ಇನ್ಮುಂದೆ ರೈಡ್ ಕ್ಯಾನ್ಸಲ್‌ ಮಾಡುವಂತಿಲ್ಲ ಕ್ಯಾಬ್‌ ಡ್ರೈವರ್‌! – ಓಲಾದಿಂದ ಹೊಸ ಸೇವೆ ಆರಂಭ

ಇನ್ಮುಂದೆ ರೈಡ್ ಕ್ಯಾನ್ಸಲ್‌ ಮಾಡುವಂತಿಲ್ಲ ಕ್ಯಾಬ್‌ ಡ್ರೈವರ್‌! – ಓಲಾದಿಂದ ಹೊಸ ಸೇವೆ ಆರಂಭ

ಬೆಂಗಳೂರು: ಸಾಮಾನ್ಯವಾಗಿ ಓಲಾ ಕ್ಯಾಬ್ ಬುಕ್ ಮಾಡಿದಾಗ  ಚಾಲಕ ರೈಡ್ ಅನ್ನು ಕ್ಯಾನ್ಸಲ್ ಮಾಡುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ. ಆದರೆ, ಇನ್ನು ಮುಂದೆ  ಈ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, OLA ತನ್ನ ವಿಶೇಷ ಸೇವೆಯನ್ನು ಪ್ರಾರಂಭಿಸಿದೆ.

ಕ್ಯಾಬ್‌ ಡ್ರೈವರ್‌ ಹೆಚ್ಚಾಗಿ ರೈಡ್‌ ಕ್ಯಾನ್ಸಲ್‌ ಮಾಡುತ್ತಿರುತ್ತಾರೆ. ಇದಕ್ಕಾಗಿಯೇ ಕಂಪನಿಯು ಓಲಾ ಪ್ರೀಮಿಯಂ ಪ್ಲಸ್ ಸೇವೆಯ ಜಾರಿಗೆ ಮುಂದಾಗಿದೆ. ಬಳಕೆದಾರರು ಪ್ರೈಮ್ ಪ್ಲಸ್ ಮೂಲಕ ಕ್ಯಾಬ್ ಅನ್ನು ಬುಕ್ ಮಾಡಿದಾಗ, ಅವರಿಗೆ ‘ಅತ್ಯುತ್ತಮ ಚಾಲಕರನ್ನು ಒದಗಿಸಲಾಗುತ್ತದೆ. ಅಲ್ಲದೆ, ಈ ಸೇವೆಯ ಮೂಲಕ ಯಾವುದೇ  ಕ್ಯಾನ್ಸಲೇಶನ್ ಅಥವಾ  ಡ್ರೈವಿಂಗ್ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ.

ಇದನ್ನೂ ಓದಿ: ವಿಮಾನದ ಟಿಕೆಟ್ ಗಿಂತಲೂ ದುಬಾರಿ ಉಬರ್‌! – ಏರ್‌ಪೋರ್ಟ್‌ ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಎಷ್ಟು ಹಣ ಗೊತ್ತಾ?

ಈ ಬಗ್ಗೆ ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಟ್ವೀಟ್ ಮಾಡಿದ್ದು, ಕಂಪನಿಯ  ಯೋಜನೆಯ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ. “ಓಲಾ ಕ್ಯಾಬ್ಸ್, ಪ್ರೈಮ್ ಪ್ಲಸ್‌ನಿಂದ ಹೊಸ ಪ್ರೀಮಿಯಂ ಸೇವೆಯನ್ನು ಒದಗಿಸುವ ಬಗ್ಗೆ ಪ್ರಯತ್ನ ನಡೆಸುತ್ತಿದೆ. ಇದರ ಅಡಿಯಲ್ಲಿ ಅತ್ಯುತ್ತಮ ಚಾಲಕರು, ಉನ್ನತ ಕಾರುಗಳು, ಮಾತ್ರವಲ್ಲದೆ  ಕ್ಯಾನ್ಸಲೇಶನ್ ಅಥವಾ  ಡ್ರೈವಿಂಗ್ ಸಮಸ್ಯೆಯನ್ನು ಪ್ರಯಾಣಿಕರು ಎದುರಿಸಬೇಕಾಗಿಲ್ಲ  ಎಂದು ಹೇಳಿದ್ದಾರೆ.

ಸದ್ಯಕ್ಕೆ Ola ಪ್ರೀಮಿಯಂ ಪ್ಲಸ್ ಬೆಂಗಳೂರಿನ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಕ್ರಮೇಣ ಈ ಸೇವೆಯನ್ನು ದೇಶದಾದ್ಯಂತ ಜಾರಿಗೆ ತರಲಿದೆ. ಅದಕ್ಕೂ ಮುನ್ನ ಈ ಸೇವೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತಂದು ಜನರ ಪ್ರತಿಕ್ರಿಯೆಯನ್ನು ನೋಡಲು ಬಯಸುತ್ತದೆ ಎಂದು ಹೇಳಿದ್ದಾರೆ.  ಓಲಾ APP ಮೂಲಕ ರೈಡ್ ಬುಕ್ ಮಾಡುವಾಗ ಕಾಣಿಸುವ ಪ್ರೈಮ್ ಪ್ಲಸ್ ಎನ್ನುವ ಹೊಸ ಆಯ್ಕೆಯನ್ನು ಪ್ರದರ್ಶಿಸುವ  ಮೂಲಕ ರೈಡ್ ನ ಸ್ಕ್ರೀನ್ ಶಾಟ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಸ್ಕ್ರೀನ್‌ಶಾಟ್ ಪ್ರಕಾರ, ಓಲಾ ಪ್ರೈಮ್ ಪ್ಲಸ್ ಸೇವೆಯ ಮೂಲಕ ಕ್ಯಾಬ್ ಬುಕ್ ಮಾಡುವ ವೆಚ್ಚ 455 ರೂ.  ಇದಕ್ಕೆ ವ್ಯತಿರಿಕ್ತವಾಗಿ, ಮಿನಿ ಕ್ಯಾಬ್ ಅನ್ನು ಬುಕ್ ಮಾಡಿದರೆ ಅದೇ ಸವಾರಿ 535 ರೂ. ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ, ಓಲಾ ಕ್ಯಾಬ್ಸ್ ಮೂಲಕ ರೈಡ್ ಬುಕ್ ಮಾಡುವಾಗ ಮಿನಿ  ಅಗ್ಗದ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರೈಮ್ ಪ್ಲಸ್ ನಲ್ಲಿ ಈ ಬೆಲೆಯಲ್ಲಿ ಕಂಡು ಬರುವ ವ್ಯತ್ಯಾಸದ ಹಿಂದಿನ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

suddiyaana