ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಕೊನೇ ಆಸೆ ಈಡೇರಿಸಿದ ಕುಟುಂಬ – ತಿಮ್ಮಪ್ಪನ ಸನ್ನಿಧಿಗೆ ಸೇರಿತು ದೇಣಿಗೆ

ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಕೊನೇ ಆಸೆ ಈಡೇರಿಸಿದ ಕುಟುಂಬ – ತಿಮ್ಮಪ್ಪನ ಸನ್ನಿಧಿಗೆ ಸೇರಿತು ದೇಣಿಗೆ

ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಈಗ ನಮ್ಮೊಂದಿಗಿಲ್ಲ. ಆದರೆ, ಅವರ ಸುಮಧುರ ಗೀತೆಗಳು ನಮ್ಮೊಂದಿಗೆ ಇಂದಿಗೂ ಜೀವಂತವಾಗಿವೆ. ಲತಾ ಮಂಗೇಶ್ಕರ್ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಲತಾ ಮಂಗೇಶ್ಕರ್ ವಿಧಿವಶರಾಗಿ ಒಂದು ವರ್ಷ ಕಳೆಿದಿದೆ. ಇದೀಗ ಅವರ ಕೊನೆಯ ಆಸೆಯನ್ನು ಕುಟುಂಬದವರು ನೆರವೇರಿಸಿದ್ದಾರೆ. ಈ ವಿಚಾರವನ್ನು ಕುಟುಂಬದವರೇ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ 17 ಸ್ಪರ್ಧಿಗಳ ಆಟ – ದೊಡ್ಮನೆ ಎಂಟ್ರಿ ದಿನವೇ ಸ್ಪರ್ಧಿಗಳಿಗೆ ಬಿಗ್ ಟ್ವಿಸ್ಟ್

ಲತಾ ಮಂಗೇಶ್ಕರ್ ಅವರು ಸಾಯುವುದಕ್ಕೂ ಮೊದಲು ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಲಕ್ಷ ರೂಪಾಯಿ ದೇಣಿಗೆ ನೀಡಲು ಯೋಜಿಸಿದ್ದರು. ಅದನ್ನು ಅವರು ವಿಲ್‌ನಲ್ಲೂ ಬರೆದಿಟ್ಟಿದ್ದರು. ಅವರ ಆಸೆಯಂತೆ ಲತಾ ಮಂಗೇಶ್ಕರ್ ಅವರ ಕುಟುಂಬವು ತಿರುಪತಿ ದೇವಸ್ಥಾನಕ್ಕೆ ಲತಾ ಪರವಾಗಿ 10 ಲಕ್ಷ ರೂ. ನೀಡಿದೆ. ಲತಾ ಮಂಗೇಶ್ಕರ್ ಅವರು ವೆಂಕಟೇಶ್ವರ ಸ್ವಾಮಿಯ ಭಕ್ತೆಯಾಗಿದ್ದರು. ಈ ಹಿಂದೆ ಅವರು ವೆಂಕಟೇಶ್ವರ ಸ್ವಾಮಿಗಾಗಿ ಅನೇಕ ಹಾಡುಗಳನ್ನು ಹಾಡಿದ್ದರು. ಇದೀಗ ಅವರ ಕುಟುಂಬ ಸದಸ್ಯರು ಟಿಟಿಡಿಗೆ ಪತ್ರ ಬರೆದಿದ್ದು, ಲತಾ ಮಂಗೇಶ್ಕರ್ ಅವರ ಪರವಾಗಿ 10 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದೇವೆ ಎಂದು ಹೇಳಿದೆ. ಲತಾ ಮಂಗೇಶ್ಕರ್ ಅವರು ಸಾಯುವುದಕ್ಕೂ ಮೊದಲು ಒಂದಷ್ಟು ಭಜನೆಗಳನ್ನು ರೆಕಾರ್ಡ್ ಮಾಡಿಟ್ಟಿರುವ ವಿಚಾರ ಇತ್ತೀಚೆಗೆ ರಿವೀಲ್ ಆಯಿತು. ರಾಮ ಮಂದಿರ ಉದ್ಘಾಟನೆ ವೇಳೆ ಈ ಭಜನೆಗಳು ಪ್ರಸಾರ ಕಾಣಬೇಕು ಎಂಬುದು ಅವರ ಕೊನೆಯ ಆಸೆ ಆಗಿತ್ತು. 2024ರ ಜನವರಿ ವೇಳೆಗೆ ರಾಮ ಮಂದಿರ ಉದ್ಘಾಟನೆ ಆಗಲಿದೆ. ಆ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ ಭಜನೆಗಳು ಪ್ರಸಾರ ಕಾಣುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ. ಲತಾ ಮಂಗೇಶ್ಕರ್ ಅವರು 2022ರ ಫೆಬ್ರವರಿ ತಿಂಗಳಲ್ಲಿ ವಿಧಿವಶರಾಗಿದ್ದರು.

Sulekha