಿದಾರರಿಗೆ ಸಿಜಿಐ  ಹೇಳಿದ್ದರು. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದವನ್ನ ಹುಟ್ಟು ಹಾಕಿತ್ತು.  ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿವಾದದ ನಂತರ, ಸಿಜೆಐ ಗವಾಯಿ ಅವರು ಸ್ಪಷ್ಟನೆಯನ್ನು ನೀಡಿ.. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ  ಎಂದು ಹೇಳಿದ್ರು. ಆದ್ರೆ ಇವತ್ತು ಜಡ್ಜ್ ಮೇಲೆ ಶೂ ಎಸೆದು ಲಾಯರ್ ಅಟ್ಟಹಾಸ ಮೆರೆದಿದ್ದಾನೆ.

ಈ ಹಿಂದೆ ಸುಪ್ರೀಂಕೋರ್ಟ್ ನಲ್ಲಿ ಕೆಲ ವಕೀಲರು ಕೆಲವು ವಿಚಾರಣೆ ನಡೆಯುವಾಗ ಕೆಲವೊಂದು ಘೋಷಣೆ ಕೂಗಿದ್ದಾರೆ. ಆದರೇ, ಯಾರೂ CJI ಆಗಲೀ, ಬೇರೆ ಜಡ್ಜ್ ಗಳ ಮೇಲಾಗಲೀ ಶೂ ಎಸೆದಿರಲಿಲ್ಲ. ಈಗ ಮೊದಲ ಭಾರಿಗೆ ಶೂ ಎಸೆತದ ಘಟನೆ ನಡೆದಿದೆ. ಹೀಗಾಗಿ ಈಗ ಆರೋಪಿ ವಕೀಲ ಕಿಶೋರ್ ರಾಕೇಶ್ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು. ಈ ಘಟನೆ ದೇಶದಲ್ಲಿ ಬಿರುಗಾಳಿಯನ್ನ ಎಬ್ಬಿಸಿದ್ದು, ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

Kishor KV