2 ಸಾವಿರ ಮುಖಬೆಲೆಯ ನೋಟುಗಳ ವಿನಿಮಯದ ಗಡುವು ಅಕ್ಟೋಬರ್ 7ರವರೆಗೆ ವಿಸ್ತರಣೆ ಮಾಡಿದ ಆರ್ ಬಿಐ

2 ಸಾವಿರ ಮುಖಬೆಲೆಯ ನೋಟುಗಳ ವಿನಿಮಯದ ಗಡುವು ಅಕ್ಟೋಬರ್ 7ರವರೆಗೆ ವಿಸ್ತರಣೆ ಮಾಡಿದ ಆರ್ ಬಿಐ

ಅಪರೂಪದಲ್ಲಿ ಅಪರೂಪವಾಗಿರುವ 2 ಸಾವಿರ ರೂಪಾಯಿ ನೋಟುಗಳು ಈಗಾಗಲೇ ವಾಪಸ್ ರಿಸರ್ವ್ ಬ್ಯಾಂಕ್ ಸೇರುತ್ತಿದೆ. ನೋಟಿನ ಚಲಾವಣೆ ಸ್ಥಗಿತವಾದ ಬಳಿಕ ನೋಟುಗಳನ್ನ ಆರ್ ಬಿಐ ಮರಳಿ ಪಡೆಯುತ್ತಿದೆ. 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ಮರಳಿಸಲು ಈ ಮುಂಚೆ ನೀಡಿದ್ದ ಸೆ 30ರ ಕೊನೆಯ ದಿನಾಂಕವನ್ನು ಆರ್‌ಬಿಐ ಒಂದು ವಾರದ ಮಟ್ಟಿಗೆ ವಿಸ್ತರಣೆ ಮಾಡಿದೆ. ಅಕ್ಟೋಬರ್ 7ರವರೆಗೂ 2 ಸಾವಿರ ರೂ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಸಿಕೊಳ್ಳಲು ಅವಕಾಶ ಇದೆ ಎಂದು ಆರ್‌ಬಿಐ ತಿಳಿಸಿದೆ.

ಇದನ್ನೂ ಓದಿ : ಅಕ್ಟೋಬರ್ ನಲ್ಲೂ 5 ಕೆಜಿ ಅಕ್ಕಿ ಬದಲಿಗೆ ಹಣ – ಸೆಪ್ಟೆಂಬರ್ ತಿಂಗಳ ದುಡ್ಡು ಇನ್ನೂ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ 

ಚಲಾವಣೆಯಿಂದ ಹಿಂಪಡೆಯಲಾಗಿರುವ 2,000 ರೂ ಮುಖಬೆಲೆಯ ನೋಟುಗಳನ್ನು ಮರಳಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್​ 7ವರೆಗೆ ಅವಕಾಶ ನೀಡಲಾಗುವುದು ಎಂದು ಆರ್​​ಬಿಐ ತಿಳಿಸಿದೆ.  ಅಕ್ಟೋಬರ್ 8ರ ನಂತರ 2 ಸಾವಿರ ರೂ ನೋಟುಗಳನ್ನು ಸ್ವೀಕರಿಸಿ ಅವುಗಳನ್ನು ಗ್ರಾಹಕರ ಖಾತೆಗೆ ಜಮೆ ಮಾಡುವುದು ಅಥವಾ ಬೇರೆ ಮುಖಬೆಲೆ ನೋಟುಗಳ ಜತೆ ವಿನಿಮಯ ಮಾಡುವುದನ್ನು ಬ್ಯಾಂಕುಗಳು ನಿಲ್ಲಿಸಲಿವೆ. ಆದರೆ ಜನರು ಆರ್‌ಬಿಐನ 19 ಶಾಖೆಗಳಲ್ಲಿ 2 ಸಾವಿರ ರೂ ನೋಟುಗಳನ್ನು ಆನಂತರವೂ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಒಂದು ಸಲಕ್ಕೆ ಒಟ್ಟು 20 ಸಾವಿರ ರೂ ಮೊತ್ತದ ಬ್ಯಾಂಕ್ ನೋಟುಗಳನ್ನು ಜಮೆ ಮಾಡಲು ಮಿತಿ ಹಾಕಲಾಗಿದೆ. ಇದಕ್ಕೆ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.

ಹಾಗೆಯೇ ಭಾರತೀಯ ಅಂಚೆಯಿಂದ ಆರ್‌ಬಿಐನ ‘ಇಷ್ಯೂ ಆಫೀಸಸ್‌’ಗಳಿಗೆ ಅಂಚೆ ಮುಖಾಂತರವೂ ನೋಟುಗಳನ್ನು ಕಳುಹಿಸಬಹುದಾಗಿದೆ. ಆರ್‌ಬಿಐನ ಇಷ್ಯೂ ಕಚೇರಿಗಳಿಗೆ ಅಂಚೆ ಮೂಲಕ ಕಳುಹಿಸಿದ ನೋಟುಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ನೋಟು ಅಪನಗದೀಕರಣದ ಬಳಿಕ 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಪರಿಚಯಿಸಿತ್ತು. ಆದರೆ ಕ್ರಮೇಣ ಅದರ ಚಲಾವಣೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಆರಂಭಿಸಿತ್ತು. ಮೇ 19ರಂದು ಹೊರಡಿಸಿದ ಸುತ್ತೋಲೆ ಪ್ರಕಾರ ಆರ್‌ಬಿಐ ಚಲಾವಣೆಯಲ್ಲಿ ಇದ್ದ 3.56 ಲಕ್ಷ ಕೋಟಿ ರೂ ಮೊತ್ತದಲ್ಲಿ 3.42 ಲಕ್ಷ ಕೋಟಿ ರೂ ಮೊತ್ತದ 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಮರಳಿ ಪಡೆದಿತ್ತು. ಇದರಿಂದ ಸೆಪ್ಟೆಂಬರ್ 29ರವರೆಗೂ ಕೇವಲ 0.14 ಲಕ್ಷ ಕೋಟಿ ರೂ ಮೊತ್ತದ 2 ಸಾವಿರ ರೂ ಚಲಾವಣೆಯಲ್ಲಿ ಬಾಕಿ ಉಳಿದಿತ್ತು.

Shantha Kumari