ವಿಶ್ವದ ಮೊದಲ ಕೋವಿಡ್ ಇಂಟ್ರಾನಾಸಲ್ ಲಸಿಕೆ ‘ಇನ್ಕೋವ್ಯಾಕ್’ ಬಿಡುಗಡೆ
ದೆಹಲಿ: ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ಬಿಡುಗಡೆಯಾಗಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇವತ್ತು ವಿಶ್ವದ ಮೊದಲ ಕೋವಿಡ್ ಇಂಟ್ರಾನಾಸಲ್ ಲಸಿಕೆ ಇನ್ಕೋವ್ಯಾಕ್ ಬಿಡುಗಡೆ ಮಾಡಿದ್ದಾರೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆ ಪ್ರತಿ ಡೋಸ್‌ಗೆ ರೂಪಾಯಿ 325ಕ್ಕೆ ಲಭ್ಯವಿದೆ. ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇದರ ದರ 800 ರೂಪಾಯಿಗಳಷ್ಟಿದೆ.
ಇದನ್ನೂ ಓದಿ: ಮತ್ತೆ ಜಗತ್ತಿನ ಸರ್ವನಾಶದ ಎಚ್ಚರಿಕೆ ನೀಡಿದ ‘ಡೂಮ್ಸ್ ಡೇ ಕ್ಲಾಕ್’..!
ಭಾರತ್ ಬಯೋಟೆಕ್ ಡಿಸೆಂಬರ್ 2022 ರಲ್ಲಿ, ಪ್ರಾಥಮಿಕ 2-ಡೋಸ್ ಶೆಡ್ಯೂಲ್ ಮತ್ತು ಭಿನ್ನಜಾತಿಯ ಬೂಸ್ಟರ್ ಡೋಸ್‌ಗೆ ಅನುಮೋದನೆಯನ್ನು ಪಡೆದುಕೊಂಡಿದೆ. ಅದಕ್ಕೂ ಮೊದಲು, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಸಂದರ್ಭಗಳಲ್ಲಿ ಇಂಟ್ರಾನಾಸಲ್ ಲಸಿಕೆಯ ನಿರ್ಬಂಧಿತ ಬಳಕೆಯನ್ನು ಅನುಮೋದಿಸಿತ್ತು.